Global T20: ಗ್ಲೋಬಲ್ ಟಿ20 ಲೀಗ್ನಲ್ಲಿ ಟೊರೊಂಟೊ ನ್ಯಾಷನಲ್ಸ್ ಚಾಂಪಿಯನ್ಸ್
Global T20 Canada 2024: 2018 ರಲ್ಲಿ ಶುರುವಾದ ಗ್ಲೋಬಲ್ ಟಿ20 ಟೂರ್ನಿಯಲ್ಲಿ ಈವರೆಗೆ ಕೇವಲ ನಾಲ್ಕು ಸೀಸನ್ ಮಾತ್ರ ಆಡಲಾಗಿದೆ. ಅಂದರೆ ಕೋವಿಡ್ ಭೀತಿಯ ಕಾರಣ 2020, 2021 ಮತ್ತು 2022 ರಲ್ಲಿ ಟೂರ್ನಿಯನ್ನು ಆಯೋಜಿಸಲಾಗಿರಲಿಲ್ಲ. ಇನ್ನು 2018 ರಲ್ಲಿ ವ್ಯಾಂಕೋವರ್ ನೈಟ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, 2019 ರಲ್ಲಿ ವಿನ್ನಿಪೆಗ್ ಹಾಕ್ಸ್ ತಂಡ ಕಿರೀಟ ಮುಡಿಗೇರಿಸಿಕೊಂಡಿತು. ಹಾಗೆಯೇ 2023 ರಲ್ಲಿ ಮಾಂಟ್ರಿಯಲ್ ಟೈಗರ್ಸ್ ಚಾಂಪಿಯನ್ ಪಟಕ್ಕೇರಿತು.
ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ20 ಲೀಗ್ನಲ್ಲಿ ಟೊರೊಂಟೊ ನ್ಯಾಷನಲ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಒಂಟಾರಿಯೊದ ಸಿಎಎ ಸೆಂಟರ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಾಂಟ್ರಿಯಲ್ ಟೈಗರ್ಸ್ ಮತ್ತು ಟೊರೊಂಟೊ ನ್ಯಾಷನಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೊರೊಂಟೊ ನ್ಯಾಷನಲ್ಸ್ ತಂಡದ ನಾಯಕ ಕಾಲಿನ್ ಮನ್ರೊ ಬೌಲಿಂಗ್ ಆಯ್ದುಕೊಂಡರು.
ಅದರಂತೆ ಇನಿಂಗ್ಸ್ ಆರಂಭಿಸಿದ ಮಾಂಟ್ರಿಯಲ್ ಟೈಗರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 36 ರನ್ಗಳಿಸುಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕಣಕ್ಕಿಳಿದ ಕಾರ್ಬಿನ್ ಬಾಷ್ 33 ಎಸೆತಗಳಲ್ಲಿ 35 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಈ ರನ್ಗಳ ನೆರವಿನಿಂದ ಮಾಂಟ್ರಿಯಲ್ ಟೈಗರ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 96 ರನ್ ಕಲೆಹಾಕಿತು.
97 ರನ್ಗಳ ಸುಲಭ ಗುರಿ ಬೆನ್ನತ್ತಿದ ಟೊರೊಂಟೊ ನ್ಯಾಷನಲ್ಸ್ ತಂಡವು 12 ರನ್ ಕಲೆಹಾಕುವಷ್ಟರಲ್ಲಿ ಕಾಲಿನ್ ಮನ್ರೊ (0) ಹಾಗೂ ಉನ್ಮುಕ್ತ್ ಚಂದ್ (4) ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್ಗೆ ಆಗಮಿಸಿದ ಆಂಡ್ರೀಸ್ ಗೌಸ್(58) ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (30) ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 15 ಓವರ್ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಟೊರೊಂಟೊ ನ್ಯಾಷನಲ್ಸ್ ತಂಡವು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
𝐓𝐡𝐞 𝐦𝐨𝐦𝐞𝐧𝐭 𝐭𝐡𝐞𝐲 𝐰𝐨𝐫𝐤𝐞𝐝 𝐫𝐞𝐚𝐥𝐥𝐲 𝐡𝐚𝐫𝐝 𝐟𝐨𝐫 𝐢𝐬 𝐡𝐞𝐫𝐞! 🤩
Presenting you the #GT20Canada Season 4️⃣ Champions! 🙌🏆#GlobalT20 | #CricketsNorth | #MTvTN pic.twitter.com/nbuCYuq58u
— GT20 Canada (@GT20Canada) August 12, 2024
ಮಾಂಟ್ರಿಯಲ್ ಟೈಗರ್ಸ್ ಪ್ಲೇಯಿಂಗ್ 11: ಕ್ರಿಸ್ ಲಿನ್ (ನಾಯಕ) , ಟಿಮ್ ಸೀಫರ್ಟ್ (ವಿಕೆಟ್ ಕೀಪರ್) , ಪರ್ವೀನ್ ಕುಮಾರ್ , ಶೆರ್ಫೇನ್ ರುದರ್ಫೋರ್ಡ್ , ಗೆರ್ಹಾರ್ಡ್ ಎರಾಸ್ಮಸ್ , ಅಜ್ಮತುಲ್ಲಾ ಒಮರ್ಜಾಯ್ , ಕಾರ್ಬಿನ್ ಬಾಷ್ , ಅನೂಪ್ ರವಿ , ಅಯಾನ್ ಅಫ್ಜಲ್ ಖಾನ್ , ಜಹೂರ್ ಖಾನ್ , ಜಸ್ಕರನ್ ಸಿಂಗ್.
ಇದನ್ನೂ ಓದಿ: Rohit Sharma: ಈ ಒಂದು ದಾಖಲೆ ಬರೆಯಲು ರೋಹಿತ್ ಶರ್ಮಾ ಮುಂದಿನ ವರ್ಷದವರೆಗೆ ಕಾಯಲೇಬೇಕು..!
ಟೊರೊಂಟೊ ನ್ಯಾಷನಲ್ಸ್ ಪ್ಲೇಯಿಂಗ್ 11: ಕಾಲಿನ್ ಮುನ್ರೊ (ನಾಯಕ) , ಉನ್ಮುಕ್ತ್ ಚಂದ್ (ವಿಕೆಟ್ ಕೀಪರ್) , ಆಂಡ್ರೀಸ್ ಗೌಸ್ , ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ , ಅರ್ಮಾನ್ ಕಪೂರ್ , ಮೊಹಮ್ಮದ್ ನವಾಜ್ , ರೊಮಾರಿಯೊ ಶೆಫರ್ಡ್ , ನಿಖಿಲ್ ದತ್ತಾ , ಜತೀಂದ್ರಪಾಲ್ ಮಥಾರು , ಜೇಸನ್ ಬೆಹ್ರೆಂಡಾರ್ಫ್ , ಜುನೈದ್ ಸಿದ್ದಿಕ್.