ಪ್ರೀತಿ, ಪ್ರಣಯ, ಮಗು, 3 ಬಾರಿ ಮದುವೆ, ವಿಚ್ಛೇದನ; ಇದು ಹಾರ್ದಿಕ್ ಪ್ರೇಮ್ ಕಹಾನಿ
Hardik Pandya Natasa Stankovic Divorce: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರ ಪ್ರೇಮಕಥೆ ಕ್ರಿಕೆಟ್ ಮತ್ತು ಗ್ಲಾಮರ್ ಪ್ರಪಂಚದ ಸಂಗಮವಾಗಿದೆ. ಕೆಲವೇ ವರ್ಷಗಳ ಹಿಂದೆ ಆರಂಭವಾದ ಈ ಜೋಡಿಗಳ ಪಯಣ ನೈಟ್ ಕ್ಲಬ್ನಲ್ಲಿ ಆರಂಭವಾಗಿದ್ದರಿಂದ ಹಿಡಿದು, ಪ್ರೀತಿ, ನಿಶ್ಚಿತಾರ್ಥ, ಪಿತೃತ್ವ, ಮೂರು ಬಾರಿ ಮದುವೆ ನಂತರ ಇದೀಗ ವಿಚ್ಛೇದನದೊಂದಿಗೆ ಅಂತ್ಯಗೊಂಡಿದೆ.
ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕು ವರ್ಷಗಳ ನಂತರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ಬೇರ್ಪಡುವುದಾಗಿ ಹೇಳಿಕೊಂಡಿದ್ದಾರೆ. ಹಾರ್ದಿಕ್ ಗುರುವಾರ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಇಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಜಗಜ್ಜಾಹೀರಾಗಿತ್ತು. ಐಪಿಎಲ್ ಸಮಯದಲ್ಲಿ, ನತಾಶಾ ತನ್ನ ಇನ್‌ಸ್ಟಾ ಹ್ಯಾಂಡಲ್‌ನಿಂದ ಹಾರ್ದಿಕ್ ಫೋಟೋಗಳನ್ನು ಡಿಲೀಟ್ ಮಾಡಿದಲ್ಲದೆ, ಪಾಂಡ್ಯ ಹೆಸರನ್ನು ತಮ್ಮ ಹೆಸರಿಂದ ತೆಗೆದುಹಾಕಿದ್ದರು. ಆ ನಂತರ ಈ ಇಬ್ಬರ ನಡುವೆ ಒಡಕು ಮೂಡಿರುವ ಬಗ್ಗೆ ಊಹಪೋಹಗಳು ಎದ್ದಿದ್ದವು. ಇದೀಗ ಈ ಬಗ್ಗೆ ಮಾಹಿತಿ ನೀಡುವ ಮೂಲಕ ಪಾಂಡ್ಯ ವಿಚ್ಛೇದನವನ್ನು ಖಚಿತಪಡಿಸಿಕೊಂಡಿದ್ದಾರೆ. ಅದಾಗ್ಯೂ ಈ ಜೋಡಿಯ ಪ್ರೇಮ ಪಯಣ ತುಂಬಾ ವಿಭಿನ್ನವಾಗಿದ್ದು, ಎಲ್ಲರನ್ನು ಅಚ್ಚರಿಗೊಳಿಸಿತ್ತು.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರ ಪ್ರೇಮಕಥೆ ಕ್ರಿಕೆಟ್ ಮತ್ತು ಗ್ಲಾಮರ್ ಪ್ರಪಂಚದ ಸಂಗಮವಾಗಿದೆ. ಕೆಲವೇ ವರ್ಷಗಳ ಹಿಂದೆ ಆರಂಭವಾದ ಈ ಜೋಡಿಗಳ ಪಯಣ ನೈಟ್ ಕ್ಲಬ್ನಲ್ಲಿ ಆರಂಭವಾಗಿದ್ದರಿಂದ ಹಿಡಿದು, ಪ್ರೀತಿ, ನಿಶ್ಚಿತಾರ್ಥ, ಪಿತೃತ್ವ, ಮೂರು ಬಾರಿ ಮದುವೆ ನಂತರ ಇದೀಗ ವಿಚ್ಛೇದನದೊಂದಿಗೆ ಅಂತ್ಯಗೊಂಡಿದೆ.
- 2018 ರಲ್ಲಿ ನೈಟ್ ಕ್ಲಬ್ನಲ್ಲಿ ಮೊದಲ ಭೇಟಿ; ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರು ಮೊದಲ ಬಾರಿಗೆ ಮುಂಬೈನ ನೈಟ್ ಕ್ಲಬ್ವೊಂದರಲ್ಲಿ ಮೊದಲ ಬಾರಿಗೆ ಭೇಟಿಯಾದರು. ನತಾಶಾ ಆ ಸಮಯದಲ್ಲಿ ಬೇರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದರಾದರೂ, ಮೊದಲ ಭೇಟಿಯಲ್ಲೇ ಹಾರ್ದಿಕ್ ಮೇಲೆ ಪ್ರೀತಿಯಾಗಿತ್ತು.
- 2018 ರಲ್ಲಿ ಹುಟ್ಟುಹಬ್ಬಕ್ಕೆ ಪರಸ್ಪರ ಶುಭಾಶಯ: ಆ ನಂತರ ಹಾರ್ದಿಕ್ ಹುಟ್ಟುಹಬ್ಬದಂದು ನತಾಶಾ ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಶುಭ ಹಾರೈಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇಲ್ಲಿಂದ ಇವರಿಬ್ಬರ ನಡುವನ ಸಂಬಂಧದ ಬಗ್ಗೆ ಊಹಾಪೋಹಗಳು ಪ್ರಾರಂಭವಾದವು.
- 2019ರ ಅಕ್ಟೋಬರ್ವರೆಗೆ ಬೆಸ್ಟ್ ಫ್ರೆಂಡ್: ಈ ಇಬ್ಬರ ನಡುವಿನ ಸಂಬಂಧವನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ, 2019 ರ ಅಕ್ಟೋಬರ್ನಲ್ಲಿ ನತಾಶಾ, ಹಾರ್ದಿಕ್ ಅವರನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ “ಉತ್ತಮ ಸ್ನೇಹಿತ” ಎಂದು ಬಣ್ಣಿಸಿದ್ದರು.
- 2020ರ ಜನವರಿಯಲ್ಲಿ ಪ್ರೇಮ ನಿವೇದನೆ; 2020 ರ ಹೊಸ ವರ್ಷದ ಮೊದಲ ದಿನದಂದು ಹಾರ್ದಿಕ್ ಸಮುದ್ರದ ಮಧ್ಯದಲ್ಲಿ ವಿಹಾರ ನೌಕೆಯಲ್ಲಿ ನತಾಶಾಗೆ ಪ್ರಪೋಸ್ ಮಾಡಿದರು. ನತಾಶಾಗೆ ಹಾರ್ದಿಕ್ ಪ್ರಪೋಸ್ ಮಾಡಿದ ರೀತಿ, ಅದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು.
- 2020ರ ಮೇ ನಲ್ಲಿ ಗರ್ಭಧಾರಣೆಯ: ಇಬ್ಬರು ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡ ಕೆಲವೇ ತಿಂಗಳುಗಳ ನಂತರ, ಅಂದರೆ ಮೇ 2020 ರಲ್ಲಿ ನತಾಶಾ ಗರ್ಭಾವತಿ ಎಂಬ ಸುದ್ದಿ ಹೊರಬಿದ್ದಿತ್ತು.
- 2020ರ ಜುಲೈನಲ್ಲಿ ಮಗ ಅಗಸ್ತ್ಯನ ಜನನ: ಜುಲೈ 2020 ರಲ್ಲಿ, ದಂಪತಿಗಳಿಬ್ಬರಿಗೆ ಗಂಡು ಮಗು ಜನಿಸಿತ್ತು. ಈ ಮಗುವಿಗೆ ಅಗಸ್ತ್ಯ ಎಂದು ಹೆಸರಿಡಲಾಗಿದೆ.
- 2023ರಲ್ಲಿ ಪ್ರೇಮಿಗಳ ದಿನದಂದು ಅದ್ಧೂರಿ ವಿವಾಹ; ಕೋವಿಡ್ನಿಂದಾಗಿ ಈ ಇಬ್ಬರು ಮೊದಲು ಕೋರ್ಟ್ ಮದುವೆಯಾಗಿದ್ದರು. ನಂತರ ಹಾರ್ದಿಕ್ ಮತ್ತು ನತಾಶಾ ಫೆಬ್ರವರಿ 2023 ರಲ್ಲಿ ಉದಯಪುರದಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಾಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.
- 2024ರ ಮೇ ತಿಂಗಳಲ್ಲಿ ವಿಚ್ಛೇದನ ವದಂತಿ: ಈ ನಡುವೆ ಅಂದರೆ 2024ರ ಮೇ ತಿಂಗಳಲ್ಲಿ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ವದಂತಿ ಶುರುವಾಯಿತು. ಇದಕ್ಕೆ ಪೂರಕವಾಗಿ ಇಬ್ಬರೂ ಇನ್‌ಸ್ಟಾದಿಂದ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದರು. ಆ ಬಳಿಕ ಈ ಇಬ್ಬರ ವಿಚ್ಛೇದನ ಸುದ್ದಿಗೆ ವೇಗ ಸಿಕ್ಕಿತು. ಇದೀಗ ಹಾರ್ದಿಕ್ ತಮ್ಮ ಇನ್‌ಸ್ಟಾ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಇಬ್ಬರೂ ಅಧಿಕೃತವಾಗಿ ಬೇರ್ಪಟ್ಟಿದ್ದೇವೆ ಎಂಬುದನ್ನು ಖಚಿತಪಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ