Suryakumar Yadav: ಶಾಕಿಂಗ್: ಸೂರ್ಯಕುಮಾರ್ ಬಗ್ಗೆ 10 ವರ್ಷದ ಹಿಂದೆ ರೋಹಿತ್ ಮಾಡಿದ್ದ ಟ್ವೀಟ್ ವೈರಲ್
ENG vs IND, Rohit Sharma: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಶತಕ ಸಿಡಿಸಿ ಆರ್ಭಟಿಸುತ್ತಿದ್ದಂತೆ ಇವರ ಬಗ್ಗೆ ರೋಹಿತ್ ಶರ್ಮಾ ಮಾಡಿದ್ದ ಟ್ವೀಟ್ ಒಂದು ಸಖತ್ ವೈರಲ್ ಆಗುತ್ತಿದೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಮೂರನೇ ಟಿ20 ಪಂದ್ಯದಲ್ಲಿ ಭಾರತ ಸೋತಿತಾದರೂ ಸೂರ್ಯಕುಮಾರ್ ಯಾದವ್ (Suryakumar Yadav) ಎಲ್ಲರ ಮನ ಗೆದ್ದರು. 216 ರನ್ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಲು ಹೊರಟ ಟೀಮ್ ಇಂಡಿಯಾ (Team India) ಪ್ರಮುಖ ಬ್ಯಾಟರ್ಗಳನ್ನು ಕಳೆದುಕೊಂಡೆ ಸಾಗಿತು. ಆದರೆ, ಸೂರ್ಯ ಕ್ರೀಸ್ ಕಚ್ಚಿ ನಿಂತು ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರು. 4ನೇ ವಿಕೆಟ್ಗೆ ಶ್ರೇಯಸ್ ಅಯ್ಯರ್ (28 ರನ್) ಜೊತೆಗೂಡಿ 119 ರನ್ಗಳ ಕಾಣಿಕೆ ನೀಡಿದರು. ಆದರೆ, ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. 19ನೇ ಓವರ್ನ ಕೊನೆಯ ಎಸೆತದಲ್ಲಿ ಔಟಾದರು. ಸೂರ್ಯಕುಮಾರ್ 55 ಎಸೆತಗಳಲ್ಲಿ 14 ಫೋರ್, 6 ಸಿಕ್ಸರ್ ಸಿಡಿಸಿ 117 ರನ್ಗೆ ನಿರ್ಗಮಿಸಿದರು. ಶತಕ ಸಿಡಿಸುವ ಮೂಲಕ ವಿಶೇಷ ಸಾಧನೆಯನ್ನು ಕೂಡ ಮಾಡಿದ್ದಾರೆ. ಸೂರ್ಯ ಶತಕ ಸಿಡಿಸಿ ಆರ್ಭಟಿಸುತ್ತಿದ್ದಂತೆ ಇವರ ಬಗ್ಗೆ ರೋಹಿತ್ ಶರ್ಮಾ (Rohit Sharma) ಮಾಡಿದ್ದ ಟ್ವೀಟ್ ಒಂದು ಸಖತ್ ವೈರಲ್ ಆಗುತ್ತಿದೆ.
ಹೌದು, ರೋಹಿತ್ ಶರ್ಮಾ 10 ವರ್ಷಗಳ ಹಿಂದೆ ಸೂರ್ಯಕುಮಾರ್ ಯಾದವ್ ಬಗ್ಗೆ ಮಾಡಿದ ಒಂದು ಟ್ವೀಟ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಟ್ವೀಟ್ ಅನ್ನು ರೋಹಿತ್ ಡಿಸೆಂಬರ್ 10, 2011 ರಂದು ಪೋಸ್ಟ್ ಮಾಡಿದ್ದರು. “ಈಗಷ್ಟೆ ಚೆನ್ನೈನಲ್ಲಿ ಬಿಸಿಸಿಐ ಪ್ರಶಸ್ತಿ ಸಮಾರಂಭ ಮುಗಿಯಿತು. ಮುಂಬೈಯ ಸೂರ್ಯಕುಮಾರ್ ಯಾದವ್ ಭವಿಷ್ಯದಲ್ಲಿ ದೊಡ್ಡ ಆಟಗಾರನಾಗುತ್ತಾನೆ,” ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಹಿಟ್ಮ್ಯಾನ್ ಆಗಲೇ ಸೂರ್ಯ ಬಗ್ಗೆ ಭವಿಷ್ಯ ನುಡಿದಿದ್ದ ಟ್ವೀಟ್ ಈಗ ಎಲ್ಲೆಡೆ ಹರಿದಾಡುತ್ತಿದೆ.
Just got done with BCCI awards here in chennai..some exciting cricketers coming up..Suryakumar yadav from Mumbai to watch out for in future!
— Rohit Sharma (@ImRo45) December 10, 2011
ಸೂರ್ಯಕುಮಾರ್ ಅವರು ತಮ್ಮ ಚೊಚ್ಚಲ ಶತಕದ ಮೂಲಕ ವಿಶೇಷ ಸಾಧನೆ ಕೂಡ ಮಾಡಿದ್ದಾರೆ. ಟಿ20 ಮಾದರಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಸುರೇಶ್ ರೈನಾ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ದೀಪಕ್ ಹೂಡ ಈ ಸಾಧನೆ ಮಾಡಿದ್ದರು. ಇವರು ಗಳಿಸಿ 117 ರನ್ ಭಾರತೀಯ ಬ್ಯಾಟರ್ ಒಬ್ಬ ಟಿ20 ಕ್ರಿಕೆಟ್‌ನಲ್ಲಿ ಗಳಿಸಿದ ಎರಡನೇ ಗರಿಷ್ಠ ಮೊತ್ತವಾಗಿದೆ. ಕಳೆದ ಕೆಲವು ಸಮಯದಿಂದ ಟೀಮ್ ಇಂಡಿಯಾದ ಖಾಯಂ ಸದಸ್ಯನಾಗಿ ಕಾಣಿಸಿಕೊಂಡಿರುವ ಸೂರ್ಯ 19 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. 537 ರನ್ ಕಲೆಹಾಕಿದ್ದಾರೆ. 38.35 ಸರಾಸರಿ ಜೊತೆ 177.22 ಸ್ಟ್ರೈಕ್ರೇಟ್ ಹೊಂದಿದ್ದಾರೆ.
IND vs ENG: ಭಾರತ-ಇಂಗ್ಲೆಂಡ್ 3ನೇ ಟಿ20 ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿದೆ ನೋಡಿ
ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಂಡಿಲ್ಲ, ಆದರೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಡೇವಿಡ್ ಮಲನ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಭರ್ಜರಿ ಜೊತೆಯಾಟ ಆಡಿದರು. ಮಲನ್ ಕೇವಲ 39 ಎಸೆತಗಳಲ್ಲಿ 6 ಫೋರ್, 5 ಸಿಕ್ಸರ್ ಸಿಡಿಸಿ 77 ರನ್ ಚಚ್ಚಿದರೆ, ಲಿಯಾಮ್ 29 ಎಸೆತಗಳಲ್ಲಿ 4 ಸಿಕ್ಸರ್ ಬಾರಿಸಿ ಅಜೇಯ 42 ರನ್ ಕಲೆಹಾಕಿದರು. ಪರಿಣಾಮ ಇಂಗ್ಲೆಂಡ್ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು.
ಟಾರ್ಗೆಟ್ ಬೆನ್ನಟ್ಟಿದ ಭಾರತ 50ಕ್ಕೂ ಮುನ್ನವೇ ಮುಖ್ಯ 3 ವಿಕೆಟ್ ಕಳೆದುಕೊಂಡಿತು. ಆದರೆ, ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಸೂರ್ಯ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಬಳಿಕ ದಿಢೀರ್ ಕುಸಿತ ಕಂಡೂ ಸೂರ್ಯಕುಮಾರ್ ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸುತ್ತಲೇ ಇದ್ದರು. ಆದರೆ, ಇದು ಫಲ ಸಿಗಲಿಲ್ಲ. ಟೀಮ್ ಇಂಡಿಯಾ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಲಷ್ಟೇ ಶಕ್ತವಾಯಿತು.
Published On - 10:47 am, Mon, 11 July 22