‘ಮಾನಸಿಕವಾಗಿ ನೊಂದಿದ್ದೆ, 1 ತಿಂಗಳಿಂದ ಬ್ಯಾಟ್ ಮುಟ್ಟಿರಲಿಲ್ಲ’; ಅಂತರಾಳದ ತುಮುಲಗಳನ್ನು ಹೊರಹಾಕಿದ ಕೊಹ್ಲಿ

Virat Kohli: ಕಳೆದ ಒಂದು ತಿಂಗಳಿಂದ ನಾನು ಬ್ಯಾಟ್ ಹಿಡಿದಿಲ್ಲ. 10 ವರ್ಷಗಳಲ್ಲಿ ಮೊದಲ ಬಾರಿಗೆ ನಾನು ಒಂದು ತಿಂಗಳ ಕಾಲ ಬ್ಯಾಟ್ ಹಿಡಿಯದೆ ಇರುವುದು ಇದೇ ಮೊದಲು.

‘ಮಾನಸಿಕವಾಗಿ ನೊಂದಿದ್ದೆ, 1 ತಿಂಗಳಿಂದ ಬ್ಯಾಟ್ ಮುಟ್ಟಿರಲಿಲ್ಲ’; ಅಂತರಾಳದ ತುಮುಲಗಳನ್ನು ಹೊರಹಾಕಿದ ಕೊಹ್ಲಿ
Virat Kohli
Updated By: ಪೃಥ್ವಿಶಂಕರ

Updated on: Aug 27, 2022 | 3:42 PM

ಕೆಲವು ವರ್ಷಗಳ ಹಿಂದಿನ ಮಾತಿದು, ಕೊಹ್ಲಿ (Virat Kohli) ಅಖಾಡದಲ್ಲಿದ್ದರೆ ಅದೇಷ್ಟೇ ಟಾರ್ಗೆಟ್ ಇರಲಿ ಅದನ್ನು ನೀರು ಕುಡಿದಂತೆ ಬೆನ್ನಟ್ಟುತ್ತಾರೆ ಎನ್ನಲಾಗುತ್ತಿತ್ತು. ಅಲ್ಲದೆ ಕೊಹ್ಲಿ ಬ್ಯಾಟಿಂಗ್ ಇಳಿದರೆ ಸಾಕಿತ್ತು, ಅವರ ಬ್ಯಾಟ್ ಆಗಸ ನೋಡದೆ ಪೆವಿಲಿಯನ್​ಗೆ ತೆರುಳುತ್ತಿದ್ದ ಕ್ಷಣಗಳು ತೀರ ಕಡಿಮೆ ಇರುತ್ತಿದ್ದವು. ಆದರೆ ಕಳೆದ 1 ಸಾವಿರ ದಿನಗಳಿಂದ ಇದೆಲ್ಲವೂ ಬದಲಾಗಿದೆ. ಕೊಹ್ಲಿ ಫಾರ್ಮ್​ ಕಳೆದುಕೊಂಡು ವರುಷಗಳೇ ಕಳೆದಿವೆ. ಹೀಗಾಗಿ ಏಷ್ಯಾಕಪ್​ನಲ್ಲಿ ಮಿಂಚಿ ಎಲ್ಲರ ಬಾಯಿ ಮುಚ್ಚಿಸಲು ಕೊಹ್ಲಿ ತಯಾರಿ ನಡೆಸಿದ್ದಾರೆ. ಏಷ್ಯಾಕಪ್-2022ರಲ್ಲಿ (Asia Cup 2022) ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಬೇಕಾಗಿದೆ. ಈ ಪಂದ್ಯದಿಂದ ಕೊಹ್ಲಿ ಟೀಂ ಇಂಡಿಯಾಗೆ ವಾಪಸಾಗಲಿದ್ದು, ಅವರು ತಮ್ಮ ಫಾರ್ಮ್‌ಗೆ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕೂ ಮುನ್ನ ಕೊಹ್ಲಿ ತಮ್ಮ ವೃತ್ತಿ ಜೀವನದ ಬಗ್ಗೆ ಅಂತರಾಳದ ತುಮುಲಗಳನ್ನು ಹೊರಹಾಕಿದ್ದಾರೆ.

2019 ರಿಂದ ವಿರಾಟ್ ಕೊಹ್ಲಿ ಅವರ ಬ್ಯಾಟ್ ಶತಕ ದಾಖಲಿಸಿಲ್ಲ.ಇತ್ತೀಚಿನ ದಿನಗಳಲ್ಲಿ ಅವರ ಬ್ಯಾಟ್ ಅರ್ಧಶತಕ ತಲುಪುವುದು ಕಷ್ಟವಾಗುತ್ತಿದೆ. ಉತ್ತಮ ಆರಂಭ ಪಡೆದ ನಂತರವೂ ಅದನ್ನು ದೊಡ್ಡ ಇನ್ನಿಂಗ್ಸ್‌ಗಳನ್ನಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೊಹ್ಲಿ ಏಷ್ಯಾಕಪ್‌ನಿಂದ ಮತ್ತೆ ತಮ್ಮ ಹಳೆಯ ಫಾರ್ಮ್​ಗೆ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ
Asia Cup 2022: ಭಾರತದ ದಿಗ್ಗಜ ಆಟಗಾರರಿಗೆ ಏಷ್ಯಾಕಪ್ ತುಂಬಾ ವಿಶೇಷ ಏಕೆ ಗೊತ್ತಾ? ಈ ಸ್ಟೋರಿ ಓದಿ
Asia Cup 2022: ಪಾಕ್ ವಿರುದ್ಧದ ಪಂದ್ಯದಿಂದ ಟೀಂ ಇಂಡಿಯಾದ ಈ 4 ಆಟಗಾರರಿಗೆ ಕೋಕ್..!
Asia Cup 2022: ಏಷ್ಯಾಕಪ್​ಗಾಗಿ ಹೊಸ ಜೆರ್ಸಿ ಅನಾವರಣಗೊಳಿಸಿದ ಭಾರತ- ಪಾಕಿಸ್ತಾನ

ಒಂದು ತಿಂಗಳಿಂದ ಬ್ಯಾಟ್ ಮುಟ್ಟಲಿಲ್ಲ

ಈ ಪಂದ್ಯಕ್ಕೂ ಮುನ್ನ, ಏಷ್ಯಾಕಪ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಕೊಹ್ಲಿ, ಕಳೆದ ಒಂದು ತಿಂಗಳಿಂದ ನಾನು ಬ್ಯಾಟ್ ಹಿಡಿದಿಲ್ಲ. 10 ವರ್ಷಗಳಲ್ಲಿ ಮೊದಲ ಬಾರಿಗೆ ನಾನು ಒಂದು ತಿಂಗಳ ಕಾಲ ಬ್ಯಾಟ್ ಹಿಡಿಯದೆ ಇರುವುದು ಇದೇ ಮೊದಲು. ನಾನು ಕೆಲವು ಸಮಯದಿಂದ ನನ್ನ ಆಕ್ರಮಣ ಶೀಲ ಮನೋಭಾವವನ್ನು ಸ್ವಲ್ಪ ನಕಲು ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದು ನಾನು ಅರಿತುಕೊಂಡೆ. ಹಾಗಾಗಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವಂತೆ ನನ್ನ ಮನಸ್ಸು ಹೇಳುತ್ತಿತ್ತು.

ಎಲ್ಲದಕ್ಕೂ ಒಂದು ಮಿತಿಯಿದೆ

ಮಾನಸಿಕವಾಗಿ ಅತ್ಯಂತ ಬಲಿಷ್ಠವಾಗಿರುವ ಆಟಗಾರನನ್ನಾಗಿ ನನ್ನನ್ನು ನಾನು ನೋಡುತ್ತೇನೆ. ಆದರೆ, ಪ್ರತಿಯೊಂದಕ್ಕೂ ಮಿತಿ ಇದೆ ಮತ್ತು ನೀವು ಆ ಮಿತಿಯನ್ನು ಗುರುತಿಸಬೇಕು. ಇಲ್ಲದಿದ್ದರೆ ಕೆಲವು ವಿಷಯಗಳು ನಿಮಗೆ ಅನಾರೋಗ್ಯಕರವಾಗಬಹುದು. ಈ ಸಮಯ ನನಗೆ ಬಹಳಷ್ಟು ಕಲಿಸಿದೆ. ಈ ಕಠಿಣ ಸಮಯದಿಂದ ನಾನು ಹೊರಬರದಂತೆ ನನ್ನನು ತಡೆದಿದ್ದ ಕೆಲವು ಸಂಗತಿಗಳ ಬಗ್ಗೆ ನಾನು ಅರಿತುಕೊಂಡಿದ್ದೇನೆ. ಅಲ್ಲದೆ ಅವುಗಳಿಂದ ಸಾಕಷ್ಟು ಕಲಿತಿದ್ದೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಮಾನಸಿಕವಾಗಿ ನೊಂದಿದ್ದೆ

ಇವೆಲ್ಲವುಗಳ ಜೊತೆಗೆ ತಾನು ಮಾನಸಿಕವಾಗಿ ನೊಂದಿದ್ದೇನೆ ಎಂದು ಕೊಹ್ಲಿ ಒಪ್ಪಿಕೊಂಡಿದ್ದಾರೆ. ನಾನು ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದೇನೆ ಎಂದು ಒಪ್ಪಿಕೊಳ್ಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಇದು ತುಂಬಾ ಸಾಮಾನ್ಯ ವಿಷಯ, ಆದರೆ ನಾವು ಹಿಂಜರಿಯುವ ಕಾರಣ ನಾವು ಅದರ ಬಗ್ಗೆ ಸಾಮಾನ್ಯವಾಗಿ ಮಾತನಾಡುವುದಿಲ್ಲ. ನಾವು ಮಾನಸಿಕವಾಗಿ ದುರ್ಬಲರೆಂದು ಪರಿಗಣಿಸಲು ಬಯಸುವುದಿಲ್ಲ. ಹಾಗಾಗಿ ಒಮ್ಮೊಮ್ಮೆ ನಾವು ಮಾನಸಿಕವಾಗಿ ಬಲಿಷ್ಠವಾಗಿದ್ದೇವೆಂದು ನಕಲು ಮಾಡುವುದು, ಕುಗ್ಗಿದ್ದೇವೆಂದು ಒಪ್ಪಿಕೊಳ್ಳುವುದಕ್ಕಿಂತ ಕೆಟ್ಟದ್ದು ಎಂದು ಕಿಂಗ್ ಕೊಹ್ಲಿ ಹೇಳಿಕೊಂಡಿದ್ದಾರೆ.

Published On - 3:42 pm, Sat, 27 August 22