AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾವಲ್ಪಿಂಡಿಯಲ್ಲಿ ಗಲಾಟೆ; ಕಿವೀಸ್- ಪಾಕ್​​ ಏಕದಿನ ಪಂದ್ಯದ ಟಾಸ್ ವಿಳಂಬ! ಆಟಗಾರರಿಗೆ ಹೋಟೆಲ್​ನಲ್ಲೇ ಉಳಿಯುವಂತೆ ಸೂಚನೆ

PAK vs NZ: ರಾವಲ್ಪಿಂಡಿಯಲ್ಲಿನ ಗಲಾಟೆಯಿಂದಾಗಿ ಈ ವಿಳಂಬ ಉಂಟಾಗಿದೆ. ಇದರಿಂದಾಗಿ ಆಟಗಾರರಿಗೆ ಸದ್ಯಕ್ಕೆ ಹೋಟೆಲ್ ಕೋಣೆಗಳಲ್ಲಿ ಇರಲು ಸೂಚಿಸಲಾಗಿದೆ. ಟಾಸ್‌ನಲ್ಲಿ 20 ನಿಮಿಷಗಳು ಉಳಿದಿರುವಾಗ ಈ ಘಟನೆ ಸಂಭವಿಸಿದೆ.

ರಾವಲ್ಪಿಂಡಿಯಲ್ಲಿ ಗಲಾಟೆ; ಕಿವೀಸ್- ಪಾಕ್​​ ಏಕದಿನ ಪಂದ್ಯದ ಟಾಸ್ ವಿಳಂಬ! ಆಟಗಾರರಿಗೆ ಹೋಟೆಲ್​ನಲ್ಲೇ ಉಳಿಯುವಂತೆ ಸೂಚನೆ
ಉಭಯ ತಂಡದ ನಾಯಕರು
TV9 Web
| Edited By: |

Updated on:Sep 17, 2021 | 3:15 PM

Share

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಇಂದಿನಿಂದ ಆರಂಭವಾಗುತ್ತಿದೆ. ಮೊದಲ ಏಕದಿನ ಪಂದ್ಯವನ್ನು ಸದ್ಯದಲ್ಲೇ ರಾವಲ್ಪಿಂಡಿಯಲ್ಲಿ ಆರಂಭಿಸಬೇಕಿತ್ತು. ಆದರೆ ಪಂದ್ಯದ ಆರಂಭ ಈಗ ಸ್ವಲ್ಪ ವಿಳಂಬವಾಗಿದೆ. ರಾವಲ್ಪಿಂಡಿಯಲ್ಲಿನ ಗಲಾಟೆಯಿಂದಾಗಿ ಈ ವಿಳಂಬ ಉಂಟಾಗಿದೆ. ಇದರಿಂದಾಗಿ ಆಟಗಾರರಿಗೆ ಸದ್ಯಕ್ಕೆ ಹೋಟೆಲ್ ಕೋಣೆಗಳಲ್ಲಿ ಇರಲು ಸೂಚಿಸಲಾಗಿದೆ. ಟಾಸ್‌ನಲ್ಲಿ 20 ನಿಮಿಷಗಳು ಉಳಿದಿರುವಾಗ ಈ ಘಟನೆ ಸಂಭವಿಸಿದೆ. ನಗರದಲ್ಲಿ ಉಂಟಾದ ಅವಾಂತರದಿಂದಾಗಿ ಆಟಗಾರರು ಕ್ರೀಡಾಂಗಣವನ್ನು ತಲುಪಿಲ್ಲ. ಏಕೆಂದರೆ ಅವರನ್ನು ಹೋಟೆಲ್ ಕೋಣೆಯಲ್ಲಿ ಇರಲು ಹೇಳಲಾಗಿದೆ. ಅದೇ ಸಮಯದಲ್ಲಿ, ಪ್ರೇಕ್ಷಕರಿಗೂ ಸಹ ಮೈದಾನಕ್ಕೆ ಪ್ರವೇಶ ನೀಡಿಲ್ಲ.

ರಾವಲ್ಪಿಂಡಿಯಲ್ಲೂ ಪರಿಸ್ಥಿತಿ ಹಾಗೆಯೇ ಇದೆ ಟಾಸ್ ಸಮಯ ಕಳೆದಿದೆ. ಆದರೆ ಇನ್ನೂ ಸಹ ಟಾಸ್ ಪ್ರಕ್ರಿಯೆ ಸಂಭವಿಸುವ ಸಾಧ್ಯತೆಗಳು ಗೋಚರಿಸುತ್ತಿಲ್ಲ. ಪರಿಸ್ಥಿತಿ ಹಾಗೆಯೇ ಇದೆ. ಪಾಕಿಸ್ತಾನದಲ್ಲಿ ಇಂತಹ ಪರಿಸ್ಥಿತಿ ಇದ್ದಕ್ಕಿದ್ದಂತೆ ಸಂಭವಿಸಿದ ಕಾರಣ, ನ್ಯೂಜಿಲ್ಯಾಂಡ್ ಪ್ರವಾಸವು ತೊಂದರೆಯಲ್ಲಿದ್ದಂತೆ ತೋರುತ್ತದೆ. ಆದರೆ, ಟಾಸ್ ಯಾವಾಗ ನಡೆಯಲಿದೆ, ಪಂದ್ಯ ನಡೆಯುತ್ತದೆಯೋ ಇಲ್ಲವೋ ಎಂಬ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಹಿರಂಗವಾಗಿಲ್ಲ.

ಈ ಘಟನೆ ಪಾಕಿಸ್ತಾನದ ಕ್ರಿಕೆಟ್ ಮೇಲೆ ಪರಿಣಾಮ ಬೀರಬಹುದು ಮತ್ತೊಂದೆಡೆ, ನಗರದಲ್ಲಿ ಗದ್ದಲಕ್ಕೆ ಕಾರಣವೇನು ಎಂಬುದು ಕೂಡ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ, ಇದು ಪಾಕಿಸ್ತಾನ ಕ್ರಿಕೆಟ್​ಗೆ ಹೊಡೆತ ನೀಡುವಂತೆ ತೋರುತ್ತಿದೆ. ವಾಸ್ತವವಾಗಿ, ಈ ಘಟನೆಯ ನಂತರ, ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ತಂಡದ ಆಟಗಾರರ ಮನಸ್ಸಿನಲ್ಲಿ ಭಯದ ವಾತಾವರಣ ಉಂಟಾಗಬಹುದು. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಈ ಮೂರು ಪಂದ್ಯಗಳನ್ನು ರಾವಲ್ಪಿಂಡಿಯಲ್ಲಿ ಆಡಬೇಕು. ಆದರೆ ಮೊದಲ ಪಂದ್ಯದ ಮೊದಲು ಬಂದ ಕೆಟ್ಟ ಸುದ್ದಿಯ ನಂತರ, ನ್ಯೂಜಿಲೆಂಡ್ ತಂಡವು ಪ್ರವಾಸವನ್ನು ಹೇಗೆ ತೆಗೆದುಕೊಳ್ಳುತ್ತದೆ. ಇದು ಕೂಡ ನೋಡಬೇಕಾದ ಸಂಗತಿಯಾಗಿದೆ.

Published On - 3:08 pm, Fri, 17 September 21

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ