ಭಾರತದ ಟಿ20 ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮತ್ತು ಯುವ ಬ್ಯಾಟರ್ ಜೆಮಿಮಾ ರೋಡ್ರಿಗಸ್ (Jemimah Rodrigues) ಮುಂಬರುವ ಮಹಿಳಾ ಬಿಗ್ ಬ್ಯಾಷ್ ಲೀಗ್ (BBL) ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಇಬ್ಬರು ಆಟಗಾರ್ತಿಯರು ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಹಿಂದೆ ಹರ್ಮನ್‌ಪ್ರೀತ್ ಸಿಡ್ನಿ ಥಂಡರ್ ಪರ ಆಡಿದ್ದರು. ಇದಾಗ್ಯೂ 21 ರಲ್ಲಿ ಜೆಮಿಮಾ ಇದೇ ಮೊದಲ ಬಾರಿಗೆ ಬಿಬಿಎಲ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರಲ್ಲದೆ ಶಫಾಲಿ ವರ್ಮಾ ಮತ್ತು ರಾಧಾ ಯಾದವ್ ಕೂಡ ಸಿಡ್ನಿ ಸಿಕ್ಸರ್ಸ್ ಪರ ಆಡಲಿದ್ದಾರೆ.
‘ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುವುದು ನನಗೆ ಸಾಕಷ್ಟು ಅನುಭವವನ್ನು ನೀಡಿದೆ ಮತ್ತು ಇದು ಉತ್ತಮ ವೇದಿಕೆಯಾಗಿದೆ. ಹೊಸ ತಂಡದೊಂದಿಗೆ ಹೊಸ ಸೀಸನ್ನಲ್ಲಿ ಉತ್ತಮ ನಿರೀಕ್ಷೆಯಿದೆ. ಈ ಸೀಸನ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ವಿಶ್ವಾಸವಿದೆ ಎಂದಿದ್ದಾರೆ ಹರ್ಮನ್‌ಪ್ರೀತ್ ಕೌರ್.
ಇನ್ನು ಈ ಬಗ್ಗೆ ಮಾತನಾಡಿರುವ ಜೆಮಿಮಾ, ‘ನನ್ನ ಮುಖ್ಯ ಗುರಿ ಉತ್ತಮ ಕ್ರಿಕೆಟ್ ಆಡುವುದು ಮತ್ತು ಅದನ್ನು ಆನಂದಿಸುವುದು. ಇದರಿಂದ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ನನಗೆ ತಿಳಿದಿದೆ. ಹೀಗಾಗಿ ಬಿಬಿಎಲ್ ಅತ್ಯುತ್ತಮ ವೇದಿಕೆ ಎಂದು ಭಾವಿಸುವೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ‘ದಿ ಹಂಡ್ರೆಡ್’ ಲೀಗ್‌ನಲ್ಲಿ ನಾರ್ಥ್ ಸೂಪರ್‌ಚಾರ್ಜರ್ಸ್ ಪರ ಕಣಕ್ಕಿಳಿದಿದ್ದ ಜೆಮಿಮಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಏಳು ಪಂದ್ಯಗಳಲ್ಲಿ 249 ರನ್ ಗಳಿಸಿದರು.
ಬಿಬಿಎಲ್ಗೆ ಭಾರತೀಯ ಆಟಗಾರ್ತಿಯರ ಆಗಮನದ ಬಗ್ಗೆ ಮಾತನಾಡಿರುವ ರೆನೆಗೇಡ್ಸ್ ತರಬೇತುದಾರ ಸೈಮನ್ ಹೆಲ್ಮೊಟ್, “ಜೆಮಿಮಾ ಅತ್ಯಂತ ಪ್ರತಿಭಾವಂತ ಯುವ ಆಟಗಾರ್ತಿ. 21 ನೇ ವಯಸ್ಸಿನಲ್ಲಿ ವಿಶ್ವದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರು ಇಂಗ್ಲೆಂಡ್ನಲ್ಲಿ ನಡೆದ ‘ದಿ ಹಂಡ್ರೆಡ್’ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಇನ್ನು, ‘ಹರ್ಮನ್‌ಪ್ರೀತ್ ಅವರ ಅಂತರಾಷ್ಟ್ರೀಯ ದಾಖಲೆಯು ಅವರೆಂತಹ ಬ್ಯಾಟರ್ ಎಂಬುದನ್ನು ಹೇಳುತ್ತದೆ. ಅವಳು ಮ್ಯಾಚ್ ವಿನ್ನರ್ ಆಗಿದ್ದು, ಕ್ಷಣಾರ್ಧದಲ್ಲಿ ಪಂದ್ಯದ ಗತಿಯನ್ನೇ ತಿರುಗಿಸಬಲ್ಲರು. ಹೀಗಾಗಿ ಇವರಿಬ್ಬರ ಆಗಮನ ಮೆಲ್ಬೋರ್ನ್ ರೆನೆಗೇಡ್ಸ್ ತಂಡ ಬಲ ಹೆಚ್ಚಿಸಿದೆ ಎಂದು ತಿಳಿಸಿದರು.
ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB
ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!
ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು
ಇದನ್ನೂ ಓದಿ: Mumbai Indians: ಸಾಲು ಸಾಲು ಪಂದ್ಯ ಸೋತು ಮುಂಬೈ ಪ್ಲೇ ಆಫ್ ಪ್ರವೇಶಿಸಿತ್ತು..!
(Harmanpreet Kaur, Jemimah Rodrigues will play Big Bash League)