IPL 2025: ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11ನಿಂದ ರೋಹಿತ್ ಶರ್ಮಾ ಔಟ್..! ಆದರೆ?
Mumbai Indians Shock: ಐಪಿಎಲ್ 2025ರ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದು, ರೋಹಿತ್ ಶರ್ಮಾ ಅವರನ್ನು ಆಡುವ ಹನ್ನೊಂದರ ತಂಡದಿಂದ ಕೈಬಿಡಲಾಗಿದೆ. ಇದು ಆಘಾತಕಾರಿ ಸುದ್ದಿಯಾಗಿದ್ದು, ವಿಲ್ ಜ್ಯಾಕ್ಸ್ ಮತ್ತು ಅಶ್ವಿನಿ ಕುಮಾರ್ ಅವರಿಗೆ ಅವಕಾಶ ದೊರೆತಿದೆ. ರೋಹಿತ್ ಶರ್ಮಾ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಲಾಗುವುದು ಎಂದು ತಿಳಿದುಬಂದಿದೆ. ಪಂದ್ಯದಲ್ಲಿ ಉಭಯ ತಂಡಗಳ ಪ್ಲೇಯಿಂಗ್ 11ರ ಮಾಹಿತಿಯನ್ನು ಒಳಗೊಂಡಿದೆ.

ಐಪಿಎಲ್ 2025 (IPL 2025) ರ 12 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (MI vs KKR) ನಡುವೆ ನಡೆಯುತ್ತಿದೆ. ಎರಡೂ ತಂಡಗಳು ಮಾರ್ಚ್ 31 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಆದರೆ ಟಾಸ್ ಗೆದ್ದ ಬಳಿಕ ತಂಡಗಳ ಪ್ಲೇಯಿಂಗ್ 11 ಪ್ರಕಟಿಸುವ ವೇಳೆ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದೆ. ಮುಂಬೈ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ್ದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನೇ ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗಿದೆ.
ಈ ಪಂದ್ಯಕ್ಕೆ ಮುಂಬೈ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ಅದರಂತೆ ಇಂಗ್ಲೆಂಡ್ನ ಸ್ಫೋಟಕ ಬ್ಯಾಟ್ಸ್‌ಮನ್ ವಿಲ್ ಜ್ಯಾಕ್ಸ್ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಜ್ಯಾಕ್ಸ್ರನ್ನು ಎರಡನೇ ಪಂದ್ಯದಿಂದ ಕೈಬಿಡಲಾಗಿತ್ತು. ಆದರೆ ಮೂರನೇ ಪಂದ್ಯಕ್ಕೆ ಮತ್ತೆ ತಂಡದಲ್ಲಿ ಆಡಿಸಲಾಗುತ್ತಿದೆ. ಜ್ಯಾಕ್ಸ್ ಹೊರತಾಗಿ ಅಶ್ವಿನಿ ಕುಮಾರ್ಗೆ ಚೊಚ್ಚಲ ಅವಕಾಶ ಸಿಕ್ಕಿದೆ.
ರೋಹಿತ್ ಇಂಪ್ಯಾಕ್ಟ್ ಪ್ಲೇಯರ್
ಮುಂಬೈ ಇಂಡಿಯನ್ಸ್ ರೋಹಿತ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಟ್ಟಿರಬಹುದು. ಆದರೆ ಅವರು ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಖಚಿತವಾಗಿ ಬರಲಿದ್ದಾರೆ. ವಾಸ್ತವವಾಗಿ, ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುತ್ತಿರುವ ಕಾರಣ ರೋಹಿತ್ ಶರ್ಮಾ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಲಿದೆ. ಎಡಗೈ ವೇಗಿ ಅಶ್ವಿನಿ ಕುಮಾರ್ ಅವರನ್ನು ಬೌಲಿಂಗ್‌ನಲ್ಲಿ ಬಳಸಿಕೊಳ್ಳಲಿದ್ದು, ಆ ಬಳಿಕ ರೋಹಿತ್ ಶರ್ಮಾ ಅವರನ್ನು ಅಶ್ವಿನ್ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಲಾಗುವುದು. ಆದರೆ, ಬೌಲಿಂಗ್ ಸಮಯದಲ್ಲಿ ರೋಹಿತ್ ಶರ್ಮಾ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ.
Stadium Full, Energy High – Starting XI aa chuki hain bhai! 💪📝#MumbaiIndians #PlayLikeMumbai pic.twitter.com/ZVaAo3mLnf
— Mumbai Indians (@mipaltan) March 31, 2025
ಉಭಯ ತಂಡಗಳು
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI- ರಯಾನ್ ರಿಕಲ್ಟನ್, ವಿಲ್ ಜ್ಯಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್, ಅಶ್ವಿನಿ ಕುಮಾರ್, ವಿಘ್ನೇಶ್ ಪುತ್ತೂರ್.
MI vs KKR Live Score, IPL 2025: ಕೆಕೆಆರ್ 3ನೇ ವಿಕೆಟ್ ಪತನ
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI- ಕ್ವಿಂಟನ್ ಡಿ ಕಾಕ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Mon, 31 March 25