Harbhajan Singh: ಧೋನಿ ನನಗೆ ಸಹಾಯ ಮಾಡಬಹುದಿತ್ತು! ತನ್ನ ನಿವೃತ್ತಿಗೆ ಬಿಸಿಸಿಐ ಕಾರಣ ಎಂದ ಹರ್ಭಜನ್ ಸಿಂಗ್

Harbhajan Singh: ಬಿಸಿಸಿಐನಲ್ಲಿರುವ ಕೆಲವರ ಕಾರಣದಿಂದ ನಾನು ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಅವಕಾಶ ಸಿಕ್ಕಿದ್ದರೆ ನಾನು ಇನ್ನೂ 4-5 ವರ್ಷ ಆಡಬಹುದಿತ್ತು.

Harbhajan Singh: ಧೋನಿ ನನಗೆ ಸಹಾಯ ಮಾಡಬಹುದಿತ್ತು! ತನ್ನ ನಿವೃತ್ತಿಗೆ ಬಿಸಿಸಿಐ ಕಾರಣ ಎಂದ ಹರ್ಭಜನ್ ಸಿಂಗ್
ಧೋನಿ, ಹರ್ಭಜನ್ ಸಿಂಗ್
Follow us
TV9 Web
| Updated By: ಪೃಥ್ವಿಶಂಕರ

Updated on: Jan 02, 2022 | 3:28 PM

ಭಾರತದ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 23 ವರ್ಷಗಳ ತನ್ನ ವೃತ್ತಿಜೀವನದಲ್ಲಿ, ಭಜ್ಜಿ ಟೀಮ್ ಇಂಡಿಯಾವನ್ನು ಅನೇಕ ಅದ್ಭುತ ವಿಜಯಗಳಿಗೆ ಮುನ್ನಡೆಸಿದರು. ಅವರು 2011 ರಲ್ಲಿ ವಿಶ್ವ ಚಾಂಪಿಯನ್ ಆದ ಟೀಮ್ ಇಂಡಿಯಾದ ಭಾಗವಾಗಿದ್ದರು. ಆದರೆ, 2015 ರಿಂದ ಅವರು ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ. ನಿವೃತ್ತಿಯ ನಂತರ, ಈಗ ಹರ್ಭಜನ್ ಸಿಂಗ್ ತಮ್ಮ ವೃತ್ತಿ ಬದುಕಿನ ಏರಿಳತಗಳ ಬಗ್ಗೆ ದೊಡ್ಡ ಮಾಹಿತಿ ಬಹಿರಂಗಪಡಿಸಿದರು. ಬಿಸಿಸಿಐ ಅಧಿಕಾರಿಗಳು ಮತ್ತು ಮಹೇಂದ್ರ ಸಿಂಗ್ ಧೋನಿ ನನ್ನನ್ನು ತಂಡದಿಂದ ಹೊರಗಿಡುವ ಹಿಂದೆ ಇದ್ದರು ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಹರ್ಭಜನ್ ಸಿಂಗ್ ದೀರ್ಘಕಾಲದವರೆಗೆ ಟೀಮ್ ಇಂಡಿಯಾದ ಪ್ರಮುಖ ಭಾಗವಾಗಿದ್ದರು. ಆದರೆ, 2011ರ ನಂತರ ತಂಡಕ್ಕೆ ಬಂದು ಹೋಗುತ್ತಿದ್ದ ಅವರು ಮೊದಲಿನಂತೆ ತಂಡದಲ್ಲಿ ಕಾಯಂ ಆಗಿ ಉಳಿಯಲು ಸಾಧ್ಯವಾಗಲಿಲ್ಲ. ಮೊದಲು ಅವರನ್ನು 2013 ರಲ್ಲಿ ICC ಚಾಂಪಿಯನ್ಸ್ ಟ್ರೋಫಿಯಿಂದ ಕೈಬಿಡಲಾಯಿತು. ನಂತರ ಅವರು 2015 ರ ವಿಶ್ವಕಪ್‌ಗೆ ಆಯ್ಕೆಯಾಗಲಿಲ್ಲ. ಹರ್ಭಜನ್ ಸಿಂಗ್ 2016 ರಲ್ಲಿ T20 ವಿಶ್ವಕಪ್‌ಗೆ ಆಯ್ಕೆಯಾದರು ಆದರೆ ಅವರು ಬರಿ ಬೆಂಚ್ ಕಾದಿದ್ದೆ ಬಂತು. ಭಜ್ಜಿ ಅವರ ವೃತ್ತಿಜೀವನದ ಕೊನೆಯ ವರ್ಷಗಳಲ್ಲಿ ಅವರಿಗೆ ಅವಕಾಶ ಸಿಗದೆ ಇರುವುದಕ್ಕೆ ಬಿಸಿಸಿಐ ಮಾತ್ರವಲ್ಲದೆ ಧೋನಿಯವರ ಮೇಲೂ ಹರ್ಭಜನ್ ಆರೋಪ ಹೊರಿಸಿದ್ದಾರೆ.

ಬಿಸಿಸಿಐ ಅಧಿಕಾರಿಗಳನ್ನು ದೂರಿದ ಹರ್ಭಜನ್ ಸಿಂಗ್ ಬಿಸಿಸಿಐನಲ್ಲಿರುವ ಕೆಲವರ ಕಾರಣದಿಂದ ನಾನು ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಅವಕಾಶ ಸಿಕ್ಕಿದ್ದರೆ ನಾನು ಇನ್ನೂ 4-5 ವರ್ಷ ಆಡಬಹುದಿತ್ತು. ಅದೃಷ್ಟ ಯಾವಾಗಲೂ ನನ್ನೊಂದಿಗೆ ಇತ್ತು. ಆದರೆ ಕೆಲವು ಬಾಹ್ಯ ಅಂಶಗಳು ಮಾತ್ರ ನನ್ನ ಪರವಾಗಿರಲಿಲ್ಲ. ಅವರು ಸಂಪೂರ್ಣವಾಗಿ ನನ್ನ ವಿರುದ್ಧವಾಗಿದ್ದರು. ನಾನು 31 ವರ್ಷದವನಾಗಿದ್ದಾಗ 400 ವಿಕೆಟ್‌ಗಳನ್ನು ಪಡೆದಿದ್ದೆ. ಆಗ ನನ್ನ ಮನಸ್ಸಿನಲ್ಲಿ ಮುಂದಿನ 4-5 ವರ್ಷ ಆಡುವ ಯೋಚನೆ ಇತ್ತು. ನಾನು ಇನ್ನೂ ಆಡಿದ್ದರೆ 100 ಅಥವಾ 150 ವಿಕೆಟ್‌ಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.

ಧೋನಿ ನನ್ನನ್ನು ಬೆಂಬಲಿಸಲಿಲ್ಲ- ಭಜ್ಜಿ ಎಂಎಸ್ ಧೋನಿ ಆಗ ನಾಯಕರಾಗಿದ್ದರು ಆದರೆ ಇದು ಧೋನಿ ಮಟ್ಟಕ್ಕಿಂತ ಮೇಲಿತ್ತು ಎಂದು ನಾನು ಭಾವಿಸುತ್ತೇನೆ. ನನ್ನನ್ನು ತುಳಿಯಲು ಸ್ವಲ್ಪ ಮಟ್ಟಿಗೆ, ಕೆಲವು ಬಿಸಿಸಿಐ ಅಧಿಕಾರಿಗಳು ಭಾಗಿಯಾಗಿದ್ದರು. ಅವರು ನನಗೆ ನಾಯಕನಿಂದ ಯಾವುದೇ ಬೆಂಬಲ ಸಿಗದಂತ್ತೆ ಮಾಡಿದರು. ನಾಯಕ, ಕೋಚ್ ಅಥವಾ ತಂಡಕ್ಕಿಂತ ಬಿಸಿಸಿಐ ಯಾವಾಗಲೂ ಮೇಲುಗೈ ಹೊಂದಿದೆ. ಬಿಸಿಸಿಐನಿಂದ ಧೋನಿಗೆ ಇತರ ಆಟಗಾರರಿಗಿಂತ ಹೆಚ್ಚಿನ ಬೆಂಬಲವಿತ್ತು ಮತ್ತು ಇತರ ಆಟಗಾರರಿಗೂ ಅದೇ ರೀತಿಯ ಬೆಂಬಲ ಸಿಕ್ಕಿದ್ದರೆ, ಅವರು ಕೂಡ ಆಡುತ್ತಿದ್ದರು. ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡುವುದನ್ನು ಮರೆತಿದ್ದಾರೆ ಅಥವಾ ಮಾಡಲಿಲ್ಲ. ಪ್ರತಿಯೊಬ್ಬ ಆಟಗಾರನೂ ಭಾರತದ ಜರ್ಸಿ ಧರಿಸಿ ನಿವೃತ್ತಿ ಹೊಂದಲು ಬಯಸುತ್ತಾನೆ ಆದರೆ ಅದೃಷ್ಟ ಯಾವಾಗಲೂ ನಿಮ್ಮೊಂದಿಗೆ ಇರುವುದಿಲ್ಲ ಮತ್ತು ಕೆಲವೊಮ್ಮೆ ನೀವು ಬಯಸಿದಂತೆ ಆಗುವುದಿಲ್ಲ ಎಂದು ಭಜ್ಜಿ ಹೇಳಿದರು.

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ