
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಹೀಗಾಗಿ ಈ ಇಬ್ಬರು ದಿಗ್ಗಜರ ಅನುಪಸ್ಥಿತಿಯಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಯುವ ತಂಡವನ್ನು ಇಂಗ್ಲೆಂಡ್ ವಿರುದ್ಧ (IND vs ENG) ಐದು ಟೆಸ್ಟ್ ಸರಣಿ ಆಡಲು ಕಳುಹಿಸಲಾಗುತ್ತಿದೆ. ಮೊದಲ ಟೆಸ್ಟ್ ಪಂದ್ಯ ಜೂನ್ 20 ರಿಂದ ಆರಂಭವಾಗಲಿದೆ. ಆದರೆ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಕೆಲವು ಆಟಗಾರರು ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಭಾರತ-ಎ ಪರ ಅನಧಿಕೃತ ಪಂದ್ಯಗಳನ್ನು ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ, ಇಂಗ್ಲೆಂಡ್‌ನ ಮಾಜಿ ಆಟಗಾರ ವಿರಾಟ್ ಕೊಹ್ಲಿ ನಿವೃತ್ತಿಯ ಬಗ್ಗೆ ವಿಚಿತ್ರವಾದ ಹೇಳಿಕೆ ನೀಡಿದ್ದಾರೆ. ವೈಫಲ್ಯದ ಭಯದಿಂದಾಗಿ ವಿರಾಟ್ ಕೊಹ್ಲಿ ಈ ಸ್ವರೂಪದಿಂದ ನಿವೃತ್ತರಾಗಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ
ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್, ‘ವಿರಾಟ್ ಕೊಹ್ಲಿ ವೈಫಲ್ಯದ ಭಯದಿಂದ ನಿವೃತ್ತರಾಗಿರಬಹುದು ಎಂದು ನಾನು ಭಾವಿಸುತ್ತೇನೆ. ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಆಡಬೇಕೆಂದು ನಾವು ಕಾಯುತ್ತಿದ್ದೆವು, ಆದರೆ ಅವರು ನಿವೃತ್ತಿ ಹೊಂದುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ವಿರಾಟ್ ಈ ರೀತಿ ನಿವೃತ್ತಿ ಹೊಂದುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಆಫ್ ಸ್ಟಂಪ್‌ನ ಹೊರಗೆ ಹೋಗುವ ಚೆಂಡುಗಳನ್ನು ಆಡುವುದು ವಿರಾಟ್ಗೆ ಕಷ್ಟಕರವಾಗಿತ್ತು. ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಕೊಹ್ಲಿ ಈ ಎಸೆತಗಳಲ್ಲಿ ಔಟಾಗುತ್ತಿರುವುದು ಕಂಡುಬಂದಿತು. ಬಹುಶಃ ಅದಕ್ಕಾಗಿಯೇ ಕೊಹ್ಲಿ ಟೆಸ್ಟ್ಗೆ ನಿವೃತ್ತಿ ಹೊಂದಿರಬಹುದು. ಇದಲ್ಲದೆ ವಿರಾಟ್, ಯುವಕರಿಗೆ ಅವಕಾಶ ನೀಡುವ ಸಲುವಾಗಿಯೂ ಈ ನಿರ್ಧಾರ ತೆಗೆದುಕೊಂಡಿರಬಹುದು’ ಎಂದಿದ್ದಾರೆ.
ಫೋಟೋ ಶೂಟ್ನಲ್ಲೂ ಕೊಹ್ಲಿಯನ್ನು ಬಿಡದ ಸ್ವಸ್ತಿಕ್; ದೂರ ತಳ್ಳಿದ ಡೇವಿಡ್, ಲಿವಿಂಗ್ಸ್ಟೋನ್! ವಿಡಿಯೋ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯ ನಂತರ, ಯುವಕರಿಗೆ ತಮ್ಮನ್ನು ತಾವು ಸಾಬೀತುಪಡಿಸಲು ಉತ್ತಮ ಅವಕಾಶವಿದೆ ಎಂದು ಮಾಂಟಿ ಪನೇಸರ್ ಅಭಿಪ್ರಾಯಪಟ್ಟಿದ್ದಾರೆ. ಕರುಣ್ ನಾಯರ್ ಅವರನ್ನು ಉಲ್ಲೇಖಿಸಿ ಅವರು, ‘ಕರುಣ್ ನಾಯರ್ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ, ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧ ದ್ವಿಶತಕ ಬಾರಿಸಿದ್ದಾರೆ. ಭಾರತ ಯುವ ತಂಡವು ಇಂಗ್ಲೆಂಡ್‌ನಲ್ಲಿ ಅದ್ಭುತಗಳನ್ನು ಮಾಡಬಲ್ಲ ಅನೇಕ ಅತ್ಯುತ್ತಮ ಆಟಗಾರರನ್ನು ಹೊಂದಿದೆ. ಇದರ ಹೊರತಾಗಿ, ಶುಭ್‌ಮನ್ ಗಿಲ್ ಕೂಡ ಇಂಗ್ಲಿಷ್ ನೆಲದಲ್ಲಿ ಇತಿಹಾಸ ಸೃಷ್ಟಿಸುವ ಅವಕಾಶವನ್ನು ಹೊಂದಿದ್ದಾರೆ’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Sun, 1 June 25