ICC ODI Team: ಐಸಿಸಿ ಏಕದಿನ ತಂಡದಲ್ಲಿ 6 ಭಾರತೀಯರು..!

ICC ODI Team of the year 2023: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2023 ರಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡಿರುವ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಅರ್ಧಕ್ಕಿಂತ ಹೆಚ್ಚು ಭಾರತೀಯ ಆಟಗಾರರೇ ಕಾಣಿಸಿಕೊಂಡಿರುವುದು ವಿಶೇಷ.

ICC ODI Team: ಐಸಿಸಿ ಏಕದಿನ ತಂಡದಲ್ಲಿ 6 ಭಾರತೀಯರು..!
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jan 23, 2024 | 1:21 PM

ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) 2023ರ ಸಾಲಿನ ಏಕದಿನ ತಂಡವನ್ನು ಪ್ರಕಟಿಸಿದೆ. 11 ಸದಸ್ಯರ ಈ ತಂಡದಲ್ಲಿ 6 ಭಾರತೀಯ ಆಟಗಾರರು ಸ್ಥಾನ ಪಡೆದಿರುವುದು ವಿಶೇಷ. ಅಂದರೆ ಕಳೆದ ವರ್ಷ ಏಕದಿನ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರಲ್ಲಿ ಟೀಮ್ ಇಂಡಿಯಾ ಆಟಗಾರರು ಮುಂಚೂಣಿಯಲ್ಲಿದ್ದಾರೆ. ಹಾಗೆಯೇ ಈ ತಂಡದ ನಾಯಕನಾಗಿ ಟೀಮ್ ಇಂಡಿಯಾ (Team India) ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಆಯ್ಕೆಯಾಗಿದ್ದಾರೆ.

ಕಳೆದ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡಿರುವ ಈ ತಂಡದಲ್ಲಿ ಏಕದಿನ ವಿಶ್ವಕಪ್​ ಚಾಂಪಿಯನ್​ ಆಸ್ಟ್ರೇಲಿಯಾದಿಂದ ಆಯ್ಕೆಯಾಗಿರುವುದು ಕೇವಲ ಇಬ್ಬರು ಆಟಗಾರರು ಮಾತ್ರ. ಇನ್ನು  ಸೌತ್ ಆಫ್ರಿಕಾ ತಂಡದಿಂದ ಇಬ್ಬರು ಹಾಗೂ ನ್ಯೂಝಿಲೆಂಡ್​ನ ಏಕೈಕ ಆಟಗಾರ ಕಾಣಿಸಿಕೊಂಡಿದ್ದಾರೆ.

ಐಸಿಸಿ ಏಕದಿನ ತಂಡದಲ್ಲಿರುವ ಭಾರತೀಯರು:

1- ರೋಹಿತ್ ಶರ್ಮಾ: 2023 ರಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ರೊಹಿತ್ ಶರ್ಮಾ ಒಟ್ಟು 1255 ರನ್ ಕಲೆಹಾಕಿದ್ದರು. ಅತ್ತ ಏಕದಿನ ವಿಶ್ವಕಪ್​ನಲ್ಲಿ ನಾಯಕತ್ವದಿಂದಲೂ ಗಮನ ಸೆಳೆದಿದ್ದರು. ಹೀಗಾಗಿ 2023ರ ಸಾಲಿನ ಐಸಿಸಿ ಏಕದಿನ ತಂಡದ ಕ್ಯಾಪ್ಟನ್ ಆಗಿ ಹಿಟ್​ಮ್ಯಾನ್ ಆಯ್ಕೆಯಾಗಿದ್ದಾರೆ.

2- ಶುಭ್​ಮನ್ ಗಿಲ್: ಕಳೆದ ವರ್ಷ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ್ದು ಶುಭ್​ಮನ್ ಗಿಲ್. ಒಟ್ಟು 1584 ರನ್​ ಬಾರಿಸಿದ್ದ ಗಿಲ್ ಅವರನ್ನು ಆರಂಭಿಕನ ಸ್ಥಾನದಲ್ಲಿ ಆಯ್ಕೆ ಮಾಡಲಾಗಿದೆ.

3- ವಿರಾಟ್ ಕೊಹ್ಲಿ: 2023ರಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ 1377 ರನ್ ಬಾರಿಸಿ ಹಲವು ದಾಖಲೆ ನಿರ್ಮಿಸಿದ್ದರು. ಅದರಂತೆ ಕಳೆದ ಸಾಲಿನ ಏಕದಿನ ತಂಡದಲ್ಲಿ ಕಿಂಗ್ ಕೊಹ್ಲಿ 4ನೇ ಕ್ರಮಾಂಕದ ಬ್ಯಾಟರ್ ಆಗಿ ಆಯ್ಕೆಯಾಗಿದ್ದಾರೆ.

4- ಮೊಹಮ್ಮದ್ ಸಿರಾಜ್: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಕಳೆದ ವರ್ಷ ಏಕದಿನ ಕ್ರಿಕೆಟ್​ನಲ್ಲಿ ಒಟ್ಟು 44 ವಿಕೆಟ್ ಕಬಳಿಸಿ ಮಿಂಚಿದ್ದರು. ಅದರ ಫಲವಾಗಿ ಇದೀಗ ಐಸಿಸಿ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.

5- ಕುಲ್ದೀಪ್ ಯಾದವ್: ಭಾರತ ತಂಡದ ಹಿರಿಯ ಸ್ಪಿನ್ನರ್ ಕುಲ್ದೀಪ್ ಯಾದವ್ 2023 ರಲ್ಲಿ 49 ವಿಕೆಟ್ ಕಬಳಿಸಿ ಸ್ಪಿನ್ ಮೋಡಿ ಮಾಡಿದ್ದರು. ಅದರಂತೆ ಇದೀಗ ಐಸಿಸಿ 2023ರ ಏಕದಿನ ತಂಡದಲ್ಲಿ ಸ್ಪಿನ್ನರ್ ಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ.

6- ಮೊಹಮ್ಮದ್ ಶಮಿ: ಟೀಮ್ ಇಂಡಿಯಾದ ಸೆನ್ಸೇಷನ್ ವೇಗಿ ಮೊಹಮ್ಮದ್ ಶಮಿ ಕಳೆದ ವರ್ಷ ಒಟ್ಟು 43 ವಿಕೆಟ್ ಕಬಳಿಸಿದ್ದರು. ಅದರಲ್ಲೂ ಏಕದಿನ ವಿಶ್ವಕಪ್​ನಲ್ಲಿ 24 ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾ ಫೈನಲ್​ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಐಸಿಸಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: Josh Brown: ಜೋಶ್ ಅಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಧೂಳೀಪಟ

ಐಸಿಸಿ 2023ರ ಏಕದಿನ ತಂಡ ಹೀಗಿದೆ:

  • 1- ರೋಹಿತ್ ಶರ್ಮಾ (ನಾಯಕ/ಭಾರತ)
  • 2- ಶುಭ್​ಮನ್ ಗಿಲ್ (ಭಾರತ)
  • 3- ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)
  • 4- ವಿರಾಟ್ ಕೊಹ್ಲಿ (ಭಾರತ)
  • 5- ಡೇರಿಲ್ ಮಿಚೆಲ್ (ನ್ಯೂಝಿಲೆಂಡ್)
  • 6- ಹೆನ್ರಿಕ್ ಕ್ಲಾಸೆನ್ (ಸೌತ್ ಆಫ್ರಿಕಾ)
  • 7- ಮಾರ್ಕೊ ಯಾನ್ಸೆನ್ (ಸೌತ್ ಆಫ್ರಿಕಾ)
  • 8- ಆ್ಯಡಂ ಝಂಪಾ (ಆಸ್ಟ್ರೇಲಿಯಾ)
  • 9- ಮೊಹಮ್ಮದ್ ಸಿರಾಜ್ (ಭಾರತ)
  • 10- ಕುಲ್ದೀಪ್ ಯಾದವ್ (ಭಾರತ)
  • 11- ಮೊಹಮ್ಮದ್ ಶಮಿ (ಭಾರತ)

Published On - 1:17 pm, Tue, 23 January 24