ಪಾಕಿಸ್ತಾನ್ ವಿರುದ್ಧ ಆಡೋ ಬದಲು IPL ಆಡಲು ಬಿಡ್ಬೇಕಿತ್ತು: ಮೈಕೆಲ್ ವಾನ್

England vs Pakistan: ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ನಡುವಣ ಮೊದಲ ಪಂದ್ಯವು ಮಳೆಗೆ ಅಹುತಿಯಾಗಿದೆ. ಇನ್ನು ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು 23 ರನ್​ಗಳಿಂದ ಸೋಲಿಸಿ ಇಂಗ್ದೆಂಡ್ ತಂಡವು 4 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನು ಮೂರನೇ ಟಿ20 ಪಂದ್ಯ ಮೇ 28 ರಂದು ನಡೆಯಲಿದೆ.

ಪಾಕಿಸ್ತಾನ್ ವಿರುದ್ಧ ಆಡೋ ಬದಲು IPL ಆಡಲು ಬಿಡ್ಬೇಕಿತ್ತು: ಮೈಕೆಲ್ ವಾನ್
IPL 2024
Follow us
ಝಾಹಿರ್ ಯೂಸುಫ್
|

Updated on: May 26, 2024 | 12:57 PM

ಪಾಕಿಸ್ತಾನ್ ವಿರುದ್ಧ ಸರಣಿ ಆಡುವ ಬದಲು ಇಂಗ್ಲೆಂಡ್ ಆಟಗಾರರನ್ನು ಐಪಿಎಲ್ ಪ್ಲೇಆಫ್ ಆಡಲು ಅನುಮತಿಸಬೇಕಿತ್ತು ಎಂದು ಮಾಜಿ ನಾಯಕ ಮೈಕೆಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ (IPL 2024) ತಂಡಗಳಲ್ಲಿದ್ದ ಇಂಗ್ಲೆಂಡ್ ಆಟಗಾರರನ್ನು ಪಾಕಿಸ್ತಾನ್ ವಿರುದ್ಧದ ಟಿ20 ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್  ಕರೆಸಿಕೊಂಡಿತ್ತು. ಹೀಗಾಗಿ ಐಪಿಎಲ್​ನ ಲೀಗ್ ಹಂತದ ಕೊನೆಯ ಪಂದ್ಯಗಳಿಗೆ ಇಂಗ್ಲೆಂಡ್ ಆಟಗಾರರು ಅಲಭ್ಯರಾಗಿದ್ದರು. ಆದರೆ ಇದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮಾಡಿದ ದೊಡ್ಡ ತಪ್ಪು ಎಂದಿದ್ದಾರೆ ಮೈಕೆಲ್ ವಾನ್.

ಐಪಿಎಲ್ ಪ್ಲೇಆಫ್​ಗಳಲ್ಲಿ ವಿಲ್ ಜಾಕ್ಸ್ (ಆರ್​ಸಿಬಿ), ಫಿಲ್ ಸಾಲ್ಟ್ (ಕೆಕೆಆರ್) ಹಾಗೂ ಜೋಸ್ ಬಟ್ಲರ್ (ಆರ್​ಆರ್) ಅವರನ್ನು ಆಡಲು ಬಿಡಬೇಕಿತ್ತು. ಇಂತಹದೊಂದು ಅದ್ಭುತ ಅವಕಾಶವನ್ನು ಇಸಿಬಿ ಕೈಚೆಲ್ಲಿಕೊಂಡಿದೆ. ಏಕೆಂದರೆ ಐಪಿಎಲ್ ಪ್ಲೇಆಫ್ ಪಂದ್ಯಗಳಲ್ಲಿನ ಒತ್ತಡ, ಪ್ರೇಕ್ಷಕರು ಮತ್ತು ನಿರೀಕ್ಷೆಗಳು ಪಾಕಿಸ್ತಾನ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಇಂಗ್ಲೆಂಡ್ ಆಟಗಾರರು ಪಾಕಿಸ್ತಾನ್ ವಿರುದ್ಧ ಟಿ20 ಸರಣಿ ಆಡುವುದಕ್ಕಿಂತ ಐಪಿಎಲ್ ಪ್ಲೇಆಫ್ ಆಡುವುದು ಉತ್ತಮವಾಗಿತ್ತು. ಇದರಿಂದ ಟಿ20 ವಿಶ್ವಕಪ್​ಗೂ ಮುನ್ನ ಇಂಗ್ಲೆಂಡ್ ಆಟಗಾರರಿಗೆ ಉತ್ತಮ ತಯಾರಿ ನಡೆಸಬಹುದಿತ್ತು. ಅಲ್ಲದೆ ಒತ್ತಡವನ್ನು ಮೆಟ್ಟಿ ನಿಂತು ಆಡುವುದನ್ನು ಕರಗತ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಈ ಅವಕಾಶವನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೈಚೆಲ್ಲಿಕೊಂಡಿದೆ ಎಂದು ಮೈಕೆಲ್ ವಾನ್ ಹೇಳಿದ್ದಾರೆ.

ಐಪಿಎಲ್​ನ ಲೀಗ್ ಹಂತದ ಕೊನೆಯ ಪಂದ್ಯಗಳ ವೇಳೆ ಇಂಗ್ಲೆಂಡ್ ಆಟಗಾರರು ಪಾಕಿಸ್ತಾನ್ ವಿರುದ್ಧದ ಟಿ20 ಸರಣಿಗಾಗಿ ತವರಿಗೆ ತೆರಳಿದ್ದರು. ಮೇ 21 ರಂದು ಆರಂಭವಾದ ಈ ಸರಣಿಗಾಗಿ ಮೊಯೀನ್ ಅಲಿ (ಸಿಎಸ್​ಕೆ), ಜಾನಿ ಬೈರ್​ಸ್ಟೋವ್ (ಪಂಜಾಬ್ ಕಿಂಗ್ಸ್​), ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್​), ಸ್ಯಾಮ್ ಕರನ್ (ಪಂಜಾಬ್ ಕಿಂಗ್ಸ್​), ವಿಲ್ ಜಾಕ್ಸ್ (ಆರ್​ಸಿಬಿ), ಲಿಯಾಮ್ ಲಿವಿಂಗ್​ಸ್ಟೋನ್ (ಪಂಜಾಬ್ ಕಿಂಗ್ಸ್​), ಫಿಲ್ ಸಾಲ್ಟ್ (ಕೆಕೆಆರ್​), ರೀಸ್ ಟೋಪ್ಲಿ (ಆರ್​ಸಿಬಿ) ಐಪಿಎಲ್ ತಂಡಗಳನ್ನು ತೊರೆದಿದ್ದರು.

ಇವರಲ್ಲಿ ಕೆಲ ಆಟಗಾರರು ಪ್ಲೇಆಫ್ ಪ್ರವೇಶಿಸಿದ ತಂಡಗಳ ಭಾಗವಾಗಿದ್ದರು. ಈ ಆಟಗಾರರನ್ನು ಪ್ಲೇಆಫ್ ಆಡಲು ಅನುಮತಿಸಬೇಕಿತ್ತು. ಇದರಿಂದ ಟಿ20 ವಿಶ್ವಕಪ್​ಗೂ ಮುನ್ನ ಇಂಗ್ಲೆಂಡ್ ಆಟಗಾರರನ್ನು ಒತ್ತಡವನ್ನು ಮೀರಿ ಆಡುವುದನ್ನು ಅಭ್ಯಾಸ ಮಾಡಬಹುದಾಗಿತ್ತು ಎಂದು ಮಾಜಿ ನಾಯಕ ಮೈಕೆಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: IPL 2024: ಸೈನ್ಯಕ್ಕೆ ಸೇರಬೇಕೆಂದಿದ್ದ ಹುಡುಗ ಇದೀಗ KKR ವೇಗಿ

2ನೇ ಪಂದ್ಯ ಗೆದ್ದ ಇಂಗ್ಲೆಂಡ್:

ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ನಡುವಣ ಮೊದಲ ಪಂದ್ಯವು ಮಳೆಗೆ ಅಹುತಿಯಾಗಿದೆ. ಇನ್ನು ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಜೋಸ್ ಬಟ್ಲರ್ ಪಡೆ 23 ರನ್​ಗಳಿಂದ ಸೋಲಿಸಿದೆ. ಇನ್ನು ಮೂರನೇ ಟಿ20 ಪಂದ್ಯ ಮೇ 28 ರಂದು ನಡೆಯಲಿದ್ದು, ನಾಲ್ಕನೇ ಪಂದ್ಯ ಮೇ 30 ರಂದು ಜರಗಲಿದೆ. ಈ ಪಂದ್ಯದ ಬಳಿಕ ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ತಂಡಗಳು ಟಿ20 ವಿಶ್ವಕಪ್​ಗಾಗಿ ಯುಎಸ್​ಎಗೆ ತೆರಳಲಿದೆ.

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ