Glenn Maxwell: ಕೊಹ್ಲಿಗೆ ಮ್ಯಾಕ್ಸ್​ವೆಲ್ ಸವಾಲು: ಇನ್ನು ಬರೀ 3 ಸಾವಿರ ರನ್ ಮಾತ್ರ..!

Glenn Maxwell-Virat Kohli: ಅದ್ಭುತ ಫಾರ್ಮ್​ನಲ್ಲಿರುವ ಗ್ಲೆನ್ ಮ್ಯಾಕ್ಸ್​ವೆಲ್ ಈ ಬಾರಿ 4 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಆರ್​ಸಿಬಿ ಪರ ಈ ಸೀಸನ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

Glenn Maxwell: ಕೊಹ್ಲಿಗೆ ಮ್ಯಾಕ್ಸ್​ವೆಲ್ ಸವಾಲು: ಇನ್ನು ಬರೀ 3 ಸಾವಿರ ರನ್ ಮಾತ್ರ..!
Glenn Maxwell teases Virat Kohli
TV9kannada Web Team

| Edited By: Zahir PY

Sep 30, 2021 | 6:20 PM

ದುಬೈನಲ್ಲಿ ನಡೆದ ಐಪಿಎಲ್​ನ 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ದ ಆರ್​ಸಿಬಿ ಸ್ಪೋಟಕ ಬ್ಯಾಟ್ಸ್​ಮನ್ ಗ್ಲೆನ್ ಮ್ಯಾಕ್ಸ್​ವೆಲ್ ಅಬ್ಬರಿಸಿದ್ದರು. ಕೇವಲ 30 ಎಸೆತಗಳಲ್ಲಿ 50 ರನ್ ಬಾರಿಸುವ ಮೂಲಕ ಟ್ವೆಂಟಿ-20 ಕ್ರಿಕೆಟ್​ನಲ್ಲಿ 7 ಸಾವಿರ ರನ್​ಗಳ ಮೈಲುಗಲನ್ನು ತಲುಪಿದರು. ಆರ್​ಆರ್ ವಿರುದ್ದ 6 ಬೌಂಡರಿ ಹಾಗೂ 1 ಸಿಕ್ಸರ್​ನೊಂದಿಗೆ ಅಬ್ಬರಿಸಿದ ಮ್ಯಾಕ್ಸಿಯ ಬಿರುಸಿನ ಬ್ಯಾಟಿಂಗ್ ನೆರವನಿಂದ ಆರ್​ಸಿಬಿ 17 ಬಾಲ್​ಗಳು ಬಾಕಿ ಇರುವಂತೆ ಪಂದ್ಯವನ್ನು ಗೆದ್ದುಕೊಂಡಿತು. ಈ ಭರ್ಜರಿ ಜಯದ ನಡೆದ ಡ್ರೆಸ್ಸಿಂಗ್ ರೂಮ್ ಮೀಟಿಂಗ್ ವೇಳೆ ಕೋಚ್ ಮೈಕ್ ಹಸ್ಸೆನ್ ಗ್ಲೆನ್ ಮ್ಯಾಕ್ಸ್​ವೆಲ್ ಬ್ಯಾಟಿಂಗ್​ ಸಾಧನೆಯನ್ನು ಉಲ್ಲೇಖಿಸಿದರು.

ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಗ್ಲೆನ್​ ಮ್ಯಾಕ್ಸ್​ವೆಲ್ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್​ನಲ್ಲಿ 7 ಸಾವಿರ ರನ್ ಪೂರೈಸಿದ್ದಾರೆ ಎಂದು ಮೆಚ್ಚುಗೆಗಳ ಮಾತುಗಳಾನ್ನಾಡಿದ್ದರು. ಇದೇ ವೇಳೆ ಕೊಹ್ಲಿಯತ್ತ ಮೋಡುತ್ತಾ ಇನ್ನೂ 3 ಸಾವಿರ ರನ್ ಮಾತ್ರ ಎಂದು ಮ್ಯಾಕ್ಸ್​ವೆಲ್ ಕೈ ಸನ್ನೆ ಮಾಡಿದರು. ಇದೇ ವೇಳೆ ಎಲ್ಲಾ ಆಟಗಾರರು ಮುಗುಳ್ನಕ್ಕರು. ಏಕೆಂದರೆ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಟಿ20 ಕ್ರಿಕೆಟ್​ನಲ್ಲಿ 10 ಸಾವಿರ ರನ್ ಪೂರೈಸಿ ದಾಖಲೆ ಬರೆದಿದ್ದರು. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಟಿ20 ಕ್ರಿಕೆಟ್​ನಲ್ಲಿ 7 ಸಾವಿರ ರನ್ ಪೂರೈಸಿದ್ದು, ಈ ಮೂಲಕ ನಿಮ್ಮ ಸಾಧನೆಯನ್ನು ಹಿಂತಿಕ್ಕಲು ಇನ್ನು ಕೇವಲ 3 ಸಾವಿರ ರನ್ ಮಾತ್ರ ಬೇಕಿದೆ ಎಂದು ಕೊಹ್ಲಿಯ ಕಾಲೆಳೆಯುವ ಪ್ರಯತ್ನ ಮಾಡಿದ್ದರು. ಒಟ್ಟಿನಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ಗ್ಲೆನ್ ಮ್ಯಾಕ್ಸ್​ವೆಲ್ ಈ ಬಾರಿ 4 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಆರ್​ಸಿಬಿ ಪರ ಈ ಸೀಸನ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB

ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

ಇದನ್ನೂ ಓದಿ: Mumbai Indians: ಸಾಲು ಸಾಲು ಪಂದ್ಯ ಸೋತು ಮುಂಬೈ ಪ್ಲೇ ಆಫ್ ಪ್ರವೇಶಿಸಿತ್ತು..!

(Glenn Maxwell teases Virat Kohli after reaching the 7000-run landmark)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada