ಟೀಮ್ ಇಂಡಿಯಾವನ್ನು ಮೋಸದಾಟದ ಆರೋಪಕ್ಕೆ ಗುರಿ ಮಾಡಿದ ಕನ್ನಡಿಗನ ನಿರ್ಧಾರ..!

India vs England, 4th T20I: ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಹರ್ಷಿತ್ ರಾಣಾ 4 ಓವರ್​ಗಳಲ್ಲಿ 33 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ವಿಶೇಷ ಎಂದರೆ ಹರ್ಷಿತ್ ರಾಣಾ ಮೊದಲಿಗೆ ಭಾರತದ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದಿರಲಿಲ್ಲ. ಆ ಬಳಿಕ ಶಿವಂ ದುಬೆ ಬದಲಿಗೆ ಕನ್ಕಶನ್ ಸಬ್ ಆಗಿ ಕಣಕ್ಕಿಳಿದಿದ್ದರು. ಇದುವೇ ಈಗ ವಿವಾದಕ್ಕೆ ಕಾರಣವಾಗಿದೆ.

ಟೀಮ್ ಇಂಡಿಯಾವನ್ನು ಮೋಸದಾಟದ ಆರೋಪಕ್ಕೆ ಗುರಿ ಮಾಡಿದ ಕನ್ನಡಿಗನ ನಿರ್ಧಾರ..!
Ind Vs Eng
Follow us
ಝಾಹಿರ್ ಯೂಸುಫ್
|

Updated on: Feb 01, 2025 | 11:09 AM

ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟಿ20 ಪಂದ್ಯದ ಮುಕ್ತಾಯದ ಬೆನ್ನಲ್ಲೇ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಈ ವಿವಾದಕ್ಕೆ ಕಾರಣವಾಗಿದ್ದು ಮ್ಯಾಚ್​ ರೆಫರಿ ಜಾವಗಲ್ ಶ್ರೀನಾಥ್ ತೆಗೆದುಕೊಂಡ ಆ ಒಂದು ನಿರ್ಧಾರ. ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ (53) ಹಾಗೂ ಶಿವಂ ದುಬೆ (53) ಅರ್ಧಶತಕ ಬಾರಿಸಿ ಮಿಂಚಿದ್ದರು. ಇದರ ನಡುವೆ 20ನೇ ಓವರ್​ನ 5ನೇ ಎಸೆತವು ಶಿವಂ ದುಬೆ ಅವರ ಹೆಲ್ಮೆಟ್​ಗೆ ಬಡಿದಿತ್ತು. ಇದಾಗ್ಯೂ ಅಂತಿಮ ಎಸೆತವನ್ನು ಎದುರಿಸಿ ದುಬೆ ಇನಿಂಗ್ಸ್ ಅಂತ್ಯಗೊಳಿಸಿದ್ದರು.

ಇನ್ನು ಟೀಮ್ ಇಂಡಿಯಾ ಫೀಲ್ಡಿಂಗ್ ವೇಳೆ ಶಿವಂ ದುಬೆ ಕೆಲ ಓವರ್​ಗಳವರೆಗೆ ಮಾತ್ರ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಚೆಂಡು ಬಡಿದ ನೋವಿನಿಂದಾಗಿ ಅರ್ಧದಲ್ಲೇ ಮೈದಾನ ತೊರೆದರು. ದುಬೆ ಹೊರಗುಳಿದ ಕಾರಣ ಭಾರತ ತಂಡವು ಕನ್ಕಶನ್ ಆಯ್ಕೆಯ ಮೂಲಕ ಬದಲಿ ಆಟಗಾರನನ್ನು ಕಣಕ್ಕಿಳಿಸಲು ನಿರ್ಧರಿಸಿತು.

ಅದರಂತೆ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಅವರಿಗೆ ಮನವಿ ಸಲ್ಲಿಸಿ ಶಿವಂ ದುಬೆ ಬದಲಿಗೆ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಿತು. ಆದರೆ ಹೀಗೆ ಕಣಕ್ಕಿಳಿಸುವ ಮುನ್ನ ಮ್ಯಾಚ್ ರೆಫರಿ ತೆಗೆದುಕೊಂಡ ತೀರ್ಮಾನವೇ ಈಗ ವಿವಾದಕ್ಕೆ ಕಾರಣವಾಗಿದೆ.

ಐಸಿಸಿ ನಿಯಮಗಳ ಪ್ರಕಾರ ಕನ್ಕಶನ್ ಸಬ್​ ಆಗಿ ಕಣಕ್ಕಿಳಿಯುವ ಆಟಗಾರ ಲೈಕ್ ಟು ಲೈಕ್ ಪ್ಲೇಯರ್ ಆಗಿರಬೇಕು. ಅಂದರೆ ಇಲ್ಲಿ ಬೌಲರ್​ ಬದಲಿಗೆ ಬೌಲರ್​ನನ್ನೇ ಕಣಕ್ಕಿಳಿಸಬೇಕು. ಅಥವಾ ಆಲ್​ರೌಂಡರ್ ಬದಲಿಗೆ ಆಲ್​ರೌಂಡರ್​ನನ್ನು ಆಡಿಸಬೇಕೆಂಬ ನಿಯಮವಿದೆ.

ಆದರೆ ಅದಾಗಲೇ ಶಿವಂ ದುಬೆ ಬ್ಯಾಟಿಂಗ್ ಮಾಡಿರುವುದರಿಂದ ಮ್ಯಾಚ್ ರೆಫರಿ ಅವರ ಮುಂದಿನ ಪಾತ್ರವೇನು ಎಂಬುದನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಇಲ್ಲಿ ದ್ವಿತೀಯ ಇನಿಂಗ್ಸ್​ನಲ್ಲಿ ದುಬೆ ಬೌಲರ್​ ಆಗಿ ಕಾಣಿಸಿಕೊಳ್ಳಬೇಕಿತ್ತು. ಹೀಗಾಗಿ ಮ್ಯಾಚ್ ರೆಫರಿ ಬೌಲರ್​ ಆಗಿ ಹರ್ಷಿತ್ ರಾಣಾಗೆ ಅವಕಾಶ ನೀಡಿದ್ದಾರೆ.

ಇದು ಐಸಿಸಿ ನಿಯಮಗಳ ವಿರುದ್ಧ ಎಂಬ ವಾದವನ್ನು ಇದೀಗ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಹಾಗೂ ಮಾಜಿ ಆಟಗಾರರು ಮುಂದಿಟ್ಟಿದ್ದಾರೆ. ಇಲ್ಲಿ ಮುಖ್ಯವಾಗಿ ಮೀಡಿಯಂ ಫಾಸ್ಟ್ ಬೌಲರ್ ಆಗಿರುವ ಶಿವಂ ದುಬೆ ಬದಲಿಗೆ ಪರಿಪೂರ್ಣ ವೇಗಿಯಾಗಿ ಗುರುತಿಸಿಕೊಂಡಿರುವ ಹರ್ಷಿತ್ ರಾಣಾಗೆ ಅವಕಾಶ ನೀಡಿದ್ದು ಹೇಗೆ ಎಂಬುದೇ ಪ್ರಶ್ನೆ.

ಶಿವಂ ದುಬೆ ಆಲ್​ರೌಂಡರ್. ಅವರ ಬದಲಿಗೆ ಕನ್ಕಶನ್ ಸಬ್ ಆಗಿ ಆಲ್​ರೌಂಡರ್​ನನ್ನು ಕಣಕ್ಕಿಳಿಸುವುದು ಸರಿಯಾದ ಆಯ್ಕೆ. ಆದರೆ ಮ್ಯಾಚ್ ರೆಫರಿ ಅದೇಗೆ ಆಲ್​ರೌಂಡರ್​ ಬದಲಿಗೆ ಬೌಲರ್​ಗೆ ಅವಕಾಶ ನೀಡಿದ್ದಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಪ್ರಶ್ನಿಸಿದ್ದಾರೆ.

ಮ್ಯಾಚ್ ರೆಫರಿಯ ಇಂತಹದೊಂದು ನಿರ್ಧಾರಕ್ಕೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಅಲೆಸ್ಟರ್ ಕುಕ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶಿವಂ ದುಬೆ ಬದಲಿಗೆ ಹರ್ಷಿತ್ ರಾಣಾ ಅವರನ್ನು ಕನ್ಕಶನ್ ಬದಲಿಯಾಗಿ ಮ್ಯಾಚ್ ರೆಫರಿ ಹೇಗೆ ಅನುಮತಿಸಿದರು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇಂತಹ ಆಯ್ಕೆಗಳ ಬಗ್ಗೆ ಮ್ಯಾಚ್​ ರೆಫರಿಗೆ ಸ್ಪಷ್ಟತೆ ಇರಬೇಕೆಂದು ಎಂದು ಕುಕ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ಮ್ಯಾಚ್ ರೆಫರಿಯ ಈ ನಿರ್ಧಾರಕ್ಕೆ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಆರಂಭದಲ್ಲೇ ಅಸಮ್ಮತಿ ವ್ಯಕ್ತಪಡಿಸಿದ್ದರು. ಅಲ್ಲದೆ ಡಗೌಟ್​ ಹೋಗಿ ಚರ್ಚಿಸಿದ್ದರು. ಇದಾಗ್ಯೂ ಆಲ್​ರೌಂಡರ್ ಬದಲಿಗೆ ಬೌಲರ್​ನನ್ನು ಕಣಕ್ಕಿಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಕೆವಿನ್ ಪೀಟರ್ಸನ್ ಸಹ ಹೇಳಿದ್ದಾರೆ.

ಆಯ್ಕೆಗಳಿದ್ದರೂ ಟೀಮ್ ಇಂಡಿಯಾದ ಜಾಣ ನಡೆ:

ಶಿವಂ ದುಬೆ ಬದಲಿಯಾಗಿ ಕನ್ಕಶನ್ ಸಬ್ ಆಗಿ ಕಣಕ್ಕಿಳಿಸಲು ಟೀಮ್ ಇಂಡಿಯಾ ಮುಂದೆ ಮತ್ತೋರ್ವ ಆಲ್​ರೌಂಡರ್ ಆಗಿ ರಮಣ್​ದೀಪ್ ಸಿಂಗ್ ಇದ್ದರು. ರಮಣ್​ದೀಪ್ ಸಿಂಗ್ ಮೀಡಿಯಂ ಫಾಸ್ಟ್ ಬೌಲಿಂಗ್ ಆಲ್​​ರೌಂಡರ್. ಹೀಗಾಗಿ ಶಿವಂ ದುಬೆ ಬದಲಿಗೆ​ ಕನ್ಕಶನ್ ಸಬ್ ಆಗಿ ಕಣಕ್ಕಿಳಿಯಲು ಅವರೇ ಸೂಕ್ತ ಆಯ್ಕೆಯಾಗಿದ್ದರು.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಪವರ್​ಗೆ ವಿರಾಟ್ ಕೊಹ್ಲಿಯ ದಾಖಲೆ ಉಡೀಸ್

ಇದಾಗ್ಯೂ ಟೀಮ್ ಇಂಡಿಯಾ ರಮಣ್​ದೀಪ್ ಸಿಂಗ್ ಅವರ ಆಯ್ಕೆಯನ್ನು ಬದಿಗಿರಿಸಿ, ಹರ್ಷಿತ್ ರಾಣಾ ಅವರನ್ನು ಸಬ್​ ಆಗಿ ಕಣಕ್ಕಿಳಿಸಲು ನಿರ್ಧರಿಸಿರುವುದು ಅಚ್ಚರಿಯೇ ಸರಿ. ಅತ್ತ ಮ್ಯಾಚ್​ ರೆಫರಿ ಜಾವಗಲ್ ಶ್ರೀನಾಥ್ ಕೂಡ ಟೀಮ್ ಇಂಡಿಯಾ ನಿರ್ಧಾರಕ್ಕೆ ಸಮ್ಮತಿ ಸೂಚಿಸಿ ಇದೀಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಗುಂಡಿನ ದಾಳಿ ನಡೆದಾಗ ಚಿಕಿತ್ಸೆಗೆ ಬಾಗಪ್ಪ ₹ 1 ಕೋಟಿ ಖರ್ಚು ಮಾಡಿದ್ದನಂತೆ
ಗುಂಡಿನ ದಾಳಿ ನಡೆದಾಗ ಚಿಕಿತ್ಸೆಗೆ ಬಾಗಪ್ಪ ₹ 1 ಕೋಟಿ ಖರ್ಚು ಮಾಡಿದ್ದನಂತೆ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ