SRH vs RCB, IPL 2024: ಸೇಡಿನ ಸಮರದಲ್ಲಿ ಟಾಸ್ ಗೆದ್ದ ಆರ್‌ಸಿಬಿ; ಉಭಯ ತಂಡಗಳು ಹೀಗಿವೆ
SRH vs RCB, IPL 2024: ಐಪಿಎಲ್ 17ನೇ ಸೀಸನ್ನ 41ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿದೆ.
ಐಪಿಎಲ್ 17ನೇ (IPL 2024) ಸೀಸನ್ನ 41ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (Sunrisers Hyderabad vs Royal Challengers Bengaluru) ತಂಡವನ್ನು ಎದುರಿಸಿದೆ. ಇದು ಹೈದರಾಬಾದ್‌ಗೆ ಎಂಟನೇ ಮತ್ತು ಆರ್‌ಸಿಬಿಗೆ ಒಂಬತ್ತನೇ ಪಂದ್ಯವಾಗಿದೆ. ಹೈದರಾಬಾದ್ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದ್ದರೆ, ಇತ್ತ ಆರ್‌ಸಿಬಿ 9 ಪಂದ್ಯಗಳಲ್ಲಿ 1 ರಲ್ಲಿ ಮಾತ್ರ ಗೆದ್ದಿದೆ. ಹೀಗಾಗಿ ಲೀಗ್ನಲ್ಲಿ ಆರ್‌ಸಿಬಿ ಸವಾಲು ಬಹುತೇಕ ಮುಗಿದಿದೆ. ಆದರೆ ಹೈದರಾಬಾದ್‌ಗೆ ಈ ಪಂದ್ಯದಲ್ಲಿ ಗೆಲುವು ಅತ್ಯವಶ್ಯಕವಾಗಿದೆ. ಏಕೆಂದರೆ ಈ ಪಂದ್ಯದ ಫಲಿತಾಂಶ ಪಾಯಿಂಟ್ ಪಟ್ಟಿಯಲ್ಲಿ ತಂಡಕ್ಕೆ ಬಹಳ ಮಹತ್ವದಕ್ಕಾಗಿದೆ. ಇನ್ನು ಈ ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್ ಕೂಡ ಹೊರಬಿದ್ದಿದೆ.
ಸೇಡಿನ ಸಮರ
ಈ ಸೀಸನ್ನಲ್ಲಿ ಆರ್‌ಸಿಬಿ-ಹೈದಾಬಾದ್ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ಉಭಯ ತಂಡಗಳು ಏಪ್ರಿಲ್ 15 ರಂದು ಪಂದ್ಯ ಆಡಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ದಾಖಲೆಯ 287 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ 25 ರನ್ಗಳಿಂದ ಸೋಲೊಪ್ಪಿಕೊಂಡಿತು. ಆದರೆ ತವರಿನಲ್ಲಿ ಹೈದರಾಬಾದ್ ವಿರುದ್ಧ ಸೋತಿದ್ದ ಆರ್‌ಸಿಬಿ ಇದೀಗ ಅವರ ನೆಲದಲ್ಲಿ ಅವರನ್ನು ಸೋಲಿಸುವ ಇರಾದೆಯಲ್ಲಿ ಕಣಕ್ಕಿಳಿಯುತ್ತಿದೆ.
ಉಭಯ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ವಿಲ್ ಜಾಕ್ವೆಸ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮೊರೊರ್, ಕರ್ಣ್ ಶರ್ಮಾ, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.
ಇಂಪ್ಯಾಕ್ಟ್ ಪ್ಲೇಯರ್: ಸುಯ್ಯಾಶ್ ಪ್ರಭುದೇಸಾಯಿ, ಅನುಜ್ ರಾವತ್, ಹಿಮಾಂಶು ಶರ್ಮಾ, ವಿಜಯಕುಮಾರ್ ವೈಶ್, ಸ್ವಪ್ನಿಲ್ ಸಿಂಗ್.
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಏಡೆನ್ ಮಾರ್ಕ್‌ರಾಮ್, ಹೆನ್ರಿಚ್ ಕ್ಲಾಸೆನ್ (ವಾಕ್), ನಿತೀಶ್ ರೆಡ್ಡಿ, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕಟ್, ಮಯಾಂಕ್ ಮಾರ್ಕಂಡೇ, ಟಿ ನಟರಾಜನ್.
ಇಂಪ್ಯಾಕ್ಟ್ ಪ್ಲೇಯರ್: ಉಮ್ರಾನ್ ಮಲಿಕ್, ಅನ್ಮೋಲ್‌ಪ್ರೀತ್ ಸಿಂಗ್, ಆಕಾಶ್ ಮಹಾರಾಜ್ ಸಿಂಗ್, ಗ್ಲೆನ್ ಫಿಲಿಪ್ಸ್, ವಾಷಿಂಗ್ಟನ್ ಸುಂದರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Thu, 25 April 24