ಮೊದಲ ಏಕದಿನ ಪಂದ್ಯಕ್ಕೆ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್‌

ಇಂಗ್ಲೆಂಡ್ ತಂಡವು ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಸೆಪ್ಟೆಂಬರ್ 22 ರಂದು ನಡೆಯುವ ಈ ಪಂದ್ಯದಲ್ಲಿ ಅನುಭವಿ ಆದಿಲ್ ರಶೀದ್ ಬದಲಿಗೆ ಯುವ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್‌ಗೆ ಅವಕಾಶ ನೀಡಲಾಗಿದೆ. ಗಾಯದ ಕಾರಣ ಸ್ಯಾಮ್ ಕರನ್, ಫಿಲ್ ಸಾಲ್ಟ್ ಹೊರಗುಳಿದಿದ್ದಾರೆ. ಈ ಸರಣಿಯು ಇಂಗ್ಲೆಂಡ್‌ನ T20 ಯಶಸ್ಸಿನ ನಂತರ ಬಂದಿದೆ, ಇದು ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಮೊದಲ ಏಕದಿನ ಪಂದ್ಯಕ್ಕೆ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್‌
ಇಂಗ್ಲೆಂಡ್ ತಂಡ

Updated on: Sep 21, 2026 | 9:22 PM

ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ಇಂಗ್ಲೆಂಡ್‌ ತಂಡ ಟಿ20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ ಪಾರುಪತ್ಯವನ್ನು ಅಂತ್ಯಗೊಳಿಸಿ ನಂಬರ್ 1 ಸ್ಥಾನಕ್ಕೇರಿತ್ತು. ಇದೀಗ ಅದೇ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ ತಂಡ ಏಕದಿನ ಸರಣಿಯನ್ನು ಆಡಲಿದೆ. ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಸೆಪ್ಟೆಂಬರ್ 22 ರಂದು ನಡೆಯಲಿದೆ. ಈ ಪಂದ್ಯಕ್ಕೆ ಒಂದು ದಿನ ಮೊದಲೇ ಆತಿಥೇಯ ಇಂಗ್ಲೆಂಡ್‌ ಮೊದಲ ಏಕದಿನ ಪಂದ್ಯ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಈ ಮೊದಲು ಭಾರತದ ವಿರುದ್ಧ ಆಡಿದ ತಂಡವೇ ಲಂಕಾ ವಿರುದ್ಧ ಕಣಕ್ಕಿಳಿಯಲಿದೆ. ಆದಾಗ್ಯೂ ತಂಡದಲ್ಲಿ 1 ಬದಲಾವಣೆಯನ್ನು ಮಾಡಲಾಗಿದ್ದು, ಅನುಭವಿ ಆದಿಲ್ ರಶೀದ್ ಬದಲಿಗೆ ಯುವ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಬೆಥಲ್, ಸ್ಯಾಮ್ ಕರನ್ ಔಟ್

ಆದಿಲ್ ರಶೀದ್ ಹೊರತುಪಡಿಸಿ, ಜಾಕೋಬ್ ಬೆಥಲ್ ಮತ್ತು ಸ್ಯಾಮ್ ಕರನ್ ಕೂಡ ಪ್ಲೇಯಿಂಗ್ 11 ರಲ್ಲಿ ಇಲ್ಲ. ರೆಹಾನ್ ಅಹ್ಮದ್ ಜೊತೆಗೆ ಟಾಮ್ ಬ್ಯಾಂಟನ್ ಮತ್ತು ಜೇಮಿ ಓವರ್ಟನ್ ಅವರಿಗೆ ಅವಕಾಶ ನೀಡಲಾಗಿದೆ. ರಶೀದ್ ತಂಡದಲ್ಲಿದ್ದಾರೆಯಾದರೂ ಬೆಥಲ್ ಮತ್ತು ಕರನ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಇವರಿಬ್ಬರನ್ನು ಹೊರಗಿಡಲಾಗಿದೆ. ಇವರಿಬ್ಬರ ಜೊತೆಗೆ ಗಾಯದ ಕಾರಣದಿಂದಾಗಿ ಫಿಲ್ ಸಾಲ್ಟ್ ಕೂಡ ಈ ಸರಣಿಯಲ್ಲಿ ಆಡುತ್ತಿಲ್ಲ.

ಇಂಗ್ಲೆಂಡ್ ಪ್ಲೇಯಿಂಗ್ 11: ಟಾಮ್ ಬ್ಯಾಂಟನ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್, ವಿಲ್ ಜ್ಯಾಕ್ಸ್, ರೆಹಾನ್ ಅಹ್ಮದ್, ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಜೋಶ್ ಟಂಗ್.

ಯೂತ್ ಏಕದಿನ ಸರಣಿ; ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಭಾರತ ಯುವ ಪಡೆ

ಶ್ರೀಲಂಕಾ ತಂಡ: ಕುಸಲ್ ಮೆಂಡಿಸ್ (ನಾಯಕ), ಪಾತುಮ್ ನಿಸ್ಸಾಂಕ, ಕಮಿಲ್ ಮಿಶ್ರಾ, ಕಮಿಂದು ಮೆಂಡಿಸ್, ಚರಿತ್ ಅಸಲಂಕ, ಜನಿತ್ ಲಿಯಾನಗೆ, ಪವನ್ ರತ್ನಾಯಕೆ, ದಸುನ್ ಶಾನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಸಚಿಂದು ಕೊಲೊಂಬಗೆ, ದುಷ್ಮಂತ ಚಮೀರ, ಎಶಾನ್ ಮಾಲಿಂಗ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us