Virat Kohli: ವಿರಾಟ್ ಕೊಹ್ಲಿ ನಿಧಾನಗತಿಯ ಆಟಕ್ಕೆ ಕೊನೆಗೂ ಸಿಕ್ತು ಕಾರಣ: ಏನು ರೀಸನ್ ಗೊತ್ತೇ?
ವಿರಾಟ್ ಕೊಹ್ಲಿ ಆರಂಭದಲ್ಲಿ ವೇಗವಾಗಿ ಆಡಿದ್ದರು. ಪವರ್ಪ್ಲೇನಲ್ಲಿ ಅಬ್ಬರಿಸಿದ್ದ ಅವರು, ನಂತರ 25 ಡೆಲಿವರಿಗಳಲ್ಲಿ ಬಾರಿಸಿದ್ದು ಕೇವಲ 19ರನ್ಗಳನ್ನು ಮಾತ್ರ. ಇದನ್ನು ಸುನೀಲ್ ಗವಾಸ್ಕರ್ ಅವರು ಟೀಕಿಸಿದ್ದಾರೆ. ಆದರೆ, ಫಿಂಚ್ ಅವರು ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ನಿಧಾನಗತಿಯ ಆಟಕ್ಕೆ ಎಲ್ಲರೂ ಅಸಮಾಧಾನ ಹೊರಹಾಕುತ್ತಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 43 ಬಾಲ್ಗಳಲ್ಲಿ 51 ರನ್ ಕಲೆ ಹಾಕಿರುವ ಅವರ ಸ್ಟ್ರೈಕ್ ರೇಟ್ ಕೇವಲ 118 ಇದೆ. ಇದನ್ನು ಅನೇಕರು ಟೀಕಿಸುತ್ತಿದ್ದಾರೆ. ವಿರಾಟ್ ಅವರು ನಿಧಾನಗತಿಯ ಆಟದ ಹಿಂದೆ ಒಂದು ಬಲವಾದ ಕಾರಣ ಇದೆ ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಆ್ಯರನ್ ಫಿಂಚ್ ಅವರು ಹೇಳಿದ್ದಾರೆ. ಈ ಮೊದಲು ಫಿಂಚ್ ಆರ್ಸಿಬಿ ಪರ ಆಡಿದ್ದರು. ಅವರು ಓಪನಿಂಗ್ನಲ್ಲಿ ಆಡುತ್ತಿದ್ದರು.
ವಿರಾಟ್ ಕೊಹ್ಲಿ ಅವರು ಆರಂಭದಲ್ಲಿ ವೇಗವಾಗಿ ಆಡಿದ್ದರು. ಪವರ್ಪ್ಲೇನಲ್ಲಿ ಅಬ್ಬರಿಸಿದ್ದ ಅವರು, ನಂತರ 25 ಡೆಲಿವರಿಗಳಲ್ಲಿ ಬಾರಿಸಿದ್ದು ಕೇವಲ 19ರನ್ಗಳನ್ನು ಮಾತ್ರ. ಇದನ್ನು ಸುನೀಲ್ ಗವಾಸ್ಕರ್ ಅವರು ಟೀಕಿಸಿದ್ದಾರೆ. ಆದರೆ, ಫಿಂಚ್ ಅವರು ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಅವರ ನಿಧಾನಗತಿಯ ಆಟಕ್ಕೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.
The face Smiled when the little Kohli “Akaay” was born .
After that we See now ♥️♥️#ViratKohli𓃵 pic.twitter.com/KwnhMj73Lz
— 𝙎𝙪𝙧𝙮𝙖 (@Itz_Surya18) April 25, 2024
‘ಆರಂಭದಲ್ಲಿ ಕೊಹ್ಲಿ ಉತ್ತಮವಾಗಿ ಆಡಿದ್ದರು. ಆದರೆ, ಪವರ್ಪ್ಲೇ ಬಳಿಕ ಅವರು 25 ಬಾಲ್ಗಳಲ್ಲಿ 19 ರನ್ ಸಿಡಿಸಿದರು. ಎದುರಿದ್ದ ರಜತ್ ಪಟಿದಾರ್ ಅಬ್ಬರದ ಆಟ ಆಡುತ್ತಿದ್ದರು ಎಂಬುದನ್ನು ಗಮನಿಸಬೇಕು. ಕೊಹ್ಲಿ ರನ್ ನೋಡಿ ನೀವು ಕಡಿಮೆ ಆಯಿತು ಎನ್ನಬಹುದು. ಆದರೆ, ಪಾರ್ಟ್ನರ್ಶಿಪ್ ನೋಡಿದಾಗ ನಿಜಕ್ಕೂ ಇದು ಕೆಲಸ ಮಾಡಿದೆ ಎನಿಸುತ್ತದೆ. ಪಟಿದಾರ್ಗೆ ಸ್ಟ್ರೈಕ್ ನೀಡುತ್ತಾ ಕೊಹ್ಲಿ ಒಳ್ಳೆಯ ಕೆಲಸ ಮಾಡಿದರು’ ಎಂದಿದ್ದಾರೆ ಫಿಂಚ್.
ಇದನ್ನೂ ಓದಿ: ಆರ್ಸಿಬಿ ಅಬ್ಬರದ ಆಟಕ್ಕೆ ಕಾವ್ಯಾ ಮಾರನ್ ಸೈಲೆಂಟ್, ವಿರಾಟ್ ನಗು ನೋಡಿ
ಈ ಮೊದಲು ಹೈದರಾಬಾದ್ ತಂಡ 250+ ರನ್ಗಳನ್ನು ಮೂರು ಬಾರಿ ಹೊಡೆದಿದೆ. ಆದಾಗ್ಯೂ ಅವರಿಗೆ ಆರ್ಸಿಬಿ ನೀಡಿದ 207 ರನ್ಗಳನ್ನು ಚೇಸ್ ಮಾಡೋಕೆ ಸಾಧ್ಯವಾಗಿಲ್ಲ. ಎಂಟು ಪಂದ್ಯಗಳಲ್ಲಿ ಆರ್ಸಿಬಿ 7 ಮ್ಯಾಚ್ಗಳನ್ನು ಸೋತಿದೆ. ಈಗ ತಂಡ ಗೆದ್ದು ಬೀಗಿದೆ. ಈ ಮೂಲಕ ಸೀಸನ್ನ ಎರಡನೇ ಗೆಲುವು ದಾಖಲಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.