SRH vs RCB Highlights, IPL 2024: ಸೇಡಿನ ಸಮರದಲ್ಲಿ ಗೆದ್ದು ಬೀಗಿದ ಆರ್​​ಸಿಬಿ

ಪೃಥ್ವಿಶಂಕರ
|

Updated on:Apr 25, 2024 | 11:29 PM

Sunrisers Hyderabad vs Royal Challengers Bengaluru Highlights in Kannada: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಪ್ರದರ್ಶನ ನೀಡಿ ಬಲಿಷ್ಠ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಂಡಿಯೂರುವಂತೆ ಮಾಡಿದೆ.

SRH vs RCB Highlights, IPL 2024: ಸೇಡಿನ ಸಮರದಲ್ಲಿ ಗೆದ್ದು ಬೀಗಿದ ಆರ್​​ಸಿಬಿ

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಪ್ರದರ್ಶನ ನೀಡಿ ಬಲಿಷ್ಠ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಂಡಿಯೂರುವಂತೆ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 206 ರನ್ ಗಳಿಸಿತು. ಉತ್ತರವಾಗಿ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್​ನ ಬ್ಯಾಟಿಂಗ್ ವೈಫಲ್ಯದಿಂದಾಗಿ ತಂಡವು 171 ರನ್ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್ ಸೋಲಿಗೆ ತಂಡದ ಅಗ್ರಕ್ರಮಾಂಕದ ವೈಫಲ್ಯ ಪ್ರಮುಖ ಕಾರಣವಾಗಿತ್ತು. ಸ್ಫೋಟಕ ಆರಂಭಿಕ ಟ್ರಾವಿಸ್ ಹೆಡ್ ಕೇವಲ 1 ರನ್ ಗಳಿಸಿ ಔಟಾದರೆ, ಏಡೆನ್ ಮಾರ್ಕ್ರಾಮ್ 7 ರನ್‌ಗಳ ಇನಿಂಗ್ಸ್ ಆಡಿದರು. ಹೆನ್ರಿಕ್ ಕ್ಲಾಸೆನ್ ಕೂಡ ಕೇವಲ 7 ರನ್ ಗಳಿಸಲಷ್ಟೇ ಶಕ್ತರಾದರು. ಅಭಿಷೇಕ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್ ತಲಾ 31 ಮತ್ತು ಶಹಬಾಜ್ ಅಹ್ಮದ್ ಔಟಾಗದೆ 40 ರನ್ ಗಳಿಸುವ ಮೂಲಕ ಗೆಲುವಿಗಾಗಿ ಹೋರಾಟ ನೀಡಿದರು. ಅದಾಗ್ಯೂ ಬೆಂಗಳೂರು ಪಂದ್ಯವನ್ನು 35 ರನ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಹಿಂದಿನ ಪಂದ್ಯದ ಸೋಲಿಗೆ ಆರ್​ಸಿಬಿ ಸೇಡು ತೀರಿಸಿಕೊಂಡಿದೆ.

LIVE NEWS & UPDATES

The liveblog has ended.
  • 25 Apr 2024 11:19 PM (IST)

    35 ರನ್ ಜಯ

    ಆರ್​ಸಿಬಿ ನೀಡಿದ 207 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಶಕ್ತವಾಗಿ 35 ರನ್‌ಗಳಿಂದ ಸೊಲೊಪ್ಪಿಕೊಂಡಿತು.

  • 25 Apr 2024 11:10 PM (IST)

    19 ಓವರ್ ಮುಕ್ತಾಯ

    ಸನ್ ರೈಸರ್ಸ್ ಹೈದರಾಬಾದ್ ತಂಡ 19 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು 22 ರನ್‌ಗಳ ಜೊತೆಯಾಟ ಆಡಿದ್ದಾರೆ. ತಂಡದ ಗೆಲುವಿಗೆ 6 ಎಸೆತಗಳಲ್ಲಿ 44 ರನ್‌ಗಳ ಅಗತ್ಯವಿದೆ.

  • 25 Apr 2024 10:45 PM (IST)

    ಕಮಿನ್ಸ್ ಔಟ್

    ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ 31 ರನ್ ಗಳಿಸಿ ಔಟಾಗಿದ್ದಾರೆ. ಶಹಬಾಜ್ ಅಹ್ಮದ್ ಅವರೊಂದಿಗೆ ಭುವನೇಶ್ವರ್ ಕುಮಾರ್ ಕ್ರೀಸ್‌ಗೆ ಬಂದಿದ್ದಾರೆ. ತಂಡದ ಸ್ಕೋರ್ 7 ವಿಕೆಟ್ ನಷ್ಟಕ್ಕೆ 124 ರನ್ ಆಗಿದೆ.

  • 25 Apr 2024 10:36 PM (IST)

    12 ಓವರ್‌ ಪೂರ್ಣ

    ಸನ್ ರೈಸರ್ಸ್ ಹೈದರಾಬಾದ್ ತಂಡ 12 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ. ಪ್ಯಾಟ್ ಕಮಿನ್ಸ್ 29 ರನ್ ಹಾಗೂ ಶಹಬಾಜ್ ಅಹ್ಮದ್ 17 ರನ್ ಗಳಿಸಿ ಆಡುತ್ತಿದ್ದಾರೆ. ತಂಡದ ಗೆಲುವಿಗೆ 48 ಎಸೆತಗಳಲ್ಲಿ 88 ರನ್‌ಗಳ ಅಗತ್ಯವಿದೆ.

  • 25 Apr 2024 09:59 PM (IST)

    ಕ್ಲಾಸೆನ್ ಔಟ್

    ಸ್ವಪ್ನಿಲ್ ಸಿಂಗ್ 5ನೇ ಓವರ್ ನಲ್ಲಿ ಉತ್ತಮ ಬೌಲಿಂಗ್ ಮಾಡಿ ಮತ್ತೊಂದು ವಿಕೆಟ್ ಪಡೆದಿದ್ದಾರೆ. ಅವರು ಪ್ರಮುಖ ಬ್ಯಾಟರ್ ಹೆನ್ರಿಚ್ ಕ್ಲಾಸೆನ್​ರನ್ನು ಔಟ್ ಮಾಡಿದರು. ನಿತೀಶ್ ರೆಡ್ಡಿ ಅವರೊಂದಿಗೆ ಶಹಬಾಜ್ ಅಹ್ಮದ್ ಕ್ರೀಸ್‌ಗೆ ಬಂದಿದ್ದಾರೆ. ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 58 ರನ್ ಆಗಿದೆ.

  • 25 Apr 2024 09:56 PM (IST)

    ಮಾರ್ಕ್ರಾಮ್ ಔಟ್

    ಏಡೆನ್ ಮಾರ್ಕ್ರಾಮ್ ವಿಕೆಟ್ ಪತನದೊಂದಿಗೆ ಹೈದರಾಬಾದ್ 4ನೇ ವಿಕೆಟ್ ಕಳೆದುಕೊಂಡಿದೆ. ತಂಡದ ಪರವಾಗಿ ಹೆನ್ರಿಚ್ ಕ್ಲಾಸೆನ್ ಕ್ರೀಸ್‌ಗೆ ಬಂದಿದ್ದಾರೆ. ತಂಡದ ಸ್ಕೋರ್ 3 ವಿಕೆಟ್ ನಷ್ಟದಲ್ಲಿ 49 ರನ್ ಆಗಿದೆ.

  • 25 Apr 2024 09:55 PM (IST)

    ಅಭಿಷೇಕ್ ಶರ್ಮಾ ಔಟ್

    ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. 4 ಓವರ್‌ಗಳಲ್ಲಿ ತಂಡ 2 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿದೆ.

  • 25 Apr 2024 09:45 PM (IST)

    2 ಓವರ್‌ ಅಂತ್ಯ

    ಸನ್‌ರೈಸರ್ಸ್ ಹೈದರಾಬಾದ್ ತಂಡ 2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿದೆ. ಅಭಿಷೇಕ್ ಶರ್ಮಾ 8 ರನ್, ಏಡೆನ್ ಮಾರ್ಕ್ರಾಮ್ 1 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 25 Apr 2024 09:37 PM (IST)

    ಟ್ರಾವಿಸ್ ಹೆಡ್ ಔಟ್

    ಸನ್ ರೈಸರ್ಸ್ ಹೈದರಾಬಾದ್ ಮೊದಲ ವಿಕೆಟ್ ಕಳೆದುಕೊಂಡಿದೆ. ಟ್ರಾವಿಸ್ ಹೆಡ್ 1 ರನ್ ಗಳಿಗೆ ಇನ್ನಿಂಗ್ಸ್ ಮುಗಿಸಿದ್ದಾರೆ.

  • 25 Apr 2024 09:25 PM (IST)

    207 ರನ್‌ಗಳ ಗುರಿ

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿದೆ. ತಂಡದ ಪರ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ಅರ್ಧಶತಕ ಸಿಡಿಸಿದ್ದರೆ ಕ್ಯಾಮರೂನ್ ಗ್ರೀನ್ 20 ಎಸೆತಗಳಲ್ಲಿ 37 ರನ್ ಗಳಿಸಿ ಅಜೇಯರಾಗಿ ಉಳಿದರು.

  • 25 Apr 2024 09:04 PM (IST)

    18 ಓವರ್‌ ಪೂರ್ಣ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ಓವರ್‌ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿದೆ. ದಿನೇಶ್ ಕಾರ್ತಿಕ್ 7 ರನ್ ಮತ್ತು ಕ್ಯಾಮರೂನ್ ಗ್ರೀನ್ 31 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 25 Apr 2024 08:55 PM (IST)

    16 ಓವರ್‌ ಅಂತ್ಯ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 16 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದೆ. ಮಹಿಪಾಲ್ ಲೊಮ್ರೋರ್ 7 ರನ್ ಮತ್ತು ಕ್ಯಾಮರೂನ್ ಗ್ರೀನ್ 15 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 25 Apr 2024 08:44 PM (IST)

    ಕೊಹ್ಲಿ ಅದ್ಭುತ ಬ್ಯಾಟಿಂಗ್

    ವಿರಾಟ್ ಕೊಹ್ಲಿ ಮತ್ತೊಂದು ಅರ್ಧಶತಕ ಪೂರೈಸಿದ್ದಾರೆ. ತಂಡ 3 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದೆ.

  • 25 Apr 2024 08:30 PM (IST)

    ರಜತ್ ಪಾಟಿದಾರ್ ಔಟ್

    ಅರ್ಧಶತಕ ಬಾರಿಸಿ ರಜತ್ ಪಾಟಿದಾರ್ ಔಟಾಗಿದ್ದಾರೆ. ತಂಡದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 132 ರನ್ ಆಗಿದೆ.

  • 25 Apr 2024 08:29 PM (IST)

    ಪಾಟಿದಾರ್ 4 ಸಿಕ್ಸರ್

    11ನೇ ಓವರ್‌ನಲ್ಲಿ ರಜತ್ ಪಾಟಿದಾರ್ ಒಟ್ಟು 27 ರನ್ ಕಲೆಹಾಕಿದರು. ಈ ಓವರ್​ನಲ್ಲಿ ರಜತ್ ಪಾಟಿದಾರ್ 4 ಸಿಕ್ಸರ್ ಬಾರಿಸಿದರು.

  • 25 Apr 2024 08:15 PM (IST)

    ಆರ್‌ಸಿಬಿ ಅರ್ಧ ಇನಿಂಗ್ಸ್‌ ಅಂತ್ಯ

    ಆರ್‌ಸಿಬಿ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು 29 ರನ್‌ಗಳ ಜೊತೆಯಾಟ ಆಡಿದ್ದಾರೆ.

  • 25 Apr 2024 08:12 PM (IST)

    8 ಓವರ್‌ ಪೂರ್ಣ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿದೆ. ತಂಡದ ಪರ ರಜತ್ ಪಾಟಿದಾರ್ 12 ರನ್ ಹಾಗೂ ವಿರಾಟ್ ಕೊಹ್ಲಿ 36 ರನ್ ಗಳಿಸಿ ಆಡುತ್ತಿದ್ದಾರೆ.

  • 25 Apr 2024 08:10 PM (IST)

    2ನೇ ವಿಕೆಟ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7ನೇ ಓವರ್​ನಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತು. ವಿಲ್ ಜಾಕ್ವೆಸ್ 6 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದಾರೆ. ತಂಡದ ಸ್ಕೋರ್ 2 ವಿಕೆಟ್ ನಷ್ಟಕ್ಕೆ 65 ರನ್ ಆಗಿದೆ.

  • 25 Apr 2024 08:09 PM (IST)

    ಪವರ್‌ಪ್ಲೇ

    ಪವರ್‌ಪ್ಲೇ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿದೆ. ತಂಡದ ಪರ ವಿರಾಟ್ ಕೊಹ್ಲಿ 32 ರನ್ ಹಾಗೂ ವಿಲ್ ಜಾಕ್ವೆಸ್ 4 ರನ್ ಗಳಿಸಿ ಆಡುತ್ತಿದ್ದಾರೆ.

  • 25 Apr 2024 08:09 PM (IST)

    ಡು ಪ್ಲೆಸಿಸ್ ಔಟ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ 25 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದ್ದಾರೆ. 4 ಓವರ್‌ಗಳಲ್ಲಿ ತಂಡ 1 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿದೆ. 

  • 25 Apr 2024 07:01 PM (IST)

    ಟಾಸ್ ಗೆದ್ದ ಆರ್​ಸಿಬಿ

    ಟಾಸ್ ಗೆದ್ದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • 25 Apr 2024 06:29 PM (IST)

    ಆರ್​ಸಿಬಿ- ಎಸ್​ಆರ್​ಹೆಚ್ ಮುಖಾಮುಖಿ

    ಇಂದು ಐಪಿಎಲ್ 2024ರ 41ನೇ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಹೈವೋಲ್ಟೇಜ್ ಕದನದಲ್ಲಿ ಸನ್ ರೈಸರ್ಸ್​ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗುತ್ತಿವೆ.

  • Published On - Apr 25,2024 6:29 PM

    Follow us
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
    ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
    ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
    ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
    ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
    ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
    ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
    ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
    ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
    ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
    ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
    ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್