Pat Cummins: ‘ನಮ್ಮ ಸೋಲಿಗೆ ಇವರೇ ಕಾರಣ’; ಹೀನಾಯ ಸೋಲಿನ ಬಳಿಕ SRH ಕ್ಯಾಪ್ಟನ್ ಏನಂದ್ರು ನೋಡಿ

‘ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ರನ್​ಗಳನ್ನು ನೀಡಿದೆವು’ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ಈ ಮೂಲಕ ತಮ್ಮ ಸೋಲಿಗೆ ಬೌಲರ್​ಗಳು ನೇರ ಕಾರಣ ಎಂದು ಹೇಳಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ, ನಿನ್ನೆಯ ಪಂದ್ಯದಲ್ಲಿ ಅತೀ ದುಬಾರಿ ಆಗಿದ್ದು ಪ್ಯಾಟ್ ಕಮಿನ್ಸ್ ಅವರೇ.

Pat Cummins: ‘ನಮ್ಮ ಸೋಲಿಗೆ ಇವರೇ ಕಾರಣ’; ಹೀನಾಯ ಸೋಲಿನ ಬಳಿಕ SRH ಕ್ಯಾಪ್ಟನ್ ಏನಂದ್ರು ನೋಡಿ
ಕಮ್ಮಿನ್ಸ್
Follow us
ರಾಜೇಶ್ ದುಗ್ಗುಮನೆ
|

Updated on:Apr 26, 2024 | 7:51 AM

ಸನ್​ ರೈಸರ್ಸ್ ಹೈದರಾಬಾದ್ (SRH) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ನಮ್ಮ ಬೆಂಗಳೂರು ತಂಡ ಗೆದ್ದು ಬೀಗಿದೆ. ಆರ್​ಸಿಬಿ ತಂಡದ ಒಗ್ಗಟ್ಟಿನ ಪ್ರದರ್ಶನದಿಂದ ಗೆಲುವು ಸಿಕ್ಕಿದೆ. ಹೋಂಗ್ರೌಂಡ್​ನಲ್ಲಿ ಆರ್​ಸಿಬಿ ವಿರುದ್ಧ ಸೋಲು ಕಂಡಿರುವುದರಿಂದ ಹೈದರಾಬಾದ್​ ತಂಡಕ್ಕೆ ಸಾಕಷ್ಟು ಅವಮಾನ ಆಗಿದೆ. ಹೈದರಾಬಾದ್​ನ ವಿಕೆಟ್​ಗಳು ಬೀಳುವಾಗ ಇಡೀ ಮೈದಾನ ಸೈಲೆಂಟ್ ಆಗಿತ್ತು. ಸೋಲಿನ ಬಗ್ಗೆ ಹೈದರಾಬಾದ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಮಾತನಾಡಿದ್ದಾರೆ.

‘ಇದು ನಮಗೆ ಒಳ್ಳೆಯ ರಾತ್ರಿ ಆಗಿಲ್ಲ. ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ರನ್​ಗಳನ್ನು ನೀಡಿದೆವು’ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ಈ ಮೂಲಕ ತಮ್ಮ ಸೋಲಿಗೆ ಬೌಲರ್​ಗಳು ನೇರ ಕಾರಣ ಎಂದು ಹೇಳಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ, ನಿನ್ನೆಯ ಪಂದ್ಯದಲ್ಲಿ ಅತೀ ದುಬಾರಿ ಆಗಿದ್ದು ಪ್ಯಾಟ್ ಕಮಿನ್ಸ್ ಅವರೇ. ನಾಲ್ಕು ಓವರ್​ಗಳಲ್ಲಿ ಬರೋಬ್ಬರಿ 55 ರನ್​ಗಳನ್ನು ನೀಡಿದ್ದರು. ಅದೇ ರೀತಿ ಮಾರ್ಕಂಡೆ ಕೂಡ 3 ಓವರ್​ಗಳಲ್ಲಿ 42 ರನ್​ಗಳನ್ನು ನೀಡಿದ್ದರು.

‘ರನ್ ಚೇಸ್ ವೇಳೆ ನಾವು ಸಾಕಷ್ಟು ವಿಕೆಟ್ ಕಳೆದುಕೊಂಡೆವು. ನಾವು ಎರಡನೇ ಬ್ಯಾಟಿಂಗ್ ಮಾಡಿದ್ದು ಸೋಲಿಗೆ ಕಾರಣ ಎಂದು ನನಗೆ ಅನಿಸುತ್ತಿಲ್ಲ. ಇದು ಟಿ20 ಪಂದ್ಯ. ನಾವು ಎಲ್ಲವನ್ನೂ ಗೆಲ್ಲೋಕೆ ಸಾಧ್ಯವಿಲ್ಲ.  ಕೆಲವು ಪಂದ್ಯಗಳು ನಮ್ಮದಾಗಿರುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: IPL 2024: ಆರ್​ಸಿಬಿ ಬೌಲಿಂಗ್ ದಾಳಿಯನ್ನು ಗೇಲಿ ಮಾಡಿ ನಕ್ಕ ಅಯ್ಯರ್..! ವಿಡಿಯೋ ವೈರಲ್

ಟಾಸ್​ ಗೆದ್ದ ಆರ್​ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡಿತು. ವಿರಾಟ್ ಕೊಹ್ಲಿ ಹಾಗೂ ರಜತ್ ಪಟಿದಾರ್ ಅರ್ಧಶತಕ ಹಾಗೂ ಗ್ರೀನ್ ಅವರ 37 ರನ್ ಕೊಡುಗೆ ತಂಡಕ್ಕೆ ಸಹಕಾರಿ ಆಯಿತು. ಈ ಮೂಲಕ 20 ಓವರ್​ಗಳಲ್ಲಿ 206 ರನ್ ಕಲೆ ಹಾಕಿತು. ಬೌಲಿಂಗ್​ನಲ್ಲೂ ಆರ್​ಸಿಬಿ ಸಾಂಘಿಕ ಪ್ರದರ್ಶನ ನೀಡಿತು. ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಗ್ರೀನ್ ತಕಾ ಒಂದು ವಿಕೆಟ್ ತೆಗೆದರು. ಸಿರಾಜ್ ಅವರು ವಿಕೆಟ್ ಕೀಳದೇ ಇದ್ದರೂ ನಾಲ್ಕು ಓವರ್​ಗಳಲ್ಲಿ ಕೇವಲ 20 ರನ್ ನೀಡಿ, ಎಕಾನಮಿ ಬೌಲರ್ ಎನಿಸಿಕೊಂಡರು. ಅಂತಿಮವಾಗಿ ಹೈದರಾಬದ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 171 ರನ್​ ಗಳಿಸಲಷ್ಟೇ ಶಕ್ತವಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Fri, 26 April 24

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?