Virat Kohli: ವಿರಾಟ್ ಕೊಹ್ಲಿ ನಿಧಾನಗತಿಯ ಆಟಕ್ಕೆ ಕೊನೆಗೂ ಸಿಕ್ತು ಕಾರಣ: ಏನು ರೀಸನ್ ಗೊತ್ತೇ?

|

Updated on: Apr 26, 2024 | 9:20 AM

ವಿರಾಟ್ ಕೊಹ್ಲಿ ಆರಂಭದಲ್ಲಿ ವೇಗವಾಗಿ ಆಡಿದ್ದರು. ಪವರ್​ಪ್ಲೇನಲ್ಲಿ ಅಬ್ಬರಿಸಿದ್ದ ಅವರು, ನಂತರ 25 ಡೆಲಿವರಿಗಳಲ್ಲಿ ಬಾರಿಸಿದ್ದು ಕೇವಲ 19ರನ್​ಗಳನ್ನು ಮಾತ್ರ. ಇದನ್ನು ಸುನೀಲ್ ಗವಾಸ್ಕರ್ ಅವರು ಟೀಕಿಸಿದ್ದಾರೆ. ಆದರೆ, ಫಿಂಚ್ ಅವರು ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ.

Virat Kohli: ವಿರಾಟ್ ಕೊಹ್ಲಿ ನಿಧಾನಗತಿಯ ಆಟಕ್ಕೆ ಕೊನೆಗೂ ಸಿಕ್ತು ಕಾರಣ: ಏನು ರೀಸನ್ ಗೊತ್ತೇ?
ವಿರಾಟ್
Follow us on

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ನಿಧಾನಗತಿಯ ಆಟಕ್ಕೆ ಎಲ್ಲರೂ ಅಸಮಾಧಾನ ಹೊರಹಾಕುತ್ತಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 43 ಬಾಲ್​ಗಳಲ್ಲಿ 51 ರನ್ ಕಲೆ ಹಾಕಿರುವ ಅವರ ಸ್ಟ್ರೈಕ್ ರೇಟ್ ಕೇವಲ 118 ಇದೆ. ಇದನ್ನು ಅನೇಕರು ಟೀಕಿಸುತ್ತಿದ್ದಾರೆ. ವಿರಾಟ್ ಅವರು ನಿಧಾನಗತಿಯ ಆಟದ ಹಿಂದೆ ಒಂದು ಬಲವಾದ ಕಾರಣ ಇದೆ ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಆ್ಯರನ್ ಫಿಂಚ್ ಅವರು ಹೇಳಿದ್ದಾರೆ. ಈ ಮೊದಲು ಫಿಂಚ್ ಆರ್​ಸಿಬಿ ಪರ ಆಡಿದ್ದರು. ಅವರು ಓಪನಿಂಗ್​ನಲ್ಲಿ ಆಡುತ್ತಿದ್ದರು.

ವಿರಾಟ್ ಕೊಹ್ಲಿ ಅವರು ಆರಂಭದಲ್ಲಿ ವೇಗವಾಗಿ ಆಡಿದ್ದರು. ಪವರ್​ಪ್ಲೇನಲ್ಲಿ ಅಬ್ಬರಿಸಿದ್ದ ಅವರು, ನಂತರ 25 ಡೆಲಿವರಿಗಳಲ್ಲಿ ಬಾರಿಸಿದ್ದು ಕೇವಲ 19ರನ್​ಗಳನ್ನು ಮಾತ್ರ. ಇದನ್ನು ಸುನೀಲ್ ಗವಾಸ್ಕರ್ ಅವರು ಟೀಕಿಸಿದ್ದಾರೆ. ಆದರೆ, ಫಿಂಚ್ ಅವರು ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಅವರ ನಿಧಾನಗತಿಯ ಆಟಕ್ಕೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.

‘ಆರಂಭದಲ್ಲಿ ಕೊಹ್ಲಿ ಉತ್ತಮವಾಗಿ ಆಡಿದ್ದರು. ಆದರೆ, ಪವರ್​ಪ್ಲೇ ಬಳಿಕ ಅವರು 25 ಬಾಲ್​ಗಳಲ್ಲಿ 19 ರನ್ ಸಿಡಿಸಿದರು. ಎದುರಿದ್ದ ರಜತ್ ಪಟಿದಾರ್ ಅಬ್ಬರದ ಆಟ ಆಡುತ್ತಿದ್ದರು ಎಂಬುದನ್ನು ಗಮನಿಸಬೇಕು. ಕೊಹ್ಲಿ ರನ್ ನೋಡಿ ನೀವು ಕಡಿಮೆ ಆಯಿತು ಎನ್ನಬಹುದು. ಆದರೆ, ಪಾರ್ಟ್ನರ್​ಶಿಪ್ ನೋಡಿದಾಗ ನಿಜಕ್ಕೂ ಇದು ಕೆಲಸ ಮಾಡಿದೆ ಎನಿಸುತ್ತದೆ. ಪಟಿದಾರ್​ಗೆ ಸ್ಟ್ರೈಕ್ ನೀಡುತ್ತಾ ಕೊಹ್ಲಿ ಒಳ್ಳೆಯ ಕೆಲಸ ಮಾಡಿದರು’ ಎಂದಿದ್ದಾರೆ ಫಿಂಚ್.

ಇದನ್ನೂ ಓದಿ: ಆರ್​ಸಿಬಿ ಅಬ್ಬರದ ಆಟಕ್ಕೆ ಕಾವ್ಯಾ ಮಾರನ್ ಸೈಲೆಂಟ್, ವಿರಾಟ್​ ನಗು ನೋಡಿ

ಈ ಮೊದಲು ಹೈದರಾಬಾದ್ ತಂಡ 250+ ರನ್​ಗಳನ್ನು ಮೂರು ಬಾರಿ ಹೊಡೆದಿದೆ. ಆದಾಗ್ಯೂ ಅವರಿಗೆ ಆರ್​ಸಿಬಿ ನೀಡಿದ 207 ರನ್​ಗಳನ್ನು ಚೇಸ್ ಮಾಡೋಕೆ ಸಾಧ್ಯವಾಗಿಲ್ಲ. ಎಂಟು ಪಂದ್ಯಗಳಲ್ಲಿ ಆರ್​ಸಿಬಿ 7 ಮ್ಯಾಚ್​ಗಳನ್ನು ಸೋತಿದೆ. ಈಗ ತಂಡ ಗೆದ್ದು ಬೀಗಿದೆ. ಈ ಮೂಲಕ ಸೀಸನ್​ನ ಎರಡನೇ ಗೆಲುವು ದಾಖಲಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.