Joe Root Century: ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ 26 ನೇ ಟೆಸ್ಟ್ ಶತಕದೊಂದಿಗೆ 10000 ರನ್‌ ಪೂರೈಸಿದ ಜೋ ರೂಟ್

ENG vs NZ: ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಇಂಗ್ಲೆಂಡ್‌ನ ಎರಡನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಜೋ ರೂಟ್ ಪಾತ್ರತಾಗಿದ್ದಾರೆ.

Joe Root Century: ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ 26 ನೇ ಟೆಸ್ಟ್ ಶತಕದೊಂದಿಗೆ 10000 ರನ್‌ ಪೂರೈಸಿದ ಜೋ ರೂಟ್
ಜೋ ರೂಟ್
Follow us
| Updated By: ಪೃಥ್ವಿಶಂಕರ

Updated on:Jun 05, 2022 | 5:26 PM

ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ (Joe Root) ಟೆಸ್ಟ್ ಕ್ರಿಕೆಟ್‌ನಲ್ಲಿ 26ನೇ ಶತಕ ಪೂರೈಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನ (Lord’s Test against New Zealand) ನಾಲ್ಕನೇ ದಿನದ ಮೊದಲ ಸೆಷನ್‌ನಲ್ಲಿ, ರೂಟ್ ಶತಕವನ್ನು ಪೂರ್ಣಗೊಳಿಸಲು 23 ರನ್‌ಗಳ ಅಗತ್ಯವಿತ್ತು, ಅದನ್ನು ಅವರು ಒಂದು ಗಂಟೆಯೊಳಗೆ ಮಾಡಿ ತಮ್ಮ ಮತ್ತೊಂದು ಅದ್ಭುತ ಶತಕವನ್ನು ಪೂರ್ಣಗೊಳಿಸಿದರು. ಅಷ್ಟೇ ಅಲ್ಲ, ಈ 23 ರನ್‌ಗಳ ಜೊತೆಗೆ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದರು. ಇದರೊಂದಿಗೆ ಇಂಗ್ಲೆಂಡ್‌ನಿಂದ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರಿಗಿಂತ ಮೊದಲು, ಈ ಅದ್ಭುತ ದಾಖಲೆಯನ್ನು ಮಾಜಿ ನಾಯಕ ಮತ್ತು ಅನುಭವಿ ಆರಂಭಿಕ ಆಟಗಾರ ಅಲಸ್ಟೈರ್ ಕುಕ್ ಮಾಡಿದ್ದರು.

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ಮೊದಲ ಟೆಸ್ಟ್ ಆಡುತ್ತಿರುವ ರೂಟ್ ಅವರು ತಮ್ಮ ನಾಯಕತ್ವದ ಅವಧಿಯಲ್ಲಿ ಮಾಡುತ್ತಿದ್ದ ಅದೇ ಬ್ಯಾಟಿಂಗ್‌ ಮುಂದುವರೆಸಿದರು. ಈ ಬಾರಿಯೂ ಅವರು ತಮ್ಮ ತಂಡದ ಅತಿ ಹೆಚ್ಚು ಸ್ಕೋರರ್ ಎಂದು ಸಾಬೀತುಪಡಿಸಿದರು. ರೂಟ್ 170 ಎಸೆತಗಳಲ್ಲಿ 115 ರನ್ ಗಳಿಸಿ ಅಜೇಯರಾಗಿ ಮರಳಿದರು. ಅವರ ಬ್ಯಾಟ್‌ನಿಂದ ಫೋರ್‌ಗಳ ನೆರವಿನಿಂದ ಐದು ವಿಕೆಟ್‌ಗಳ ಜಯದೊಂದಿಗೆ ಇಂಗ್ಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮೂರನೇ ದಿನದಲ್ಲಿ ಆರಂಭವಾದ ಬೆನ್ ಫೋಕ್ಸ್ ಜೊತೆಗಿನ ಜೊತೆಯಾಟವನ್ನು ರೂಟ್ ಮುಂದುವರಿಸಿದರು. ಇಬ್ಬರೂ ಅಜೇಯ 120 ರನ್​ಗಳ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್​ಗೆ ಸ್ಮರಣೀಯ ಜಯ ತಂದುಕೊಟ್ಟರು. ಫೋಕ್ಸ್ 92 ಎಸೆತಗಳನ್ನು ಎದುರಿಸಿ ಮೂರು ಬೌಂಡರಿಗಳನ್ನು ಬಾರಿಸಿದರು.

ಇದನ್ನೂ ಓದಿ:ENG Vs NZ: ಕಿವೀಸ್ ಎದುರು ಮಂಕಾದ ಆಂಗ್ಲರು; 141 ರನ್​ಗಳಿಗೆ ಇಂಗ್ಲೆಂಡ್ ಆಲ್ ​ಔಟ್

ಇದನ್ನೂ ಓದಿ
Image
Joe Root Century: ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ 26 ನೇ ಟೆಸ್ಟ್ ಶತಕದೊಂದಿಗೆ 10000 ರನ್‌ ಪೂರೈಸಿದ ಜೋ ರೂಟ್
Image
ENG vs NZ, 1st Test: ನ್ಯೂಜಿಲೆಂಡ್​ಗೆ ಮಿಚೆಲ್-ಬ್ಲಂಡೆಲ್ ಆಸರೆ: ಇಂಗ್ಲೆಂಡ್​ಗೆ ತಿರುಗೇಟು ನೀಡುತ್ತಿರುವ ಕೇನ್ ಪಡೆ

ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಮೊದಲ ಶತಕ

ಪಂದ್ಯದ ನಾಲ್ಕನೇ ದಿನದಂದು ಇಂಗ್ಲೆಂಡ್‌ಗೆ 61 ರನ್‌ಗಳ ಅಗತ್ಯವಿತ್ತು, ಆದರೆ ರೂಟ್‌ಗೆ ಶತಕ ಮತ್ತು 10,000 ರನ್ ಪೂರೈಸಲು ಕೇವಲ 23 ರನ್‌ಗಳು ಬೇಕಾಗಿದ್ದವು. ರೂಟ್ ಬೆನ್ ಫಾಕ್ಸ್ ಜೊತೆಗಿನ ಪಾಲುದಾರಿಕೆಯನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದರೆ ಈ ಅವಧಿಯಲ್ಲಿ ಸ್ಮರಣೀಯ ಶತಕವನ್ನು ಪೂರ್ಣಗೊಳಿಸಿದರು. ಈಗಾಗಲೇ ಲಾರ್ಡ್ಸ್​ನಲ್ಲಿ ಹಲವು ಶತಕಗಳನ್ನು ಬಾರಿಸಿರುವ ರೂಟ್ 157 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ ಶತಕ ದಾಖಲಿಸಿದರು. ಇದು ಲಾರ್ಡ್ಸ್‌ನಲ್ಲಿ 17ನೇ ಟೆಸ್ಟ್‌ನಲ್ಲಿ ಅವರ ಐದನೇ ಶತಕವಾಗಿದೆ. ಇದಾದ ಬಳಿಕ ಟಿಮ್ ಸೌಥಿ ಅವರ ಓವರ್‌ನಲ್ಲಿ 3 ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಕುಕ್ ದಾಖಲೆ ಸರಿಗಟ್ಟಿದ ರೂಟ್

ಇದಲ್ಲದೆ, ರೂಟ್ 218 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 10,000 ರನ್ ಪೂರೈಸಿದರು. ಅವರಿಗಿಂತ ಮೊದಲು ಕುಕ್ ಮಾತ್ರ ಇಂಗ್ಲೆಂಡ್ ಪರ 10,000 ಟೆಸ್ಟ್ ರನ್ ಗಳಿಸಿದ್ದರು. ವಿಶೇಷವೆಂದರೆ ರೂಟ್ ಕೂಡ ಕುಕ್ ದಾಖಲೆಯನ್ನು ಸರಿಗಟ್ಟಿದರು. 31 ವರ್ಷ ಮತ್ತು 157 ದಿನಗಳಲ್ಲಿ 10,000 ರನ್ ಪೂರೈಸುವ ಮೂಲಕ ಕುಕ್ ಕಿರಿಯ ವಯಸ್ಸಿನಲ್ಲಿ 10,000 ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದರು. ರೂಟ್ ಕೂಡ ನಿಖರವಾಗಿ 31 ವರ್ಷ 157 ದಿನಗಳಲ್ಲಿ ಈ ಸಾಧನೆ ಮಾಡುವ ಮೂಲಕ ಕುಕ್ ಅವರನ್ನು ಸರಿಗಟ್ಟಿದರು.

Published On - 4:41 pm, Sun, 5 June 22

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು