Ashes: ಆಸ್ಟ್ರೇಲಿಯಾ ನಮ್ಮನ್ನು ಹೀನಾಯವಾಗಿ ಸೋಲಿಸಿತು; ಸೋಲಿನ ಬಳಿಕ ಆಂಗ್ಲ ನಾಯಕ ರೂಟ್ ಹೇಳಿದ್ದಿದು

Ashes: ಇದು ನಮಗೆ ನಿರಾಶಾದಾಯಕ ಪ್ರವಾಸವಾಗಿತ್ತು. ನಾವು ಕಲಿಯುತ್ತಲೇ ಇರಬೇಕು. ನಾವು ಇಲ್ಲಿಂದ ಹೋಗಿ ಅದೇ ತಪ್ಪುಗಳನ್ನು ಮಾಡಲು ಸಾಧ್ಯವಿಲ್ಲ. ನಾವು ನಮ್ಮ ಬೌಲರ್‌ಗಳಿಗೆ ಹೋರಾಡಲು ರನ್‌ಗಳನ್ನು ನೀಡಲಿಲ್ಲ.

Ashes: ಆಸ್ಟ್ರೇಲಿಯಾ ನಮ್ಮನ್ನು ಹೀನಾಯವಾಗಿ ಸೋಲಿಸಿತು; ಸೋಲಿನ ಬಳಿಕ ಆಂಗ್ಲ ನಾಯಕ ರೂಟ್ ಹೇಳಿದ್ದಿದು
ಜೋ ರೂಟ್
Follow us
TV9 Web
| Updated By: ಪೃಥ್ವಿಶಂಕರ

Updated on: Jan 16, 2022 | 9:11 PM

ಇಂಗ್ಲೆಂಡ್‌ನ ಆಶಸ್ ಸರಣಿಯು ಹೋಬರ್ಟ್ ಟೆಸ್ಟ್‌ನಲ್ಲಿ 146 ರನ್‌ಗಳ ಸೋಲಿನೊಂದಿಗೆ ನೋವಿನ ವಿದಾಯ ಹೇಳಿದೆ. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಸರಣಿಯುದ್ದಕ್ಕೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ನಿರಾಸೆ ಅನುಭವಿಸಿದರು. ಓಪನಿಂಗ್ ಕೆಲಸ ಮಾಡಲಿಲ್ಲ, ಮಧ್ಯಮ ಕ್ರಮಾಂಕವೂ ಕೆಲಸ ಮಾಡಲಿಲ್ಲ. ನಾಯಕ ಜೋ ರೂಟ್ ಸ್ವತಃ ಬ್ಯಾಟ್‌ನಿಂದ ರನ್ ಮಾಡಲಿಲ್ಲ. ಬೌಲರ್‌ಗಳು ಆಸ್ಟ್ರೇಲಿಯ ವಿರುದ್ಧ ಸೆಣಸಾಡುವಷ್ಟು ಸ್ಕೋರ್ ಪಡೆಯಲಿಲ್ಲ. ಇದರಿಂದಾಗಿ ಇಂಗ್ಲೆಂಡ್ ತಂಡ ಆಶಸ್ ಸರಣಿಯನ್ನು 0-4 ಅಂತರದಲ್ಲಿ ಕಳೆದುಕೊಂಡಿತ್ತು. ಆಶಸ್ ಸರಣಿಯ ಸೋಲಿನ ನಂತರ ನಾಯಕ ಜೋ ರೂಟ್ ತುಂಬಾ ನಿರಾಶೆಗೊಂಡಿದ್ದಾರೆ.

ಈ ಆಶಸ್ ಪ್ರವಾಸವು ತನಗೆ ತುಂಬಾ ಕೆಟ್ಟದಾಗಿದೆ ಎಂದು ಜೋ ರೂಟ್ ಒಪ್ಪಿಕೊಂಡರು. ಈ ಬಗ್ಗೆ ಮಾತನಾಡಿದ ಅವರು ಆಟಗಾರರು ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದರು. ಜೋ ರೂಟ್ ವಿಶೇಷವಾಗಿ ಈ ಸೋಲಿಗೆ ಬ್ಯಾಟ್ಸ್‌ಮನ್‌ಗಳ ಮೇಲೆ ಆರೋಪ ಮಾಡಿದರು. ಆದರೆ, ಆಟಗಾರರು ತಮ್ಮ ಪ್ರದರ್ಶನದಿಂದ ಪಾಠ ಕಲಿತು ಮುಂಬರುವ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಸೋಲಿನ ನಂತರ ಜೋ ರೂಟ್ ಹೇಳಿದ್ದೇನು? ಆಶಸ್ ಸರಣಿಯನ್ನು ಹೀನಾಯವಾಗಿ ಕಳೆದುಕೊಂಡ ನಂತರ ಜೋ ರೂಟ್, ‘ಇದು ನಮಗೆ ನಿರಾಶಾದಾಯಕ ಪ್ರವಾಸವಾಗಿತ್ತು. ನಾವು ಕಲಿಯುತ್ತಲೇ ಇರಬೇಕು. ನಾವು ಇಲ್ಲಿಂದ ಹೋಗಿ ಅದೇ ತಪ್ಪುಗಳನ್ನು ಮಾಡಲು ಸಾಧ್ಯವಿಲ್ಲ. ನಾವು ನಮ್ಮ ಬೌಲರ್‌ಗಳಿಗೆ ಹೋರಾಡಲು ರನ್‌ಗಳನ್ನು ನೀಡಲಿಲ್ಲ. ಆಸ್ಟ್ರೇಲಿಯಾ ನಮ್ಮನ್ನು ಹೀನಾಯವಾಗಿ ಸೋಲಿಸಿತು. ಕೆಲವೊಮ್ಮೆ ಎದುರಾಳಿ ತಂಡವು ನಿಮ್ಮನ್ನು ಕೆಟ್ಟದಾಗಿ ಸೋಲಿಸುತ್ತದೆ ಎಂದು ನೀವು ನಂಬಬೇಕು ಎಂದಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ಗೆಲುವಿಗಾಗಿ ಅಭಿನಂದನೆಗಳನ್ನು ಸಹ ಸಲ್ಲಿಸಿದ್ದಾರೆ.

ಇಂಗ್ಲೆಂಡ್ ಬ್ಯಾಟಿಂಗ್ ಹೀನಾಯವಾಗಿತ್ತು ಆಶಸ್ ಸರಣಿಯಲ್ಲಿ, ಒಬ್ಬ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಮಾತ್ರ 40 ರ ಸರಾಸರಿಯಲ್ಲಿ ರನ್ ಗಳಿಸಲು ಶಕ್ತರಾದರು. ನಾಯಕ ಜೋ ರೂಟ್ ಅವರ ಸರಾಸರಿ ಕೂಡ 32 ಆಗಿತ್ತು ಮತ್ತು ಇತರ ಎಲ್ಲಾ ಬ್ಯಾಟ್ಸ್‌ಮನ್‌ಗಳು 30 ರ ಸರಾಸರಿಯಲ್ಲಿ ರನ್ ಗಳಿಸಲು ಸಹ ಸಾಧ್ಯವಾಗಲಿಲ್ಲ. ಜಾನಿ ಬೈರ್‌ಸ್ಟೋವ್ 2 ಟೆಸ್ಟ್‌ಗಳಲ್ಲಿ 194 ರನ್ ಗಳಿಸಿದರು. ಜೋ ರೂಟ್ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಕೇವಲ 322 ರನ್ ಗಳಿಸಿದರು. ಡಿಜೆ ಮಲನ್ 24.40ರ ಸರಾಸರಿಯಲ್ಲಿ 244 ರನ್ ಗಳಿಸಿದರು. ಬೆನ್ ಸ್ಟೋಕ್ಸ್ ಕೂಡ 5 ಟೆಸ್ಟ್‌ಗಳಲ್ಲಿ 23.60 ಸರಾಸರಿಯಲ್ಲಿ 236 ರನ್ ಗಳಿಸಿ ನಿರಾಸೆ ಮೂಡಿಸಿದರು.

ಇಂಗ್ಲೆಂಡ್‌ನ ದೌರ್ಬಲ್ಯವೆಂದರೆ ಅದರ ಆರಂಭಿಕರು. ರೋರಿ ಬರ್ನ್ಸ್ 3 ಟೆಸ್ಟ್‌ಗಳಲ್ಲಿ ಕೇವಲ 12.75 ಸರಾಸರಿಯಲ್ಲಿ 77 ರನ್ ಗಳಿಸಿದರು. ಹಸೀಬ್ ಹಮೀದ್ 4 ಟೆಸ್ಟ್‌ಗಳಲ್ಲಿ ಕೇವಲ 10 ಸರಾಸರಿಯಲ್ಲಿ 80 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ, ಒಲಿ ಪೋಪ್ 3 ಟೆಸ್ಟ್‌ಗಳಲ್ಲಿ 11.16 ಸರಾಸರಿಯಲ್ಲಿ 67 ರನ್ ಗಳಿಸಿದರು. ಜೋಸ್ ಬಟ್ಲರ್ 4 ಟೆಸ್ಟ್ ಪಂದ್ಯಗಳನ್ನು ಆಡಿ ಕೇವಲ 107 ರನ್ ಗಳಿಸಿದರು. ಇಡೀ ಆಶಸ್ ಸರಣಿಯಲ್ಲಿ ಇಂಗ್ಲೆಂಡ್‌ನ ಬ್ಯಾಟಿಂಗ್ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ, ಇದರಿಂದಾಗಿ ತಂಡವು ಹೀನಾಯ ಸೋಲನ್ನು ಎದುರಿಸಬೇಕಾಯಿತು.

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ