
ಬೆಂಗಳೂರು (ಜೂ. 02): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಎರಡನೇ ಅರ್ಹತಾ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ (Punjab Kings vs Mumbai Indians) ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ತಲುಪಿತು. ಈ ಸೋಲಿನೊಂದಿಗೆ, ಪ್ರಸಕ್ತ ಋತುವಿನಲ್ಲಿ ಮುಂಬೈನ ಪ್ರಯಾಣವು ಅಂತ್ಯಗೊಂಡಿದೆ. ಈಗ ಫೈನಲ್ ಪಂದ್ಯ ಜೂನ್ 03 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಏತನ್ಮಧ್ಯೆ, ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ನಂತರ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ತುಂಬಾ ನಿರಾಶೆಗೊಂಡಂತೆ ಕಂಡುಬಂದರು. ಪಂದ್ಯದ ನಂತರ ಅವರು ತಮ್ಮ ತಂಡ ಎಲ್ಲಿ ತಪ್ಪು ಮಾಡಿದೆ ಎಂದು ವಿವರಿಸಿದರು.
ಪಂದ್ಯದ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಅವರು ತನಗೆ ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ರೀತಿ ಮತ್ತು ಅವರು ಆಡಿದ ಹೊಡೆತಗಳು ನಿಜವಾಗಿಯೂ ಚೆನ್ನಾಗಿತ್ತು ಎಂದು ಹೇಳಿದರು. ಬೌಲಿಂಗ್ ಘಟಕದಲ್ಲಿ ನಾವು ಉತ್ತಮ ಪ್ರದರ್ಶನಗಳು ನೀಡಬೇಕಾಗಿತ್ತು. ಈ ದೊಡ್ಡ ಪಂದ್ಯಗಳಲ್ಲಿ ಇದು ನಿಜವಾಗಿಯೂ ಮುಖ್ಯವಾದ ವಿಷಯ. ಪಂದ್ಯದುದ್ದಕ್ಕೂ ಪಂಜಾಬ್ ತಂಡ ನಮ್ಮನ್ನು ಒತ್ತಡದಲ್ಲಿಟ್ಟಿತು ಎಂದು ಅವರು ಹೇಳಿದರು.
ನಮ್ಮ ತಂಡ ಬಯಸಿದ ರೀತಿಯಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದು ಹಾರ್ದಿಕ್ ಹೇಳಿದರು. ಇದಕ್ಕಾಗಿ ಅವರು ವಿಕೆಟ್ ಅನ್ನು ದೂಷಿಸಿಲ್ಲ, ಬದಲಾಗಿ ಬೌಲರ್ಗಳನ್ನು ಹೊಣೆ ಮಾಡಿದರು. ನಮ್ಮ ಬೌಲರ್‌ಗಳು ಸರಿಯಾದ ಲೆಂತ್‌ನಲ್ಲಿ ಬೌಲಿಂಗ್ ಮಾಡಿದ್ದರೆ ಅಥವಾ ಬಹುಶಃ ಸರಿಯಾದ ಸಮಯದಲ್ಲಿ ಸರಿಯಾದ ಬೌಲರ್ ಅನ್ನು ಆಯ್ಕೆ ಮಾಡಿದ್ದರೆ ಫಲಿತಾಂಶ ಸ್ವಲ್ಪ ಭಿನ್ನವಾಗುತ್ತಿತ್ತು. ಬುಮ್ರಾಗೆ ಪರಿಸ್ಥಿತಿಯ ಬಗ್ಗೆ ಅರಿವಿತ್ತು ಮತ್ತು 18 ಎಸೆತಗಳು ಉಳಿದಿದ್ದಾಗ ಅವರಿಗೆ ಏನು ಮಾಡಬೇಕೆಂದು ತಿಳಿದಿತ್ತು. ಜಸ್ಪ್ರಿತ್ ಇಂತಹ ಸಮಯದಲ್ಲಿ ಅನೇಕ ಬಾರಿ ನಮಗೆ ಸಹಾಯ ಮಾಡಿದ್ದರಯ, ಆದರೆ ಅದು ಇಂದು ಆಗಲಿಲ್ಲ ಎಂದು ಹೇಳಿದ್ದಾರೆ.
PBKS vs MI: ಮುಂಬೈ ವಿರುದ್ಧ ಗೆದ್ದ ಬಳಿಕ ಆರ್‌ಸಿಬಿ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್: ಏನು ಹೇಳಿದ್ರು ನೋಡಿ
ಅಹಮದಾಬಾದ್‌ನಲ್ಲಿ ನಡೆದ ಈ ಕ್ವಾಲಿಫೈಯರ್ 2 ರಲ್ಲಿ ಪಂಜಾಬ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ತಲುಪಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ತಿಲಕ್ ವರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ತಲಾ 44 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಪಂಜಾಬ್ ಕಿಂಗ್ಸ್ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 207 ಗಳಿಸಿ ಜಯ ಸಾಧಿಸಿತು. ನಾಯಕ ಶ್ರೇಯಸ್ ಅಯ್ಯರ್ ಕೇವಲ 41 ಎಸೆತಗಳಲ್ಲಿ ಅಜೇಯ 87 ರನ್ ಸಿಡಿಸಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು.
ಈಗ ಫೈನಲ್‌ನಲ್ಲಿ ಪಂಜಾಬ್ ಮೇ 3 ರಂದು ಅಹಮದಾಬಾದ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಇದರೊಂದಿಗೆ ಈ ಋತುವಿನ ಐಪಿಎಲ್ ಹೊಸ ಚಾಂಪಿಯನ್ ಅನ್ನು ಕಾಣಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ