CPL 2022: 6 ಸಿಕ್ಸರ್‌, 10 ಬೌಂಡರಿ, ಅಬ್ಬರದ ಶತಕ ಸಿಡಿಸಿದ ಆರ್​ಸಿಬಿ ಕ್ಯಾಪ್ಟನ್..! ವಿಡಿಯೋ ನೋಡಿ

CPL 2022: ಬಂದ ಕೂಡಲೇ ದಾಳಿ ಆರಂಭಿಸಿದ ಫಾಫ್, ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕ ಕೇವಲ 56 ಎಸೆತಗಳಲ್ಲಿ 10 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಾಯದಿಂದ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

CPL 2022: 6 ಸಿಕ್ಸರ್‌, 10 ಬೌಂಡರಿ, ಅಬ್ಬರದ ಶತಕ ಸಿಡಿಸಿದ ಆರ್​ಸಿಬಿ ಕ್ಯಾಪ್ಟನ್..! ವಿಡಿಯೋ ನೋಡಿ
ಫಾಫ್ ಡು ಪ್ಲೆಸಿಸ್
Follow us
TV9 Web
| Updated By: ಪೃಥ್ವಿಶಂಕರ

Updated on:Sep 23, 2022 | 3:01 PM

ಕಳೆದ ಕೆಲವು ದಿನಗಳಿಂದ ಕಳಪೆ ಫಾರ್ಮ್​ನಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದ ಪಾಕ್ ನಾಯಕ ಬಾಬರ್ ಅಜಮ್ (Babar Azam) ಗುರುವಾರ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬಿರುಸಿನ ಶತಕ ಸಿಡಿಸುವುದರೊಂದಿಗೆ ಟೀಕಕಾರರ ಬಾಯಿ ಮುಚ್ಚಿಸಿದ್ದಾರೆ. ಹಾಗೆಯೇ ಒಂದು ಅದ್ಭುತ ಇನ್ನಿಂಗ್ಸ್​ಗಾಗಿ ಕಾಯುತ್ತಿದ್ದ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ (Faf du Plessis) ಕೂಡ ಅಬ್ಬರದ ಇನ್ನಿಂಗ್ಸ್‌ ಆಡಿ ಭರ್ಜರಿ ಫಾರ್ಮ್​ಗೆ ಮರಳಿದ್ದಾರೆ. ಸದ್ಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಡುತ್ತಿರುವ ಫಾಫ್ ಬ್ಯಾಟ್ ಎಂಥ ಬಿರುಸಿನ ಇನ್ನಿಂಗ್ಸ್ ಆಡಿತು ಎಂದರೆ ಎದುರಾಳಿ ಬೌಲರ್‌ಗಳು ಬೌಲ್ ಮಾಡುವುದಕ್ಕೆ ಹೆದರುವಂತ್ತಾಗಿತ್ತು. ಫಾಫ್ ಬ್ಯಾಟ್‌ನಿಂದ ಒಂದರ ಹಿಂದೆ ಒಂದರಂತೆ ಬರುತ್ತಿದ್ದ ಬಿಗ್ ಶಾಟ್​ಗಳನ್ನು ನೋಡುವುದನ್ನು ಬಿಟ್ಟರೆ ಎದುರಾಳಿ ತಂಡದ ಫೀಲ್ಡರ್‌ಗಳಿಗೆ ಬೇರೆ ಕೆಲಸವೇ ಇಲ್ಲದಂತ್ತಾಗಿತ್ತು.

ಸಿಪಿಎಲ್‌ನಲ್ಲಿ ಫಾಫ್ ಅದ್ಭುತ ಆಟ

ಗುರುವಾರ ಸಿಪಿಎಲ್‌ನಲ್ಲಿ ಸೇಂಟ್ ಲೂಸಿಯಾ ಕಿಂಗ್ ಮತ್ತು ಗಯಾನಾ ಅಮೆಜಾನ್ ವಾರಿಯರ್ ನಡುವಿನ ಪಂದ್ಯ ನಡೆಯಿತು. ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಐಪಿಎಲ್​ನಲ್ಲಿ ಆರ್​ಸಿಬಿ ನಾಯಕತ್ವವಹಿಸಿಕೊಂಡಿರುವ ಫಾಫ್ ಓಪನರ್ ಆಗಿ ಕಣಕ್ಕಿಳಿದಿದ್ದರು. ಬಂದ ಕೂಡಲೇ ದಾಳಿ ಆರಂಭಿಸಿದ ಫಾಫ್, ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕ ಕೇವಲ 56 ಎಸೆತಗಳಲ್ಲಿ 10 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಾಯದಿಂದ ತಮ್ಮ ಶತಕವನ್ನು ಪೂರ್ಣಗೊಳಿಸಿದರು. 174.57 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಫಾಫ್, 103 ರನ್ ಗಳಿಸಿದ್ದಾಗ ಓಡಿಯನ್ ಸ್ಮಿತ್ ಎಸೆತದಲ್ಲಿ ಬೌಲ್ಡ್ ಆದರು. ಈ ಪಂದ್ಯದಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ ಫಾಫ್, ಬಾಬರ್ ಆಜಮ್‌ಗಿಂತ ಅದ್ಭುತವಾಗಿ ಬ್ಯಾಟ್ ಬೀಸಿದಿರು.

ನಿನ್ನೆ ನಡೆದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 200 ರನ್​ಗಳ ಗುರಿ ಬೆನ್ನಟ್ಟಲು ಆರಂಭಿಕರಾಗಿ ಕಣಕ್ಕಿಳಿದಿದ್ದ ಬಾಬರ್ ಅಜಂ ಕೂಡ ಆರಂಭದಿಂದಲೇ ಅಬ್ಬರ ಇನ್ನಿಂಗ್ಸ್ ಆರಂಭಿಸಿದರು. 39 ಎಸೆತಗಳಲ್ಲಿ 50 ರನ್ ಪೂರೈಸಿದ ಅವರು 62 ಎಸೆತಗಳಲ್ಲಿ ಶತಕ ಗಳಿಸಿದರು. 110 ರನ್‌ಗಳ ಇನ್ನಿಂಗ್ಸ್‌ನಲ್ಲಿ ಅವರು ಒಂಬತ್ತು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದರು.

ಫಾಫ್ ಅಬ್ಬರದ ಇನ್ನಿಂಗ್ಸ್ ಹೊರತಾಗಿಯೂ ಗೆಲ್ಲಲಾಗಲಿಲ್ಲ

ಫಾಫ್ ಅಬ್ಬರದ ಇನ್ನಿಂಗ್ಸ್‌ನ ಹೊರತಾಗಿಯೂ ತಂಡಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಸೇಂಟ್ ಲೂಸಿಯಾ ತಂಡ ನೀಡಿದ 194 ರನ್​ಗಳ ಟಾರ್ಗೆಟನ್ನು ಅಮೆಜಾನ್ ವಾರಿಯರ್ಸ್ ತಂಡ ಇನ್ನು ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು. ಗಯಾನಾ ಪರ ರಹಮಾನತುಲ್ಲಾ ಗುರ್ಬಾಜ್ 52 ಮತ್ತು ಶಾಯ್ ಹೋಪ್ ಅಜೇಯ 59 ರನ್ ಗಳಿಸಿದರು. ಶಿಮ್ರಾನ್ ಹೆಟ್ಮೆಯರ್ ಕೂಡ ಕೊನೆಯ ಓವರ್‌ಗಳಲ್ಲಿ 36 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು. ಆದಾಗ್ಯೂ, ಮೊಹಮ್ಮದ್ ರಿಜ್ವಾನ್ ಅವರೊಂದಿಗೆ ದಾಖಲೆಯ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ಬಾಬರ್ ತಮ್ಮ ತಂಡಕ್ಕೆ ಐತಿಹಾಸಿಕ ಜಯವನ್ನು ನೀಡಿದರು. ಮೊಹಮ್ಮದ್ ರಿಜ್ವಾನ್ ಔಟಾಗದೆ 88 ರನ್‌ಗಳ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದರು ಮತ್ತು ಅವರು ಒಟ್ಟಿಗೆ ಅಜೇಯ 203 ರನ್‌ಗಳನ್ನು ಹಂಚಿಕೊಂಡು ತಂಡಕ್ಕೆ 10 ವಿಕೆಟ್‌ಗಳ ಜಯವನ್ನು ನೀಡಿದರು.

Published On - 2:59 pm, Fri, 23 September 22

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!