ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಿಂದ ಪಾಕ್ ಔಟ್! ಫೈನಲ್​ಗೇರಲು ಭಾರತ ಇನ್ನೇಷ್ಟು ಪಂದ್ಯಗಳನ್ನು ಗೆಲ್ಲಬೇಕು?

| Updated By: ಪೃಥ್ವಿಶಂಕರ

Updated on: Dec 12, 2022 | 8:31 PM

ICC World Test Championship: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23ರ ವೇಳಾಪಟ್ಟಿಯಡಿಯಲ್ಲಿ ಭಾರತ ಇನ್ನೂ 6 ಟೆಸ್ಟ್‌ಗಳನ್ನು ಆಡಬೇಕಾಗಿದೆ. ಈ 6 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕನಿಷ್ಠ ಪಕ್ಷ 5 ಟೆಸ್ಟ್ ಪಂದ್ಯಗಳನ್ನಾದರು ಗೆಲ್ಲಬೇಕಿದೆ.

ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಿಂದ ಪಾಕ್ ಔಟ್! ಫೈನಲ್​ಗೇರಲು ಭಾರತ ಇನ್ನೇಷ್ಟು ಪಂದ್ಯಗಳನ್ನು ಗೆಲ್ಲಬೇಕು?
team india
Follow us on

ಮೊದಲು ರಾವಲ್ಪಿಂಡಿಯಲ್ಲಿ ಸೋಲು, ನಂತರ ಮುಲ್ತಾನ್ ಟೆಸ್ಟ್​ನಲ್ಲೂ ಸೋಲು..ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಕಳೆದುಕೊಂಡಿರುವ ಪಾಕಿಸ್ತಾನ ((England defeated Pakistan)) ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ನಿಂದ ಹೊರಬಿದ್ದಿದೆ. ಹೌದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋತ ಬಳಿಕ ಇದೀಗ ಬಾಬರ್ ಅಜಮ್ (Babar Azam) ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ (World Test Championship) ಹೊರಗುಳಿದಿದೆ. ಇಂಗ್ಲೆಂಡ್ ಕೂಡ ಈ ರೇಸ್‌ನಿಂದ ಹೊರಗುಳಿದಿದ್ದು, ಪ್ರಶಸ್ತಿ ಸಮರಕ್ಕೆ ಕೇವಲ ನಾಲ್ಕು ತಂಡಗಳು ಮಾತ್ರ ಸ್ಪರ್ಧಿಗಳಾಗಿವೆ. ಈ ನಾಲ್ಕು ತಂಡಗಳಲ್ಲಿ ಟೀಂ ಇಂಡಿಯಾ ಕೂಡ ಒಂದಾಗಿದೆ. ಇದಲ್ಲದೇ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳಿಗೂ ಫೈನಲ್ ತಲುಪುವ ಅವಕಾಶ ಹೊಂದಿವೆ.

ಟೀಂ ಇಂಡಿಯಾದ ಬಗ್ಗೆ ಮಾತನಾಡುವುದಾದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡುವುದು ಭಾರತಕ್ಕೆ ಸುಲಭದ ದಾರಿಯಾಗಿಲ್ಲ. ಈ ನಾಲ್ಕು ತಂಡಗಳಲ್ಲಿ ಆಸ್ಟ್ರೇಲಿಯಾ ಮಾತ್ರ ಫೈನಲ್‌ಗೆ ತಲುಪುವುದು ಖಚಿತವಾಗಿದೆ. ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಭಾರತ ಎರಡನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಲು ಈ ತಂಡಗಳು ಏನು ಮಾಡಬೇಕು ಎಂಬುದರ ಪೂರ್ಣ ವಿವರ ಹೀಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಗ್ರ 4 ತಂಡಗಳು

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ರೇಸ್‌ನಲ್ಲಿ, ಆಸ್ಟ್ರೇಲಿಯಾ ಮೊದಲ, ದಕ್ಷಿಣ ಆಫ್ರಿಕಾ ಎರಡನೇ, ಶ್ರೀಲಂಕಾ ಮೂರನೇ ಮತ್ತು ಭಾರತ ನಾಲ್ಕನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮಾತ್ರ 60 PCT(%) ಕ್ಕಿಂತ ಹೆಚ್ಚು ಅಂಕಗಳನ್ನು ಹೊಂದಿವೆ. ಆದರೆ ಶ್ರೀಲಂಕಾ ಮತ್ತು ಭಾರತವು 60 PCT (%) ನಿಂದ ದೂರದಲ್ಲಿವೆ. ಆದರೆ ಭಾರತ ಮತ್ತು ಶ್ರೀಲಂಕಾ ಎರಡೂ ತಂಡಗಳಿಗೂ ಫೈನಲ್ ತಲುಪುವ ಅವಕಾಶವಿದೆ. ಆದರೆ ಇದಕ್ಕಾಗಿ ಉಭಯ ತಂಡಗಳು ಇನ್ನಿಲ್ಲದ ಕಸರತ್ತು ನಡೆಸಬೇಕಿದೆ.

ದಾಖಲೆಯ ದ್ವಿಶತಕ, ತಂಡದಲ್ಲಿ ಸಂಚಲನ; ದುರಂತ ಅಂತ್ಯದತ್ತ ಟೀಂ ಇಂಡಿಯಾ ಆರಂಭಿಕನ ವೃತ್ತಿ ಬದುಕು!

ಭಾರತ ಹೇಗೆ ಫೈನಲ್ ತಲುಪಬಹುದಾಗಿದೆ?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23ರ ವೇಳಾಪಟ್ಟಿಯಡಿಯಲ್ಲಿ ಭಾರತ ಇನ್ನೂ 6 ಟೆಸ್ಟ್‌ಗಳನ್ನು ಆಡಬೇಕಾಗಿದೆ. ಈ 6 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕನಿಷ್ಠ ಪಕ್ಷ 5 ಟೆಸ್ಟ್ ಪಂದ್ಯಗಳನ್ನಾದರು ಗೆಲ್ಲಬೇಕಿದೆ. ಇದಕ್ಕಾಗಿ ಭಾರತ, ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಿದೆ.

ಶ್ರೀಲಂಕಾಗೆ ಇನ್ನೂ 2 ಪಂದ್ಯಗಳು ಬಾಕಿ ಉಳಿದಿದ್ದು, ನ್ಯೂಜಿಲೆಂಡ್ ವಿರುದ್ಧ ಈ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಈ ಎರಡು ಟೆಸ್ಟ್ ಪಂದ್ಯಗಳಿಗಾಗಿ ನ್ಯೂಜಿಲೆಂಡ್ ಪ್ರವಾಸ ಮಾಡಲ್ಲಿರುವ ಶ್ರೀಲಂಕಾ ಅಲ್ಲಿ ಎರಡೂ ಟೆಸ್ಟ್‌ಗಳನ್ನು ಗೆಲ್ಲಬೇಕು. ಆಗ ಮಾತ್ರ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಲು ಸಾಧ್ಯವಾಗುತ್ತದೆ.

ಆಸ್ಟ್ರೇಲಿಯ ತಂಡಕ್ಕೆ ಇನ್ನು 7 ಟೆಸ್ಟ್ ಪಂದ್ಯಗಳು ಬಾಕಿ ಉಳಿದಿದ್ದು, ಫೈನಲ್ ತಲುಪಲು 2 ಗೆಲುವು ಮತ್ತು ಡ್ರಾ ಅಗತ್ಯವಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್ ಹಾಗೂ ಭಾರತ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ.

ಮತ್ತೊಂದೆಡೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಬೇಕೆಂದರೆ ದಕ್ಷಿಣ ಆಫ್ರಿಕಾ ಉಳಿದಿರುವ 5 ಟೆಸ್ಟ್‌ಗಳಲ್ಲಿ 3 ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಈ ಟೆಸ್ಟ್ ಸರಣಿಗಳನ್ನು ಆಡಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:27 pm, Mon, 12 December 22