ಭಾನುವಾರ ರಾತ್ರಿ ಟ್ರೆಂಟ್ಬ್ರಿಡ್ಜ್ನ ನ್ಯಾಟಿಂಗ್ಹ್ಯಾಮ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ತೃತೀಯ ಟಿ20 ಪಂದ್ಯದಲ್ಲಿ ಭಾರತ (England vs India) ಹೋರಾಡಿ ಸೋಲು ಕಂಡಿತು. ಕೆಲ ಬದಲಾವಣೆಗಳಿಂದ ಕೂಡಿದ್ದ ಟೀಮ್ ಇಂಡಿಯಾ ಬೌಲಿಂಗ್ ಪಡೆ ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ವಿಫಲವಾಯಿತು. ಇದರಿಂದಲೇ ಆಂಗ್ಲರ ಮೊತ್ತ 200ರ ಗಡಿ ದಾಟಿತು. ಭಾರತ ಅಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಸೂರ್ಯಕುಮಾರ್ ಯಾದವ್ (Suryakumar Yadav) ಆಕರ್ಷಕ ಶತಕ ಸಿಡಿಸಿ ತಂಡದ ಗೆಲುವಿಗೆ ಹೋರಾಟ ನಡೆಸಿದರೂ ಯಶಸ್ಸು ಸಿಗಲಿಲ್ಲ. ಆದರೂ ಸರಣಿಯನ್ನು 2-1 ಅಂತರದಿಂದ ಭಾರತ ವಶಪಡಿಸಿಕೊಂಡಿತು ಎಂಬುದು ಸಮಾಧಾನ. ಹೀಗಿರುವಾಗ ಭಾರತ- ಇಂಗ್ಲೆಂಡ್ ಎರಡನೇ ಟಿ20 ಪಂದ್ಯದ ನಡುವಣ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ಅಚ್ಚರಿ ಎಂಬಂತೆ ಇದರಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರ ಧ್ವನಿ ಇದೆ.
ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ನೀಡಿದ್ದ 171 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಲು ಬಂದ ಇಂಗ್ಲೆಂಡ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಹಾರ್ದಿಕ್ ಪಾಂಡ್ಯ ಕೂಡ ಬೌಲಿಂಗ್ ಮಾಡಿದ್ದರು. ಆದರೆ, ದುಬಾರಿ ಎನಿಸಿಕೊಂಡರು. ಇದರ ನಡುವೆ ಇಂಗ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್ನ 4ನೇ ಓವರ್ ಆಗುವಾಗ ಹಾರ್ದಿಕ್ ಆಡಿರುವ ಕೆಲ ಮಾತುಗಳು ಲೈವ್ನಲ್ಲಿ ರೆಕಾರ್ಡ್ ಆಗಿವೆ. ಆದರೆ, ಆಡಿಯೋ ತೀರಾ ಕಳಪೆಯಾಗಿದ್ದು, ಇದರಲ್ಲಿ ಹಾರ್ದಿಕ್ ಅವರು ರೋಹಿತ್ ಬಗ್ಗೆ ಫೀಲ್ಡರ್ ಜೊತೆ ಮಾತನಾಡುತ್ತಿದ್ದಾರೆ ಎಂದು ಹೇಳಲಾಗಿದೆ.
Suryakumar Yadav: ಶಾಕಿಂಗ್: ಸೂರ್ಯಕುಮಾರ್ ಬಗ್ಗೆ 10 ವರ್ಷದ ಹಿಂದೆ ರೋಹಿತ್ ಮಾಡಿದ್ದ ಟ್ವೀಟ್ ವೈರಲ್
“ನಾನು ಬೌಲಿಂಗ್ ಮಾಡಬೇಕಾದರೆ ನಾನು ಹೇಳಿದ್ದನ್ನ ಕೇಳು, ನಾನು ಹೇಳಿದಲ್ಲಿ ನಿಲ್ಲು, ಅವನು ಹೇಳಿದ ಕಡೆ ಅಲ್ಲ,” ಎಂಬ ರೀತಿ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಆಡಿಯೋ ಸ್ಪಷ್ಟವಾಗಿ ಕೇಳುತ್ತಿಲ್ಲ. ಆದರೂ ಅನೇಕರು ಇದೇರೀತಿ ಹಾರ್ದಿಕ್ ಹೇಳಿದ್ದಾರೆ ಎಂದು ಟ್ವೀಟ್ ಮಾಡುತ್ತಿದ್ದಾರೆ. ಆದರೆ, ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಇನ್ನೂ ತಿಳಿದಿಲ್ಲ.
Just because you are a better captain than rohit and you don’t eat 1000 vadapavs in a day…You can’t abuse his innocent mom on national television ?#HardikAbusedRohitpic.twitter.com/HWnRVhtcG3
— Cheeku. (@primeKohli) July 10, 2022
Opened Twitter to see #HardikAbusedRohit trending. Went through the tweets, could not find when or how Hardik abused Rohit.
Social media can be bizarre.
— Abhishek Mukherjee (@ovshake42) July 10, 2022
ಭಾನುವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ 216 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಭಾರತ ಬೇಗನೆ ರಿಷಭ್ ಪಂತ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಸೂರ್ಯಕುಮಾರ್ ಯಾದವ್ ಎಚ್ಚರಿಕೆಯಿಂದ ಸ್ಫೋಟಕ ಆಟವಾಡಿದರೆ ಶ್ರೇಯಸ್ ಅಯ್ಯರ್ ಅತ್ಯುತ್ತಮ ಸಾಥ್ ನೀಡಿದರು. ಇವರಿಬ್ಬರು 4ನೇ ವಿಕೆಟ್ಗೆ ಬರೋಬ್ಬರಿ 119 ರನ್ಗಳ ಜೊತೆಯಾಟ ಆಡಿದರು. ಅಯ್ಯರ್ ನಿರ್ಗಮನದ ಬಳಿಕ ಭಾರತ ದಿಢೀರ್ ಕುಸಿತ ಕಂಡಿತು. ಆದರೂ ಸೂರ್ಯಕುಮಾರ್ ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸುತ್ತಲೇ ಇದ್ದರು. ಆದರೆ, ಇದು ಫಲ ಸಿಗಲಿಲ್ಲ. 55 ಎಸೆತಗಳಲ್ಲಿ 14 ಫೋರ್, 6 ಸಿಕ್ಸರ್ ಸಿಡಿಸಿ 117 ರನ್ಗೆ ಔಟಾಗುವ ಮೂಲಕ ಭಾರತ ಸೋಲುಂಡಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಂಡಿಲ್ಲ, ಆದರೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಡೇವಿಡ್ ಮಲನ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಭಾರತೀಯ ಬೌಲರ್ಗಳನ್ನು ಕಾಡಿದರು. ಮಲನ್ ಕೇವಲ 39 ಎಸೆತಗಳಲ್ಲಿ 6 ಫೋರ್, 5 ಸಿಕ್ಸರ್ ಸಿಡಿಸಿ 77 ರನ್ ಚಚ್ಚಿದರೆ, ಲಿಯಾಮ್ ಅಜೇಯ 42 ರನ್ ಕಲೆಹಾಕಿ ತಂಡದ ಮೊತ್ತವನ್ನು 20 ಓವರ್ನಲ್ಲಿ 215 ರನ್ಗೆ ತಂದಿಟ್ಟು ಜಯದಲ್ಲಿ ಮುಖ್ಯ ಪಾತ್ರವಹಿಸಿದರು.
Published On - 11:36 am, Mon, 11 July 22