
ಆಕಸ್ಮಿಕವಾಗಿ ಭಾರತ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದ ಶ್ರೇಯಸ್ ಅಯ್ಯರ್, ಇದೀಗ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ ಇಂಜುರಿಗೊಂಡ ಕಾರಣದಿಂದಾಗಿ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಶ್ರೇಯಸ್ ಮೊದಲ ಪಂದ್ಯದಲ್ಲೇ ಅರ್ಧಶತಕದ ಇನ್ನಿಂಗ್ಸ್ ಆಡಿ ಮಧ್ಯಮ ಕ್ರಮಾಂಕದಲ್ಲಿ ತಾನು ಎಂತಹ ಬ್ಯಾಟ್ಸ್‌ಮನ್ ಎಂಬುದನ್ನು ಮತ್ತೊಮ್ಮೆ ಸಾಭಿತುಪಡಿಸಿದ್ದರು. ಹೀಗಾಗಿ ಅಯ್ಯರ್ಗೆ ಉಳಿದೆರಡು ಪಂದ್ಯಗಳಲ್ಲೂ ಆಡುವ ಅವಕಾಶ ಲಭಿಸಿತು. ಈ ಎರಡೂ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಅಯ್ಯರ್ ಇದೀಗ ಮೂರನೇ ಏಕದಿನ ಪಂದ್ಯದಲ್ಲಿ 64 ಎಸೆತಗಳನ್ನು ಎದುರಿಸಿದ ಅಯ್ಯರ್ 2 ಸಿಕ್ಸರ್ ಮತ್ತು 8 ಬೌಂಡರಿಗಳ ಸಹಾಯದಿಂದ 78 ರನ್ ಕಲೆಹಾಕಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅರ್ಧಶತಕ ಗಳಿಸಿ, ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಸರಣಿಯಲ್ಲಿ 87.50 ಸರಾಸರಿಯಲ್ಲಿ 175 ರನ್ ಕಲೆಹಾಕಿರುವ ಅಯ್ಯರ್ ಅವರ ಸ್ಟ್ರೈಕ್ ರೇಟ್ 122 ಕ್ಕಿಂತ ಹೆಚ್ಚಾಗಿದೆ. ದೊಡ್ಡ ವಿಷಯವೆಂದರೆ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಈ ಸ್ಟ್ರೈಕ್ ರೇಟ್ ಅನ್ನು ಕಾಯ್ದುಕೊಂಡಿರುವುದು ನಿಜಕ್ಕೂ ಅದ್ಭುತವಾಗಿದೆ.
No one dominated number 4 batting position in history the way Shreyas Iyer did…… Man strike rate of 104 while maintaining high average of 53.4, I always felt that Shreyas could have played at no.4 in WC 2019 instead of mugs like Dinesh Karthik & Rishabh Pant!! pic.twitter.com/4ggzLtPeIS
— Rajiv (@Rajiv1841) February 12, 2025
2019 ರ ವಿಶ್ವಕಪ್ ನಂತರ ಭಾರತ ಪರ 4 ನೇ ಕ್ರಮಾಂಕದಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರನೆಂದರೆ ಅದು ಶ್ರೇಯಸ್ ಅಯ್ಯರ್. ಇಷ್ಟೇ ಅಲ್ಲ, 4 ನೇ ಕ್ರಮಾಂಕದಲ್ಲಿ ಉತ್ತಮ ಸರಾಸರಿ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಶೈ ಹೋಪ್ ನಂತರದ ಸ್ಥಾನ ಅಯ್ಯರ್ಗೆ ಲಭಿಸಿದೆ. 2019 ರ ವಿಶ್ವಕಪ್ ನಂತರ ಅಯ್ಯರ್ 4 ನೇ ಸ್ಥಾನದಲ್ಲಿ 103.3 ರ ಅತ್ಯಧಿಕ ಸ್ಟ್ರೈಕ್ ರೇಟ್ ಹಾಗೂ 53.4 ರ ಸರಾಸರಿ 1550 ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲೂ ಅಯ್ಯರ್ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ನೆರವಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Wed, 12 February 25