ಮುಂಬೈ ತಂಡದಿಂದ ಕಣ್ಣೆದುರೇ ಫಿಕ್ಸಿಂಗ್? ತಮ್ಮದೇ ತಂಡದ ವಿಕೆಟ್ ಬಿದ್ದರೂ ನಗುತ್ತಿದ್ದ ಗಿಲ್

ಐಪಿಎಲ್ 2023 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿಬಂದಿವೆ. ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಸನ್ನೆಗಳು ಮತ್ತು ಗಿಲ್ ಅವರ ನಗು ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಆದರೆ, ಇವುಗಳಿಗೆ ಬೇರೆ ಅರ್ಥಗಳಿವೆ ಎಂದು ಕೆಲವರು ವಾದಿಸುತ್ತಿದ್ದಾರೆ. ಈ ಆರೋಪಗಳು ವಾಟ್ಸಾಪ್ ಯೂನಿವರ್ಸಿಟಿಯಿಂದ ಹುಟ್ಟಿಕೊಂಡಿರಬಹುದು ಎಂಬ ಅಭಿಪ್ರಾಯವೂ ಇದೆ.

ಮುಂಬೈ ತಂಡದಿಂದ ಕಣ್ಣೆದುರೇ ಫಿಕ್ಸಿಂಗ್? ತಮ್ಮದೇ ತಂಡದ ವಿಕೆಟ್ ಬಿದ್ದರೂ ನಗುತ್ತಿದ್ದ ಗಿಲ್
GT vs Mumbai

Updated on: May 31, 2025 | 8:27 AM

ಮ್ಯಾಚ್​ ಫಿಕ್ಸಿಂಗ್ ಭೂತ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಈ ರೀತಿಯ ಆರೋಪ ಕೇಳಿ ಬಂದಿದೆ. ಈ ಮೊದಲು ಅದು ಸಾಬೀತಾಗಿದ್ದರಿಂದ ಎರಡು ತಂಡಗಳನ್ನು ಬ್ಯಾನ್ ಕೂಡ ಮಾಡಲಾಗಿತ್ತು. ಈ ಬಾರಿಯ ಐಪಿಎಲ್​ನಲ್ಲಿ ಅದೇ ರೀತಿಯ ಆರೋಪಗಳು ಎದುರಾಗುತ್ತಿವೆ. ಅದರಲ್ಲೂ ಮುಂಬೈ ಇಂಡಿಯನ್ಸ್ (MI) ಮ್ಯಾಚ್ ಇದ್ದಾಗ ಈ ವಿಷಯ ಹೆಚ್ಚು ಚರ್ಚೆಗೆ ಕಾರಣ ಆಗುತ್ತಿದೆ. ಈಗ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮ್ಯಾಚ್​ನಲ್ಲೂ ಫಿಕ್ಸಿಂಗ್ ಆರೊಪ ಕೇಳಿ ಬಂದಿದೆ.

ಟಾಸ್ ಗೆದ್ದ ಬಳಿಕ ಜಿಟಿ ಕ್ಯಾಪ್ಟನ್ ಶುಭಮನ್ ಗಿಲ್ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಸನ್ನೆ ಮೂಲಕ ಏನೋ ಚರ್ಚೆ ಆಗಿದೆ. ಇದನ್ನೇ ಎಡಿಟ್ ಮಾಡಿ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಾರೆ. ‘ಕಣ್ಣೆದುರೇ ಫಿಕ್ಸಿಂಗ್ ನಡೆದಿದೆ’ ಎಂದು ಹೇಳಿದ್ದಾರೆ. ಅಲ್ಲದೆ ಇದಕ್ಕೆ ಕಾರಣ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರನ್ನು ದೂಷಿಸಿದ್ದಾರೆ. ಆದರೆ, ಈ ಆರೋಪಕ್ಕೆ ಯಾವುದೇ ಅರ್ಥ ಇಲ್ಲ. ವಾಟ್ಸಾಪ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಇದನ್ನು ಮಾಡಿರಬಹುದು ಎಂದು ಕೆಲವರು ತಿರುಗೇಟು ನೀಡಿದ್ದಾರೆ.


ಇನ್ನು, ಸಾಯಿ ಸುದರ್ಶನ್ ಅವರು ರಿಚರ್ಡ್​ ಗ್ಲೀಸನ್​ಗೆ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಸಹ ಆಟಗಾರರ ಜೊತೆ ಕುಳಿತಿದ್ದ ಗಿಲ್ ಅವರು ಡ್ರೆಸ್ಸಿಂಗ್ ರೂಂನತ್ತ ನಡೆದರು. ಔಟ್ ಆದ ಬೇಸರ ಇದ್ದರೂ ಅವರು ನಕ್ಕಿದ್ದಾರೆ. ‘ವಿಕೆಟ್ ಬಿದ್ದರೂ ಗಿಲ್ ನಗುತ್ತಿದ್ದಾರೆ. ಇದರ ಅರ್ಥವೇನು? ಫಿಕ್ಸಿಂಗ್ ಅಲ್ಲದೆ ಇನ್ನೇನು’ ಎನ್ನುವ ಪ್ರಶ್ನೆಗಳನ್ನು ಕೆಲವರು ಕೇಳುತ್ತಿದ್ದಾರೆ. ಆದರೆ, ಅಸಲಿಗೆ ಅಲ್ಲಿ ನಡೆದಿದ್ದೇ ಬೇರೆ. ಗಿಲ್​ಗೆ ಎದುರ ಯಾರೋ ಸಿಕ್ಕಿ ನಕ್ಕರು. ಅದಕ್ಕೆ ಪ್ರತಿಯಾಗಿ ಅವರು ನಕ್ಕಿದ್ದಾರೆ ಅಷ್ಟೇ. ಆದರೆ, ಇದಕ್ಕೆ ಬೆರೆಯದೇ ಅರ್ಥ ನೀಡಲಾಗಿದೆ.

ಇದನ್ನೂ ಓದಿ: ಪಂದ್ಯದ ಮಧ್ಯೆ ಬೌಂಡರಿ ಲೈನ್ ಬಳಿ ಬುಮ್ರಾ-ಜಯವರ್ಧನೆ ನಡುವೆ ಜಗಳ

ಎಲಿಮಿನೇಟರ್ ಪಂದ್ಯ ಮೇ 30ರಂದು ನಡೆಯಿತು. ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟ್ ಬೀಸಿ ನಿಗದಿತ 20 ಓವರ್​ಗಳಲ್ಲಿ 228 ರನ್ ಕಲೆ ಹಾಕಿತು. ಇದರಲ್ಲಿ ರೋಹಿತ್ ಅವರ 80 ರನ್​ಗಳು ಸೇರಿದೆ. 229ರನ್​ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಜಿಟಿಗೆ ಆರಂಭದಲ್ಲೇ ಆಘಾತ ಆಯಿತು. ನಾಯಕ ಶುಭ್​ಮನ್ ಗಿಲ್ ಕೇವಲ 1 ರನ್​ಗೆ ಪೆವಿಲಿಯನ್ ಸೇರಿದರು. ಸಾಯಿ ಸುದರ್ಶನ್ ಹಾಗೂ ವಾಷಿಂಗ್ಟನ್ ಜೊತೆಯಾಟ ತಂಡಕ್ಕೆ ಆಸರೆ ಆಯಿತು. ಆದರೆ, ಗೆಲುವು ಸಿಗಲಿಲ್ಲ. 20 ರನ್​ಗಳಿಂದ ಜಿಟಿ ಸೋಲನ್ನು ಒಪ್ಪಿಕೊಂಡಿತು.

ಇನ್ನಷ್ಟು ಕ್ರಿಕೆಟ್  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 8:27 am, Sat, 31 May 25