ಆರ್ಸಿಬಿ ಅಬ್ಬರದ ಆಟಕ್ಕೆ ಕಾವ್ಯಾ ಮಾರನ್ ಸೈಲೆಂಟ್, ವಿರಾಟ್ ನಗು ನೋಡಿ
ಆರ್ಸಿಬಿ ಬೌಲರ್ಗಳು ಸಾಂಘಿಕ ಪ್ರದರ್ಶನ ತೋರಿದರು. ಅಪಾಯಕಾರಿ ಆಗಬಹುದಾಗಿದ್ದ ಹೆಡ್ ಅವರನ್ನು ಕೇವಲ ಒಂದು ರನ್ಗೆ ಔಟ್ ಮಾಡಿದರು. ಕ್ಲಾಸನ್ ಏಳು ರನ್ಗೆ ಔಟ್ ಆದರು. ಅಂತಿಮವಾಗಿ ಆರ್ಸಿಬಿ 171 ರನ್ಗೆ ಆಟ ಮುಗಿಸಿತು. ಸ್ಟಾರ್ ಆಟಗಾರರು ಔಟ್ ಆಗುತ್ತಿದ್ದಂತೆ ಎಸ್ಆರ್ಎಚ್ನ ಸಿಇಒ ಕಾವ್ಯಾ ಮಾರನ್ ಮುಖ ಸಪ್ಪಾಗುತ್ತಿತ್ತು.
ಈ ಸೀಸನ್ಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದ ಹೈದರಾಬಾದ್ ತಂಡವನ್ನು ಆರ್ಸಿಬಿ (RCB) ಬಗ್ಗು ಬಡಿದಿದೆ. ನಮ್ಮಲ್ಲಿ ಅದ್ಭುತ ಬ್ಯಾಟ್ಸಮನ್ಗಳು ಇದ್ದಾರೆ ಎಂದು ಬೀಗುತ್ತಿದ್ದ ಹೈದರಾಬದ್ ತಂಡವನ್ನು ಫಾಪ್ ಡುಪ್ಲೆಸಿಸ್ ಪಡೆ ಬಗ್ಗು ಬಡಿದಿದೆ. ಹೈದರಾಬಾದ್ ತಂಡದ ಒಂದೊಂದೇ ವಿಕೆಟ್ ಬೀಳುತ್ತಾ ಹೋದಂತೆ ಇಡೀ ಮೈದಾನ ಸೈಲೆಂಟ್ ಆಗಿದೆ. ವಿರಾಟ್ ಕೊಹ್ಲಿ ಮುಖದಲ್ಲಿ ನಗು ಕಾಣಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಟಾಸ್ ಗೆದ್ದ ಆರ್ಸಿಬಿ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಕೊಹ್ಲಿ ಅವರು 51 ರನ್ ಪೇರಿಸಿದರು. ಫಾಪ್ 208 ಸ್ಟ್ರೈಕ್ರೇಟ್ನಲ್ಲಿ 25 ರನ್ ಕಲೆ ಹಾಕಿದರು. ರಜತ್ ಪಟಿದಾರ್ ಅವರು ಕೇವಲ 20 ಬಾಲ್ಗಳಲ್ಲಿ 50 ರನ್ ಬಾರಿಸಿ ತಂಡಕ್ಕೆ ಆಸರೆ ಆದರು. ಗ್ರೀನ್ ಅವರು 37 ರನ್ ಸಿಡಿಸಿದರು. ಕಾರ್ತಿಕ್ ಅವರಿಂದ ಅಂದುಕೊಂಡ ರೀತಿಯ ಆಟ ಬಂದಿಲ್ಲ. ಅಂತಿಮವಾಗಿ 206 ರನ್ಗಳನ್ನು ಆರ್ಸಿಬಿ ಕಲೆ ಹಾಕಿತು. ಇದನ್ನೂ ಓದಿ: ‘ನಮ್ಮ ಸೋಲಿಗೆ ಇವರೇ ಕಾರಣ’; ಹೀನಾಯ ಸೋಲಿನ ಬಳಿಕ SRH ಕ್ಯಾಪ್ಟನ್ ಏನಂದ್ರು ನೋಡಿ
ಆರ್ಸಿಬಿ ಬೌಲರ್ಗಳು ಸಾಂಘಿಕ ಪ್ರದರ್ಶನ ತೋರಿದರು. ಅಪಾಯಕಾರಿ ಆಗಬಹುದಾಗಿದ್ದ ಹೆಡ್ ಅವರನ್ನು ಕೇವಲ ಒಂದು ರನ್ಗೆ ಔಟ್ ಮಾಡಿದರು. ಕ್ಲಾಸನ್ ಏಳು ರನ್ಗೆ ಔಟ್ ಆದರು. ಅಂತಿಮವಾಗಿ ಆರ್ಸಿಬಿ 171 ರನ್ಗೆ ಆಟ ಮುಗಿಸಿತು. ಸ್ಟಾರ್ ಆಟಗಾರರು ಔಟ್ ಆಗುತ್ತಿದ್ದಂತೆ ಎಸ್ಆರ್ಎಚ್ನ ಸಿಇಒ ಕಾವ್ಯಾ ಮಾರನ್ ಮುಖ ಸಪ್ಪಾಗುತ್ತಿತ್ತು.
The face Smiled when the little Kohli “Akaay” was born .
After that we See now ♥️♥️#ViratKohli𓃵 pic.twitter.com/KwnhMj73Lz
— 𝙎𝙪𝙧𝙮𝙖 (@Itz_Surya18) April 25, 2024
View this post on Instagram
View this post on Instagram
ನಿತೀಶ್ ರೆಡ್ಡಿ ಅವರು ರಿವರ್ ಸ್ವೀಪ್ ಮಾಡಲು ಹೋಗಿ ಬೌಲ್ಡ್ ಆದರು. ಆಗ ಕಾವ್ಯಾ ಮಾರನ್ ಕೋಪ ಮಾಡಿಕೊಂಡರು. ಅತ್ತ, ವಿರಾಟ್ ಕೊಹ್ಲಿ ಅವರ ಮುಖದಲ್ಲಿ ಹಲವು ದಿನಗಳ ಬಳಿಕ ನಗು ಕಾಣಿಸಿದೆ. ಅವರು ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಹೈದರಾಬಾದ್ ತಂಡ ಸದ್ಯ ಈ ಸೀಸನ್ನಲ್ಲಿ ಮೂರನೇ ಸೋಲು ಅನುಭವಿಸಿದೆ. ಆರ್ಸಿಬಿ ಎರಡನೇ ಗೆಲುವು ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.