ಭಾರತ vs ಪಾಕಿಸ್ತಾನ್ ಪಂದ್ಯ ನಡೆಸಬಾರದು: ಪಾಕ್ ಮಾಜಿ ಆಟಗಾರನ ಆಗ್ರಹ
ಭಾರತ ಮತ್ತು ಪಾಕಿಸ್ತಾನ್ ಕೊನೆಯ ಬಾರಿಗೆ 2012 ರಲ್ಲಿ ದ್ವಿಪಕ್ಷೀಯ ಸರಣಿ ಆಡಿತ್ತು. ಭಾರತದಲ್ಲಿ ನಡೆದ ಈ ಸರಣಿಯಲ್ಲಿ ಉಭಯ ತಂಡಗಳು 2 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡಿತ್ತು. ಈ ವೇಳೆ ಟಿ20 ಸರಣಿಯು 1-1 ಅಂತರದಿಂದ ಸಮಬಲಗೊಂಡರೆ, ಏಕದಿನ ಸರಣಿಯನ್ನು ಪಾಕಿಸ್ತಾನ್ ತಂಡ 2-1 ಅಂತರದಿಂದ ಗೆದ್ದುಕೊಂಡಿತ್ತು.
ಭಾರತ ಮತ್ತು ಪಾಕಿಸ್ತಾನ್ ನಡುವೆ ದ್ವಿಪಕ್ಷೀಯ ಸರಣಿ ನಡೆದು 12 ವರ್ಷಗಳೇ ಕಳೆದಿವೆ. ಈ ಹನ್ನೆರಡು ವರ್ಷಗಳಲ್ಲಿ ಉಭಯ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿದೆ. ಆದರೆ ಈ ಮುಖಾಮುಖಿಗೂ ಬೇಕ್ ಹಾಕಬೇಕೆಂದು ಆಗ್ರಹಿಸಿದ್ದಾರೆ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್.
ಕಮ್ರಾನ್ ಅಕ್ಮಲ್ ಪ್ರಕಾರ, ಭಾರತ ಮತ್ತು ಪಾಕಿಸ್ತಾನ್ ದ್ವಿಪಕ್ಷೀಯ ಸರಣಿ ಆಡದ ಹೊರತು ಯಾವುದೇ ಟೂರ್ನಿಯಲ್ಲೂ ಮುಖಾಮುಖಿಯಾಗಬಾರದು. ಸರಣಿ ಆಡಲು ಸಾಧ್ಯವಾಗದಿದ್ದರೆ, ಪ್ರಮುಖ ಟೂರ್ನಿಯಲ್ಲೇಕೆ ಉಭಯ ತಂಡಗಳು ಮುಖಾಮುಖಿಯಾಗಬೇಕೆಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಐಸಿಸಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಭಾರತವು ಕ್ರೀಡೆಯೊಂದಿಗೆ ರಾಜಕೀಯ ಮಾಡುತ್ತಿದೆ. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಹೈಬ್ರಿಡ್ ಮಾದರಿಯ ಬೇಡಿಕೆಯಿಟ್ಟಿದೆ. ಅಲ್ಲದೆ ಪಾಕಿಸ್ತಾನಕ್ಕೆ ಬರಲು ನಿರಾಕರಿಸಿದೆ.
ಇಲ್ಲಿ ಪಾಕಿಸ್ತಾನ್ ತಂಡದ ಜೊತೆ ದ್ವಿಪಕ್ಷೀಯ ಸರಣಿಯ ಅವಶ್ಯಕತೆಯಿಲ್ಲದಿದ್ದರೂ, ಭಾರತ ಐಸಿಸಿ ಟೂರ್ನಿಯಲ್ಲಿ ಪಾಕಿಸ್ತಾನ್ ತಂಡವನ್ನು ಎದುರಿಸುತ್ತಿದೆ. ಇದಕ್ಕಾಗಿ ಐಸಿಸಿ ಪ್ರತಿ ಟೂರ್ನಿಯಲ್ಲೂ ಭಾರತ-ಪಾಕಿಸ್ತಾನ್ ಪಂದ್ಯವನ್ನು ಏರ್ಪಡಿಸುತ್ತಿದೆ.
ಆದರೆ ದ್ವಿಪಕ್ಷೀಯ ಸರಣಿ ಆಡಲು ಸಮಸ್ಯೆಯಿರುವ ಭಾರತಕ್ಕೆ ಐಸಿಸಿ ಟೂರ್ನಿಯಲ್ಲಿ ಪಾಕ್ ವಿರುದ್ಧ ಆಡಲು ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ದ್ವಿಪಕ್ಷೀಯ ಸರಣಿಯನ್ನು ಪುನರಾಂಭಿಸದ ಹೊರತಾಗಿ ಪಾಕಿಸ್ತಾನ್ ತಂಡವು ಭಾರತದ ವಿರುದ್ಧ ಯಾವುದೇ ಪಂದ್ಯವಾಡಬಾರದು ಎಂದು ಕಮ್ರಾನ್ ಅಕ್ಮಲ್ ಆಗ್ರಹಿಸಿದ್ದಾರೆ.
ಸದ್ಯ ಚಾಂಪಿಯನ್ಸ್ ಟ್ರೋಫಿ ಚರ್ಚೆ ನಡೆಯುತ್ತಿದ್ದು, ಇದೇ ವೇಳೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ದ್ವಿಪಕ್ಷೀಯ ಸರಣಿಗಾಗಿ ಐಸಿಸಿ ಮುಂದೆ ಬೇಡಿಕೆಯಿಡಬೇಕು. ಇಲ್ಲದಿದ್ದರೆ ಐಸಿಸಿ ಟೂರ್ನಿಯಲ್ಲೂ ಆಡುವುದನ್ನು ನಿಲ್ಲಿಸಬೇಕೆಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ್ ಕೊನೆಯ ಬಾರಿಗೆ 2012 ರಲ್ಲಿ ದ್ವಿಪಕ್ಷೀಯ ಸರಣಿ ಆಡಿತ್ತು. ಭಾರತದಲ್ಲಿ ನಡೆದ ಈ ಸರಣಿಯಲ್ಲಿ ಉಭಯ ತಂಡಗಳು 2 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡಿತ್ತು. ಈ ವೇಳೆ ಟಿ20 ಸರಣಿಯು 1-1 ಅಂತರದಿಂದ ಸಮಬಲಗೊಂಡರೆ, ಏಕದಿನ ಸರಣಿಯನ್ನು ಪಾಕಿಸ್ತಾನ್ ತಂಡ 2-1 ಅಂತರದಿಂದ ಗೆದ್ದುಕೊಂಡಿತ್ತು. ಇದಾದ ಬಳಿಕ ಉಭಯ ತಂಡಗಳು ಯಾವುದೇ ಸರಣಿ ಆಡಿಲ್ಲ.
ಇದನ್ನೂ ಓದಿ: 15.5 ಓವರ್ಗಳಲ್ಲಿ ಕೇವಲ 5 ರನ್: ದಾಖಲೆ ಪುಟಕ್ಕೆ ಜೇಡನ್ ಸೀಲ್ಸ್ ಎಂಟ್ರಿ
ಇನ್ನು ಉಭಯ ತಂಡಗಳು ಕೊನೆಯ ಬಾರಿಗೆ ಟೆಸ್ಟ್ ಸರಣಿ ಆಡಿದ್ದು 2006 ರಲ್ಲಿ. 3 ಪಂದ್ಯಗಳ ಈ ಸರಣಿಯಲ್ಲಿ ಮೊದಲೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡರೆ, ಮೂರನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಪಾಕಿಸ್ತಾನ್ ತಂಡ 1-0 ಅಂತರದಿಂದ ಟೆಸ್ಟ್ ಸರಣಿ ಗೆದ್ದುಕೊಂಡಿತ್ತು.