ರೋಹಿತ್ ಶರ್ಮಾಗೆ ಕೊಕ್‌: ಹಾರ್ದಿಕ್ ಪಾಂಡ್ಯಗೆ ಒಲಿದ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ

Hardik Pandya: ಮುಂಬೈ ತಂಡದ ನಾಯಕತ್ವದ ಸ್ಥಾನದಿಂದ ರೋಹಿತ್ ಶರ್ಮಾಗೆ ಕೊಕ್‌ ನೀಡಿದ್ದು, ಆ ಮೂಲಕ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಒಲಿದಿದೆ. ಇನ್ಮುಂದೆ ಐಪಿಎಲ್‌ನಲ್ಲಿ ಮುಂಬೈ ತಂಡವನ್ನು ಹಾರ್ದಿಕ್‌ ಪಾಂಡ್ಯಾ ಮುನ್ನಡೆಸಲಿದ್ದಾರೆ. 

ರೋಹಿತ್ ಶರ್ಮಾಗೆ ಕೊಕ್‌: ಹಾರ್ದಿಕ್ ಪಾಂಡ್ಯಗೆ ಒಲಿದ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ
ಹಾರ್ದಿಕ್‌ ಪಾಂಡ್ಯ, ರೋಹಿತ್ ಶರ್ಮಾ
Follow us
ಗಂಗಾಧರ​ ಬ. ಸಾಬೋಜಿ
|

Updated on:Dec 15, 2023 | 7:04 PM

ಮುಂಬೈ ತಂಡದ ನಾಯಕತ್ವದ ಸ್ಥಾನದಿಂದ ರೋಹಿತ್ ಶರ್ಮಾಗೆ ಕೊಕ್‌ ನೀಡಿದ್ದು, ಆ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ಗೆ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಒಲಿದಿದೆ. ಇನ್ಮುಂದೆ ಐಪಿಎಲ್‌ನಲ್ಲಿ ಮುಂಬೈ ತಂಡವನ್ನು ಹಾರ್ದಿಕ್‌ ಪಾಂಡ್ಯ ಮುನ್ನಡೆಸಲಿದ್ದಾರೆ. ಮುಂಬೈ ಇಂಡಿಯನ್ಸ್‌ ಗ್ಲೋಬಲ್ ಹೆಡ್ ಆಫ್ ಪರ್ಫಾರ್ಮೆನ್ಸ್ ಮಹೇಲಾ ಜಯವರ್ಧನೆ ಅವರು ಹಾರ್ದಿಕ್ ಪಾಂಡ್ಯ ಅವರ ನೇಮಕಾತಿ ಬಗ್ಗೆ ‘ಭವಿಷ್ಯದ ಸಿದ್ಧತೆ’ ಎಂದು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್​​ ಕ್ರಿಕೆಟ್​ ದಂತಕತೆ ಸಚಿನ್ ತೆಂಡೂಲ್ಕರ್​ರಿಂದ ಹಿಡಿದು ಹರ್ಭಜನ್ ಸಿಂಗ್​​ವರೆಗೆ ಮತ್ತು ರಿಕಿಯಿಂದ ರೋಹಿತ್‌ ಶರ್ಮಾವರೆಗೂ ತಮ್ಮ ಅಸಾಧಾರಣ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ತಮ್ಮ ತಂಡದ ಯಶಸ್ಸಿಗೆ ಕೊಡುಗೆ ನೀಡುತ್ತ ಭವಿಷ್ಯದಲ್ಲಿ ತಂಡವನ್ನು ಬಲಪಡಿಸುವತ್ತ ಯಾವಾಗಲು ಗುರಿ ಹೊಂದಿದ್ದರು. ಸದ್ಯ ಇದಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2024 ರ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಮಹೇಲಾ ಅಧಿಕೃತವಾಗಿ ಹೇಳಿದ್ದಾರೆ.

ರೋಹಿತ್ ಶರ್ಮಾ ಅವರು ನಾಯಕತ್ವ ಹೊಂದಿದ್ದ ಸಮಯದಲ್ಲಿ ಅವರ ಅಸಾಧಾರಣ ನಾಯಕತ್ವಕ್ಕಾಗಿ ಮಹೇಲಾ ಜಯವರ್ಧನೆ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. 2013 ರಿಂದ ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾಗಿದ್ದು ಅಸಾಮಾನ್ಯವಾದುದು. ಅವರ ನಾಯಕತ್ವ ತಂಡಕ್ಕೆ ಸಾಕಷ್ಟು ಯಶಸ್ಸನ್ನು ತಂದುಕೊಟ್ಟಿದೆ. ಜೊತೆಗೆ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕರಲ್ಲಿ ರೋಹಿತ್ ಶರ್ಮಾ ಕೂಡ  ಒಬ್ಬರಾಗಿದ್ದು, ಅವರ ಸ್ಥಾನ ಗಟ್ಟಿಗೊಳಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ಟಿ20 ಮಾದರಿಯಲ್ಲಿ ಮೌನಕ್ಕೆ ಶರಣಾದ ಗಿಲ್ ಬ್ಯಾಟ್; ಆಯ್ಕೆ ಮಂಡಳಿಗೆ ಹೊಸ ಟೆನ್ಷನ್

ಅವರ ಮಾರ್ಗದರ್ಶನದಲ್ಲಿ, ಮುಂಬೈ ಇಂಡಿಯನ್ಸ್‌ ಅತ್ಯಂತ ಯಶಸ್ವಿ ಮತ್ತು ಪ್ರೀತಿಪಾತ್ರ ತಂಡಗಳಲ್ಲಿ ಒಂದಾಗಿದೆ. ಮುಂಬೈ ಇಂಡಿಯನ್ಸ್‌ ತಂಡವನ್ನು ಮತ್ತಷ್ಟು ಬಲಪಡಿಸಲು ಮೈದಾನದಲ್ಲಿ ಮತ್ತು ಹೊರಗೆ ಅವರ ಮಾರ್ಗದರ್ಶನ ಮತ್ತು ಅನುಭವವನ್ನು ನಾವು ಎದುರು ನೋಡುತ್ತೇವೆ. ಜೊತೆಗೆ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡದ ನಾಯಕರಾಗಿ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

2015 ರಲ್ಲಿ ಕ್ರಿಕೆಟ್ ಪ್ರಯಾಣ ಆರಂಭಿಸಿದ್ದ ಹಾರ್ದಿಕ್ ಪಾಂಡ್ಯ, ಈ ತಿಂಗಳ ಆರಂಭದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್‌ ನಡುವಿನ ಎಲ್ಲಾ ನಗದು ವಹಿವಾಟಿನ ನಂತರ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ಗೆ ಮರಳಿದ್ದರು. ಪಾಂಡ್ಯ ಅವರ ಲೀಗ್ ಶುಲ್ಕ 15 ಕೋಟಿ ರೂ. ಭರಿಸುವ ಪರ್ಸ್ ಹೊಂದಿರದ ಮುಂಬೈ ಇಂಡಿಯನ್ಸ್, ಸಾಕಷ್ಟು ಆಟಗಾರರನ್ನು ಬಿಡುಗಡೆ ಮಾಡಿತ್ತು.

ಮತ್ತಷ್ಟು ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:33 pm, Fri, 15 December 23

ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ
ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ