Hardik Pandya: ಪಂದ್ಯ ಮುಗಿದ ಬಳಿಕ ಮುಂಬೈ ಬಸ್ ಏರಿದ ಹಾರ್ದಿಕ್ ಪಾಂಡ್ಯ ಹೊಸ ಗರ್ಲ್ ಫ್ರೆಂಡ್: ವಿಡಿಯೋ ನೋಡಿ

Jasmin Walia MI vs KKR: ಜಾಸ್ಮಿನ್ ಅವರು ಹಾರ್ದಿಕ್ ಮತ್ತು ಅವರ ತಂಡವನ್ನು ಸ್ಟೇಡಿಯಂಗೆ ಬಂದು ಹುರಿದುಂಬಿಸುತ್ತಿರುವುದು ಕಂಡುಬಂದಿತು. ನಂತರ ಅವರು ಮುಂಬೈ ಇಂಡಿಯನ್ಸ್ ತಂಡದ ಬಸ್‌ನಲ್ಲಿಯೂ ಕಾಣಿಸಿಕೊಂಡರು. ಸಾಮಾನ್ಯವಾಗಿ, ಕ್ರಿಕೆಟಿಗರ ತಂಡ ಮತ್ತು ಅವರ ಅತ್ಯಂತ ಆಪ್ತರಿಗೆ ಮಾತ್ರ ಈ ಬಸ್ಸಿನಲ್ಲಿ ಕುಳಿತುಕೊಳ್ಳಲು ಅವಕಾಶವಿರುತ್ತದೆ.

Hardik Pandya: ಪಂದ್ಯ ಮುಗಿದ ಬಳಿಕ ಮುಂಬೈ ಬಸ್ ಏರಿದ ಹಾರ್ದಿಕ್ ಪಾಂಡ್ಯ ಹೊಸ ಗರ್ಲ್ ಫ್ರೆಂಡ್: ವಿಡಿಯೋ ನೋಡಿ
Jasmin Walia And Hardik Pandya

Updated on: Apr 01, 2025 | 8:14 AM

(ಬೆಂಗಳೂರು, ಏ 01): ಇಂಡಿಯನ್ ಪ್ರೀಮಿಯರ್ ಲೀಗ್​ 2025ರ ಪಂದ್ಯಗಳಲ್ಲಿನ ಪ್ರದರ್ಶನದ ಹೊರತಾಗಿ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ (Hardik Pandya) ತಮ್ಮ ಗೆಳತಿ ಜಾಸ್ಮಿನ್ ವಾಲಿಯಾ ಅವರ ವಿಷಯದಲ್ಲೂ ಸುದ್ದಿಯಲ್ಲಿದ್ದಾರೆ. ಕೆಲವು ಸಮಯದಿಂದ, ಕ್ರಿಕೆಟಿಗ ಬ್ರಿಟಿಷ್ ಗಾಯಕಿ, ಟಿವಿ ನಿರೂಪಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಗಾಯಕಿ ಹಲವಾರು ಸಂದರ್ಭಗಳಲ್ಲಿ ಪಾಂಡ್ಯ ಅವರನ್ನು ಬೆಂಬಲಿಸುತ್ತಿರುವುದು ಕಂಡುಬಂದಿದೆ. ನಿನ್ನೆ ರಾತ್ರಿ ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯದ ಸಮಯದಲ್ಲಿ ಕೂಡ ಜಾಸ್ಮಿನ್ ಅವರು ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಜಾಸ್ಮಿನ್ ಅವರು ಹಾರ್ದಿಕ್ ಮತ್ತು ಅವರ ತಂಡವನ್ನು ಸ್ಟೇಡಿಯಂಗೆ ಬಂದು ಹುರಿದುಂಬಿಸುತ್ತಿರುವುದು ಕಂಡುಬಂದಿತು. ನಂತರ ಅವರು ಮುಂಬೈ ಇಂಡಿಯನ್ಸ್ ತಂಡದ ಬಸ್‌ನಲ್ಲಿಯೂ ಕಾಣಿಸಿಕೊಂಡರು. ಸಾಮಾನ್ಯವಾಗಿ, ಕ್ರಿಕೆಟಿಗರ ತಂಡ ಮತ್ತು ಅವರ ಅತ್ಯಂತ ಆಪ್ತರಿಗೆ ಮಾತ್ರ ಈ ಬಸ್ಸಿನಲ್ಲಿ ಕುಳಿತುಕೊಳ್ಳಲು ಅವಕಾಶವಿರುತ್ತದೆ.

ಇದನ್ನೂ ಓದಿ
ಹಾಲಿ ಚಾಂಪಿಯನ್ ಕೆಕೆಆರ್​ಗೆ ಟೂರ್ನಿಯಲ್ಲಿ 2ನೇ ಸೋಲು
ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್; ಅಶ್ವನಿ ವೇಗಕ್ಕೆ ತತ್ತರಿಸಿದ ಕೆಕೆಆರ್
ಅರ್ಧದಷ್ಟು ಐಪಿಎಲ್​ಗೆ ಬುಮ್ರಾ ಅಲಭ್ಯ..! ಮುಂದಿನ ಕಥೆ ಏನು?
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್

 

ಜಾಸ್ಮಿನ್ ವಾಲಿಯಾ ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಮತ್ತು ಅವರ ಆಪ್ತರೊಂದಿಗೆ ಬಸ್ ಹತ್ತುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಜಾಸ್ಮಿನ್ ಉದ್ದನೆಯ ಕಪ್ಪು ಉಡುಪನ್ನು ಧರಿಸಿದ್ದು ಬಸ್ ಏರಿ ಹಿಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದಾರೆ. ಜಾಸ್ಮಿನ್ ಬಸ್ ಹತ್ತಿದ್ದು, ಹಾರ್ದಿಕ್ ಅವರ ಸಂಬಂಧದ ಬಗ್ಗೆ ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.

 

ಜಾಸ್ಮಿನ್ ವಾಲಿಯಾ ಯಾರು?

ಜಾಸ್ಮಿನ್ ವಾಲಿಯಾ ಒಬ್ಬ ಬ್ರಿಟಿಷ್ ಗಾಯಕಿ ಮತ್ತು ಟಿವಿ ನಿರೂಪಕಿ, ಬಾಲಿವುಡ್ ಸಿನಿಮಾ ಸೋನು ಕೆ ಟಿಟು ಕಿ ಸ್ವೀಟಿಯಲ್ಲಿ ಜ್ಯಾಕ್ ನೈಟ್ ಜೊತೆಗಿನ ಬಾಮ್ ಡಿಗ್ಗಿ ಹಾಡಿಗೆ ಹೆಸರುವಾಸಿಯಾಗಿದ್ದಾರೆ. ಅವರು ರಿಯಾಲಿಟಿ ಟಿವಿ ಸಿರೀಸ್ ದಿ ಓನ್ಲಿ ವೇ ಈಸ್ ಎಸೆಕ್ಸ್ ನಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದರು ಮತ್ತು ನಂತರ ದಮ್ ದೀ ದೀ ದಮ್ ಮತ್ತು ಟೆಂಪಲ್ ಸೇರಿದಂತೆ ಹಲವಾರು ಸಿಂಗಲ್ಸ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಇವರಿಗೆ ಪ್ರಪಂಚದಾದ್ಯಂತ ಅನೇಕ ಅಭಿಮಾನಿಗಳಿದ್ದಾರೆ.

IPL 2025: ಮುಂಬೈಗೆ ಮೊದಲ ಗೆಲುವು ತಂದ ಅಶ್ವನಿ- ರಿಕಲ್ಟನ್; ಕೆಕೆಆರ್​ಗೆ ಹೀನಾಯ ಸೋಲು

ಹಾರ್ದಿಕ್ ಮತ್ತು ನತಾಶಾ ಸಂಬಂಧ

ಕಳೆದ ವರ್ಷ, ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ನಾಲ್ಕು ವರ್ಷಗಳ ದಾಂಪತ್ಯದ ನಂತರ ಬೇರ್ಪಡುವುದನ್ನು ದೃಢಪಡಿಸಿದರು. ದಂಪತಿಗಳು ಇನ್​ಸ್ಟಾಗ್ರಾಮ್​ನಲ್ಲಿ “ಪರಸ್ಪರ ಬೇರೆಯಾಗುತ್ತಿದ್ದೇವೆ” ಎಂದು ಘೋಷಿಸಿದರು.

ಪಂದ್ಯದ ಬಗ್ಗೆ ನೋಡುವುದಾದರೆ, ಎಡಗೈ ವೇಗಿ ಅಶ್ವನಿ ಕುಮಾರ್ (ನಾಲ್ಕು ವಿಕೆಟ್) ಮತ್ತು ರಯಾನ್ ರಿಕಲ್ಟನ್ (ಅಜೇಯ 62) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಪಂಜಾಬ್‌ನ 23 ವರ್ಷದ ಅಶ್ವನಿ, ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲಿ 24 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಮುಂಬೈ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 16.2 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಮಾಡಿತು. ಮುಂಬೈ 12.5 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 121 ರನ್ ಸಿಡಿಸುವ ಮೂಲಕ ಗೆಲುವು ಸಾಧಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ