
ತಿಲಕ್ ವರ್ಮಾ ಅವರ ಚೊಚ್ಚಲ ಐಪಿಎಲ್ ಶತಕ ಮತ್ತು ಅಶ್ವನಿ ಕುಮಾರ್ ಅವರ ಮಾರಕ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಸೋಮವಾರ ಗುಜರಾತ್ ಟೈಟಾನ್ಸ್ ತಂಡವನ್ನು 99 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಗುಜರಾತ್‌ಗೆ 200 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡವು 15.5 ಓವರ್‌ಗಳಲ್ಲಿ 100 ರನ್‌ಗಳಿಗೆ ಆಲೌಟ್ ಆಯಿತು.
16 ನೇ ಓವರ್‌ನ ಐದನೇ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಗಜನ್‌ಫರ್ ಎಲ್‌ಬಿಡಬ್ಲ್ಯೂ ಮಾಡುವ ಮೂಲಕ ಗುಜರಾತ್ ತಂಡವನ್ನು 100 ರನ್‌ಗಳಿಗೆ ಔಟ್ ಮಾಡಿದರು. ಇದರೊಂದಿಗೆ, ಮುಂಬೈ ಪಂದ್ಯವನ್ನು 99 ರನ್‌ಗಳಿಂದ ಗೆದ್ದುಕೊಂಡಿತು.
ಅಶ್ವಿನ್ ಕುಮಾರ್, ಶಾರುಖ್ ಖಾನ್ ಅವರನ್ನು ಔಟ್ ಮಾಡಿದರು. 13 ಓವರ್‌ಗಳಲ್ಲಿ ಸ್ಕೋರ್ ಎಂಟು ವಿಕೆಟ್‌ಗೆ 86 ರನ್ ಆಗಿದೆ.
ಗುಜರಾತ್ 11ನೇ ಓವರ್ ವೇಳೆಗೆ ಆರು ವಿಕೆಟ್ ಕಳೆದುಕೊಂಡಿತು. ಅಶ್ವಿನಿ ಕುಮಾರ್ ಆರನೇ ವಿಕೆಟ್ ಪಡೆದರು. ರಾಹುಲ್ ತೆವಾಟಿಯಾ ಎಂಟು ರನ್ ಗಳಿಸಿ ಔಟಾದರು. ರಶೀದ್ ಖಾನ್ ಈಗ ಬ್ಯಾಟಿಂಗ್ ಮಾಡಲು ಇಳಿದಿದ್ದಾರೆ.
ಅಶ್ವಿನಿ ಕುಮಾರ್, ಶುಭ್‌ಮನ್ ಗಿಲ್ ಅವರನ್ನು ಔಟ್ ಮಾಡಿದರು. ಗಿಲ್ 13 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ಈಗ ಗ್ಲೆನ್ ಫಿಲಿಪ್ಸ್ ವಾಷಿಂಗ್ಟನ್ ಸುಂದರ್ ಜೊತೆ ಸೇರಿಕೊಂಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಮೊದಲ ಎಸೆತದಲ್ಲೇ ಸಾಯಿ ಸುದರ್ಶನ್ ಅವರನ್ನು ಔಟ್ ಮಾಡುವ ಮೂಲಕ ಗುಜರಾತ್ ಟೈಟಾನ್ಸ್‌ಗೆ ಮೊದಲ ಹೊಡೆತ ನೀಡಿದರು. ಚೇಸಿಂಗ್‌ನಲ್ಲಿ ಗುಜರಾತ್ ಕಳಪೆ ಆರಂಭವನ್ನು ಕಂಡಿತು. ಸುದರ್ಶನ್ ಖಾತೆ ತೆರೆಯಲೂ ವಿಫಲರಾದರು. ಇದು ಐಪಿಎಲ್ 2026 ರಲ್ಲಿ ಬುಮ್ರಾ ಅವರ ಮೊದಲ ವಿಕೆಟ್ ಆಗಿದೆ.
ತಿಲಕ್ ವರ್ಮಾ ಅವರ ಭರ್ಜರಿ ಶತಕದ ಸಹಾಯದಿಂದ, ಮುಂಬೈ ಇಂಡಿಯನ್ಸ್ ಗುಜರಾತ್ ಟೈಟಾನ್ಸ್‌ಗೆ 200 ರನ್‌ಗಳ ಗುರಿಯನ್ನು ನೀಡಿದೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ತಿಲಕ್ ವರ್ಮಾ ಅವರ 101 ಮತ್ತು ನಮನ್ ಧೀರ್ ಅವರ 45 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 199 ರನ್ ಗಳಿಸಿತು. ಗುಜರಾತ್ ಪರ ರಬಾಡ ಮೂರು ವಿಕೆಟ್ ಪಡೆದರೆ, ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.
ತಿಲಕ್ ವರ್ಮಾ 33 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಅವರು ಹಾರ್ದಿಕ್ ಪಾಂಡ್ಯ ಅವರೊಂದಿಗೆ 40 ಕ್ಕೂ ಹೆಚ್ಚು ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಮುಂಬೈ ಸ್ಕೋರ್ ನಾಲ್ಕು ವಿಕೆಟ್‌ಗಳಿಗೆ 150 ತಲುಪಿತು.
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ 2000 ರನ್ ಪೂರೈಸಿದ್ದಾರೆ. ಅವರು ಪ್ರಸ್ತುತ ತಿಲಕ್ ವರ್ಮಾ ಅವರೊಂದಿಗೆ ಕ್ರೀಸ್‌ನಲ್ಲಿದ್ದಾರೆ. 14 ಓವರ್‌ಗಳ ನಂತರ ಸ್ಕೋರ್ ನಾಲ್ಕು ವಿಕೆಟ್‌ಗೆ 103 ರನ್ ಆಗಿದೆ.
ನಮನ್ ಧೀರ್, ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಔಟಾದರು. ಅವರು 32 ಎಸೆತಗಳಲ್ಲಿ 45 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಈಗ ತಿಲಕ್ ವರ್ಮಾ ಜೊತೆ ಸೇರಿಕೊಂಡಿದ್ದಾರೆ.
ವೇಗದ ಬೌಲರ್ ಕಗಿಸೊ ರಬಾಡ ಮುಂಬೈ ತಂಡದ ಅಗ್ರ ಕ್ರಮಾಂಕದ ಬೆನ್ನೆಲುಬನ್ನು ಮುರಿದಿದ್ದಾರೆ. ಡ್ಯಾನಿಶ್ ಮಾಲೆವಾರ್ ಮತ್ತು ಕ್ವಿಂಟನ್ ಡಿ ಕಾಕ್ ನಂತರ, ರಬಾಡ ಈಗ ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡುವ ಮೂಲಕ ಮುಂಬೈ ತಂಡಕ್ಕೆ ಮೂರನೇ ಹೊಡೆತ ನೀಡಿದ್ದಾರೆ. ಸೂರ್ಯಕುಮಾರ್ ಯಾದವ್ ತಂಡವನ್ನು ಮತ್ತೊಮ್ಮೆ ನಿರಾಶೆಗೊಳಿಸಿ 15 ರನ್‌ಗಳಿಗೆ ಔಟಾದರು.
ಕಾಗಿಸೊ ರಬಾಡ ಮುಂಬೈ ತಂಡಕ್ಕೆ 2ನೇ ಹೊಡೆತ ನೀಡಿದರು. ರಬಾಡ, ಡ್ಯಾನಿಶ್ ಮಾಲೆವಾರ್ ಮತ್ತು ನಂತರ ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿದರು. ಕ್ವಿಂಟನ್ ನಂತರ ಸೂರ್ಯಕುಮಾರ್ ಯಾದವ್ ಮೈದಾನಕ್ಕೆ ಬಂದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಗುಜರಾತ್ ತಂಡ ಎರಡನೇ ಓವರ್ ನಲ್ಲಿ ಮೊದಲ ಹೊಡೆತ ನೀಡಿದೆ. ಮುಂಬೈ ಇನ್ನಿಂಗ್ಸ್ ನ ಎರಡನೇ ಓವರ್ ನ ಐದನೇ ಎಸೆತದಲ್ಲಿ ಕಗಿಸೊ ರಬಾಡ ಅವರು ದಾನಿಶ್ ಮಾಲೆವಾರ್ ಅವರನ್ನು 2 ರನ್ ಗೆ ಎಲ್ ಬಿಡಬ್ಲ್ಯೂ ಮೂಲಕ ಔಟ್ ಮಾಡಿದರು.
ಶುಭ್‌ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಶೀದ್ ಖಾನ್, ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ, ಅಶೋಕ್ ಶರ್ಮಾ.
ಇಂಪ್ಯಾಕ್ಟ್ ಪ್ಲೇಯರ್: ರಾಹುಲ್ ತೆವಾಟಿಯಾ, ಜೇಸನ್ ಹೋಲ್ಡರ್, ಅನುಜ್ ರಾವತ್, ಕುಲ್ವಂತ್ ಖೆಜ್ರೋಲಿಯಾ, ಮಾನವ್ ಸುತಾರ್.
ಡ್ಯಾನಿಶ್ ಮಾಲೆವಾರ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ನಮನ್ ಧೀರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ತಿಲಕ್ ವರ್ಮಾ, ಶೆರ್ಫಾನೆ ರುದರ್‌ಫೋರ್ಡ್, ಮಿಚೆಲ್ ಸ್ಯಾಂಟ್ನರ್, ಕ್ರಿಶ್ ಭಗತ್, ಜಸ್ಪ್ರೀತ್ ಬುಮ್ರಾ, ಅಲ್ಲಾ ಘಜನ್‌ಫರ್.
ಇಂಪ್ಯಾಕ್ಟ್ ಪ್ಲೇಯರ್: ರಾಜ್ ಬಾವಾ, ಅಶ್ವಿನಿ ಕುಮಾರ್, ಕಾರ್ಬಿನ್ ಬಾಷ್, ಮಯಾಂಕ್ ರಾವತ್, ರಘು ಶರ್ಮಾ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡದ ನಾಯಕ ಶುಭ್‌ಮನ್ ಗಿಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:02 pm, Mon, 20 April 26