ಯುವರಾಜ್​ ಸಿಂಗ್-ಹಜೆಲ್​ ಕೀಚ್​​ ದಂಪತಿಗೆ ಗಂಡು ಮಗು; ಸೌರವ್​ ಗಂಗೂಲಿ, ಸಾನಿಯಾ ಮಿರ್ಜಾರಿಂದ ಶುಭ ಹಾರೈಕೆ

ಯುವರಾಜ್​ ಸಿಂಗ್-ಹಜೆಲ್​ ಕೀಚ್​​ ದಂಪತಿಗೆ ಗಂಡು ಮಗು; ಸೌರವ್​ ಗಂಗೂಲಿ, ಸಾನಿಯಾ ಮಿರ್ಜಾರಿಂದ ಶುಭ ಹಾರೈಕೆ
ಯುವರಾಜ್​ ಸಿಂಗ್​ ಮತ್ತು ಹಜೆಲ್​ ಕೀಚ್​

ಇಂಥ ಸುಂದರವಾದ ಆಶೀರ್ವಾದ ನೀಡಿದ್ದಕ್ಕಾಗಿ ನಾನು ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನೀವು ನಮ್ಮ ಖಾಸಗಿತನವನ್ನು ಗೌರವಿಸುತ್ತೀರಿ ಎಂಬ ನಂಬಿಕೆಯಿದೆ ಎಂದು ಯುವರಾಜ್​ ಸಿಂಗ್ ಮತ್ತು ಹಜೆಲ್​ ಕೀಚ್​ ಹೇಳಿದ್ದಾರೆ.

TV9kannada Web Team

| Edited By: Lakshmi Hegde

Jan 26, 2022 | 8:13 AM

ಭಾರತದ ಮಾಜಿ ಕ್ರಿಕೆಟರ್​ ಯುವರಾಜ್​ ಸಿಂಗ್​ ಮತ್ತು ನಟಿ ಹಜೆಲ್​ ಕೀಚ್ (Yuvraj Singh and Hazel Keech)​ ದಂಪತಿಗೆ ಮೊದಲ ಮಗು ಹುಟ್ಟಿದೆ. ತಮಗೆ ಗಂಡು ಮಗು ಹುಟ್ಟಿದ್ದನ್ನು ಯುವರಾಜ್​ ಸಿಂಗ್ ಸೋಷಿಯಲ್​ ಮೀಡಿಯಾ ಮೂಲಕ ಮಂಗಳವಾರ ತಿಳಿಸಿದ್ದಾರೆ. ಯುವರಾಜ್​ ಸಿಂಗ್​ ಕ್ರಿಕೆಟ್​​ನಲ್ಲಿ ತಮ್ಮ ಬ್ಯಾಟಿಂಗ್​ ಮತ್ತು ಫೀಲ್ಡಿಂಗ್​ ಮೂಲಕ ಹೆಸರು ಮಾಡಿದ್ದರು. ಆಲ್​ ರೌಂಡರ್​ ಎಂದೇ ಖ್ಯಾತರಾಗಿದ್ದರು. ಅದ್ಭುತ ಕ್ರಿಕೆಟ್​ ಆಟಗಾರರಲ್ಲೊಬ್ಬರಾಗಿದ್ದರು. ಆದರೆ ನಂತರ ಕ್ಯಾನ್ಸರ್​ ರೋಗಕ್ಕೆ ಒಳಗಾಗಿ, ಗುಣಮುಖರಾದರೂ, ತಂಡದಲ್ಲಿ ಸೂಕ್ತ ಅವಕಾಶ ಸಿಗಲಿಲ್ಲ. ಹೀಗೆ ಹಲವು ಕಾರಣಗಳಿಂದ ಕ್ರಿಕೆಟ್​ ತೊರೆದಿದ್ದಾರೆ.   

ತಮಗೆ ಗಂಡು ಮಗು ಹುಟ್ಟಿದ್ದನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ ಯುವರಾಜ್​ ಸಿಂಗ್​, ಇಂದು ನಮಗೆ ಗಂಡು ಮಗು ಹುಟ್ಟಿದೆ ಎಂಬ ವಿಷಯವನ್ನು ನಮ್ಮ ಫ್ಯಾನ್ಸ್​​, ಕುಟುಂಬ ಮತ್ತು ಸ್ನೇಹಿತರೊಟ್ಟಿಗೆ ಹಂಚಿಕೊಳ್ಳಲು ತುಂಬ ಉತ್ಸುಕರಾಗಿದ್ದೇವೆ.  ಇಂಥ ಸುಂದರವಾದ ಆಶೀರ್ವಾದ ನೀಡಿದ್ದಕ್ಕಾಗಿ ನಾನು ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನೀವು ನಮ್ಮ ಖಾಸಗಿತನವನ್ನು ಗೌರವಿಸುತ್ತೀರಿ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ. ಯುವರಾಜ್​ ಸಿಂಗ್​ ಮತ್ತು ಹಜೆಲ್​ ಕೀಚ್​ ಇಬ್ಬರೂ ಕೂಡ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಅಪ್ಪ-ಅಮ್ಮನಾದ ಯುವರಾಜ್​ ಸಿಂಗ್​ ಮತ್ತು ಹಜೆಲ್​ ಕೀಚ್​ಗೆ ಸೌರವ್​ ಗಂಗೂಲಿ, ಸಾನಿಯಾ ಮಿರ್ಜಾ, ಇರ್ಫಾನ್​ ಪಠಾಣ್​ ಸೇರಿ ಅನೇಕರು ಶುಭ ಹಾರೈಸಿದ್ದಾರೆ. ಅಂದಹಾಗೆ, ಯುವರಾಜ್​ ಸಿಂಗ್​ ಮತ್ತು ಹಜೆಲ್​ ವಿವಾಹ 2016ರಲ್ಲಿ ನಡೆದಿತ್ತು.

ಯುವರಾಜ್​ ಸಿಂಗ್​ ಮೊದಲ 2000ನೇ ಇಸ್ವಿಯಲ್ಲಿ ಕೀನ್ಯಾ ವಿರುದ್ಧ ಏಕದಿನ ಪಂದ್ಯವನ್ನು ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಯುವಿ ಎಂಬ ನಿಕ್​ ನೇಮ್​​ನಿಂದಲೇ ಖ್ಯಾತರಾಗಿದ್ದ ಅವರು, ಸುಮಾರು 40 ಟೆಸ್ಟ್​ಗಳು, 304 ಏಕದಿನ ಪಂದ್ಯಗಳು, 58 ಟಿ20 ಪಂದ್ಯಗಳನ್ನು ಆಡಿ, 2019ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಐಪಿಎಲ್​​ನಲ್ಲಂತೂ ಭರ್ಜರಿ ಮಿಂಚಿದ್ದ ಯುವರಾಜ್​ ಸಿಂಗ್​, ಪಂಜಾಬ್​ ಕಿಂಗ್ಸ್​, ಪುಣೆ ವಾರಿಯರ್ಸ್​, ಬೆಂಗಳೂರು ರಾಯಲ್ ಚಾಲೆಂಜರ್ಸ್​, ಸನ್​ರೈಸ್​ ಹೈದರಾಬಾದ್​, ಮುಂಬೈ ಇಂಡಿಯನ್ಸ್​ ತಂಡಗಳಲ್ಲಿ ಆಡಿದ್ದಾರೆ. ಇನ್ನು ಕ್ರಿಕೆಟ್​ ಜೀವನಕ್ಕೆ ಮರಳುವ ಬಗ್ಗೆ 2021ರಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ಬೋಂಡ, ಒಡೆ, ದೋಸೆಗೂ ಸೈ ಜಿಲೇಬಿ, ಒಬ್ಬಟ್ಟು, ಲಡ್ಡು, ಸ್ವೀಟ್​ಗೂ ಸೈ; ಬೆಂಗಳೂರಿನಲ್ಲಿ ನಡೆಯುತ್ತಿದೆ ಅವರೆಕಾಯಿ ಮೇಳ

Follow us on

Related Stories

Most Read Stories

Click on your DTH Provider to Add TV9 Kannada