ಎರಡೂ ಟೆಸ್ಟ್ ಪಂದ್ಯಗಳಿಗೆ ನನ್ನನ್ನು ಆಯ್ಕೆ ಮಾಡಬೇಡಿ! ತಂಡಕ್ಕಾಗಿ ಸ್ಥಾನ ತ್ಯಾಗ ಮಾಡಿದ್ದ ಹನುಮ ವಿಹಾರಿ

ಎರಡೂ ಟೆಸ್ಟ್ ಪಂದ್ಯಗಳಿಗೆ ನನ್ನನ್ನು ಆಯ್ಕೆ ಮಾಡಬೇಡಿ! ತಂಡಕ್ಕಾಗಿ ಸ್ಥಾನ ತ್ಯಾಗ ಮಾಡಿದ್ದ ಹನುಮ ವಿಹಾರಿ
ಹನುಮ ವಿಹಾರಿ

Hanuma Vihari: ನಮ್ಮ ತಂಡ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದೆ ಹೀಗಾಗಿ ನಮಗೆ ಒಬ್ಬ ಹೆಚ್ಚುವರಿ ಬೌಲರ್​ ಅವಶ್ಯಕತೆ ಇದೆ. ಇದನ್ನು ಪರಿಗಣಿಸಿ ನಮಗೆ 6 ಬ್ಯಾಟ್ಸ್‌ಮನ್‌ಗಳು ಅಗತ್ಯವಿಲ್ಲ ಆದ್ದರಿಂದ ನಾನು ನನ್ನ ಸ್ಥಾನವನ್ನು ಬಿಟ್ಟುಕೊಡುತ್ತೇನೆ ಎಂದು ವಿಹಾರಿ ನನ್ನ ಬಳಿ ಹೇಳಿಕೊಂಡಿದ್ದರು ಎಂದು ಹೇಳಿದ್ದಾರೆ.

TV9kannada Web Team

| Edited By: pruthvi Shankar

Mar 03, 2022 | 5:51 PM

ಒಂದೆಡೆ ಪ್ರತಿಯೊಬ್ಬ ಆಟಗಾರನೂ ಒಂದಲ್ಲ ಒಂದು ರೀತಿಯಲ್ಲಿ ಆಡುವ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಬಯಸುತ್ತಿದ್ದರೆ, ಮತ್ತೊಂದೆಡೆ ತಂಡದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಆಸೆಗಳನ್ನು ಬಿಟ್ಟುಕೊಡುವ ಆಟಗಾರರಿದ್ದಾರೆ. ಅಂತಹ ಆಟಗಾರರು ತಂಡದ ಒಳಿತಿನ ಬಗ್ಗೆ ಮಾತ್ರ ಯೋಚಿಸುತ್ತಿರುತ್ತಾರೆ. ಅದಕ್ಕಾಗಿ ತಮ್ಮ ಸ್ಥಾನವನ್ನು ತ್ಯಾಗ ಮಾಡಲು ಹಿಂಜರಿಯುವುದಿಲ್ಲ. ಅಂತಹ ಒಬ್ಬ ಆಟಗಾರ ಹನುಮ ವಿಹಾರಿ (Hanuma Vihari), ಅವರ ಬಗ್ಗೆ ಮಾಜಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ದೊಡ್ಡ ಸುದ್ದಿ ಬಹಿರಂಗಪಡಿಸಿದ್ದಾರೆ. 2019 ರಲ್ಲಿ ಹನುಮ ವಿಹಾರಿ ತನ್ನನ್ನು ಆಡುವ XI ನಿಂದ ಹೊರಗಿಡುವಂತೆ ತಂಡಕ್ಕೆ ಸಲಹೆ ನೀಡಿದರು ಎಂದು ಆರ್ ಶ್ರೀಧರ್ ಹೇಳಿದ್ದಾರೆ.

ಕ್ರಿಕ್‌ಬಜ್‌ ಜೊತೆ ಮಾತನಾಡಿದ ಶ್ರೀಧರ್, 2019 ರಲ್ಲಿ ವೈಜಾಗ್ ಟೆಸ್ಟ್‌ನಲ್ಲಿ, ಹನುಮ ವಿಹಾರಿ ನನ್ನ ಬಳಿಗೆ ಬಂದು ಸರ್ ನಾನು ಈ ಟೆಸ್ಟ್ ಪಂದ್ಯ ಮತ್ತು ಮುಂದಿನ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ ಎಂದು ಹೇಳಿದ್ದು ನನಗೆ ನೆನಪಿದೆ. ನಮ್ಮ ತಂಡ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದೆ ಹೀಗಾಗಿ ನಮಗೆ ಒಬ್ಬ ಹೆಚ್ಚುವರಿ ಬೌಲರ್​ ಅವಶ್ಯಕತೆ ಇದೆ. ಇದನ್ನು ಪರಿಗಣಿಸಿ ನಮಗೆ 6 ಬ್ಯಾಟ್ಸ್‌ಮನ್‌ಗಳು ಅಗತ್ಯವಿಲ್ಲ ಆದ್ದರಿಂದ ನಾನು ನನ್ನ ಸ್ಥಾನವನ್ನು ಬಿಟ್ಟುಕೊಡುತ್ತೇನೆ ಎಂದು ವಿಹಾರಿ ನನ್ನ ಬಳಿ ಹೇಳಿಕೊಂಡಿದ್ದರು ಎಂದು ಹೇಳಿದ್ದಾರೆ. ಈಗ ಹನುಮ ವಿಹಾರಿ ಬಗ್ಗೆ ಶ್ರೀಧರ್ ಬಹಿರಂಗಪಡಿಸಿರುವ ವಿಚಾರ ನಿಜಕ್ಕೂ ಆಘಾತಕಾರಿಯಾಗಿದೆ. ಹನುಮ ವಿಹಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಕ್ಕಿರುವ ಅವಕಾಶಗಳು ತುಂಬಾ ಕಡಿಮೆ. ಆದರೂ ತಂಡಕ್ಕಾಗಿ ತಮ್ಮ ಸ್ಥಾನವನ್ನೇ ತ್ಯಜಿಸಲು ಸಿದ್ದರಾಗಿದ್ದು ನಿಜಕ್ಕೂ ಆಶ್ಚರ್ಯಕರವಾಗಿದೆ.

ಹನುಮ ವಿಹಾರಿ ಟೆಸ್ಟ್ ವೃತ್ತಿ ಹನುಮ ವಿಹಾರಿ ಇದುವರೆಗೆ 13 ಟೆಸ್ಟ್‌ಗಳಲ್ಲಿ 34.20 ಸರಾಸರಿಯಲ್ಲಿ 684 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಒಂದು ಶತಕ ಮತ್ತು 4 ಅರ್ಧ ಶತಕಗಳು ಹೊರಹೊಮ್ಮಿವೆ. ವಿಹಾರಿ ಭಾರತದಲ್ಲಿ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದು, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ಕಠಿಣ ಪರಿಸ್ಥಿತಿಗಳಲ್ಲಿ ಉಳಿದ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

ಹನುಮ ವಿಹಾರಿ ಯಾವ ಸ್ಥಾನದಲ್ಲಿ ಆಡಲಿದ್ದಾರೆ? ಮಧ್ಯಮ ಕ್ರಮಾಂಕದಲ್ಲಿ ಪೂಜಾರ ಮತ್ತು ರಹಾನೆ ಇರುವ ಕಾರಣ, ಹನುಮ ವಿಹಾರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ ಆದರೆ ಈಗ ಅವರ ಸಮಯ ಬಂದಿದೆ. ರೋಹಿತ್ ಶರ್ಮಾ ಕೂಡ ಅವರಿಗೆ ಆಡುವ XI ನಲ್ಲಿ ಅವಕಾಶ ನೀಡಲು ಸೂಚಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 55ಕ್ಕೂ ಹೆಚ್ಚು ಸರಾಸರಿ ಹೊಂದಿರುವ ಹನುಮ ಈಗ ತನ್ನನ್ನು ತಾನು ಸಾಬೀತುಪಡಿಸಬೇಕಾಗಿದೆ. ಹನುಮ ವಿಹಾರಿ ಯಾವ ನಂಬರ್‌ನಲ್ಲಿ ಬ್ಯಾಟ್ ಮಾಡುತ್ತಾರೆ ಎಂಬುದು ಪ್ರಶ್ನೆ. ಪೂಜಾರ 3ನೇ ಕ್ರಮಾಂಕದಲ್ಲಿ ಆಡುತ್ತಾರಾ ಅಥವಾ ಅಜಿಂಕ್ಯ ರಹಾನೆ ಬದಲಿಗೆ 5ನೇ ಕ್ರಮಾಂಕದಲ್ಲಿ ಅವಕಾಶ ಪಡೆಯುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:Ranji Trophy 2022: ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಕನ್ನಡಿಗ ದೇವದತ್ ಪಡಿಕ್ಕಲ್..!

Follow us on

Most Read Stories

Click on your DTH Provider to Add TV9 Kannada