Faf du Plessis: ಈ ಸಲ ಕಪ್ ಗೆಲ್ಲೋರು ಇವರೇ ಎಂದ ಫಾಫ್ ಡುಪ್ಲೆಸಿಸ್
T20 World Cup 2021: ಯಾರು ಕಪ್ ಗೆಲ್ಲಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡುಪ್ಲೆಸಿಸ್, ನ್ಯೂಜಿಲೆಂಡ್ ಗೆಲ್ಲುತ್ತದೆ ಎಂದು ಭಾವಿಸುತ್ತೇನೆ. ಆದರೆ ಕಿವೀಸ್ ತಂಡ ಕೂಡ ದಕ್ಷಿಣ ಆಫ್ರಿಕಾದಂತೆ ಅಂತಿಮ ಹಂತದಲ್ಲಿ ಎಡವುತ್ತದೆ.
ಟಿ20 ವಿಶ್ವಕಪ್ (T20 World Cup 2021) ಅಂತಿಮ ಹಂತಕ್ಕೆ ಬಂದು ನಿಂತಿದೆ. ಮೊದಲ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ನ್ಯೂಜಿಲೆಂಡ್ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಇನ್ನು ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ (Pakistan vs Australia) ನಡುವೆ ಎರಡನೇ ಸೆಮಿಫೈನಲ್ ನಡೆಯಲಿದ್ದು, ಇದರಲ್ಲಿ ಗೆಲ್ಲುವ ತಂಡ ನ್ಯೂಜಿಲೆಂಡ್ ವಿರುದ್ದ ಕಪ್ಗಾಗಿ ಸೆಣಸಾಡಲಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿರುವ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಚರ್ಚೆಗಳು ಕೂಡ ಜೋರಾಗಿದೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ (Faf du Plessis) ನೀಡಿರುವ ಹೇಳಿಕೆಯೊಂದು ವೈರಲ್ ಆಗಿದೆ.
ಅಬುಧಾಬಿ T10 ಲೀಗ್‌ನ ಐದನೇ ಸೀಸನ್‌ಗಾಗಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡುಪ್ಲೆಸಿಸ್, ದುಬೈನಲ್ಲಿ ನಡೆಯಲಿರುವ ಫೈನಲ್ನಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ್ ಮುಖಾಮುಖಿಯಾಗಲಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಯಾರು ಕಪ್ ಗೆಲ್ಲಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡುಪ್ಲೆಸಿಸ್, ನ್ಯೂಜಿಲೆಂಡ್ ಗೆಲ್ಲುತ್ತದೆ ಎಂದು ಭಾವಿಸುತ್ತೇನೆ. ಆದರೆ ಕಿವೀಸ್ ತಂಡ ಕೂಡ ದಕ್ಷಿಣ ಆಫ್ರಿಕಾದಂತೆ ಅಂತಿಮ ಹಂತದಲ್ಲಿ ಎಡವುತ್ತದೆ. ಹೀಗಾಗಿ ಪಾಕಿಸ್ತಾನ್ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ತಿಳಿಸಿದ್ದಾರೆ.
ಈ ಮೂಲಕ ಟಿ20 ವಿಶ್ವಕಪ್ 2021 ರಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನಕ್ಕೆ ಪ್ರಶಸ್ತಿ ಗೆಲ್ಲುವ ಸಮಾನ ಅವಕಾಶವಿದ್ದರೂ, ಪಾಕ್ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ ಎಂದು ಫಾಫ್ ಡುಪ್ಲೆಸಿಸ್ ತಿಳಿಸಿದ್ದಾರೆ. ಸೂಪರ್ 12 ನಲ್ಲಿ ಒಂದೇ ಒಂದು ಸೋಲು ಕಾಣದ ತಂಡ ಎನಿಸಿಕೊಂಡಿರುವ ಪಾಕಿಸ್ತಾನ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ದ ಆಡಲಿದೆ. ಒಂದು ವೇಳೆ ಪಾಕ್ ಫೈನಲ್ ಪ್ರವೇಶಿಸಿದರೆ ಮತ್ತೆ ನ್ಯೂಜಿಲೆಂಡ್ ವಿರುದ್ದ ಆಡಲಿದೆ. ಸೂಪರ್ 12 ನಲ್ಲಿ ನ್ಯೂಜಿಲೆಂಡ್ ವಿರುದ್ದ ಗೆಲುವು ದಾಖಲಿಸಿದ್ದ ಪಾಕಿಸ್ತಾನ್ ಫೈನಲ್ ಪ್ರವೇಶಿಸಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: IPL 2022: ಯುವ ನಾಯಕನ ಮೇಲೆ ಕಣ್ಣಿಟ್ಟಿರುವ CSK
(Faf du Plessis predicts winner of T20 World Cup)