ICC Rankings: ಟೆಸ್ಟ್ ಶ್ರೇಯಾಂಕದಲ್ಲಿ 7ನೇ ಸ್ಥಾನಕ್ಕೆ ಕುಸಿದ ಕೊಹ್ಲಿ! ರೋಹಿತ್ ಸ್ಥಿರ, 2ನೇ ಸ್ಥಾನದಲ್ಲಿ ಅಶ್ವಿನ್
ICC Rankings: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಒಂದು ಸ್ಥಾನ ಕಳೆದುಕೊಂಡು ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಒಂದು ಸ್ಥಾನ ಕಳೆದುಕೊಂಡು ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಆಡಿದ ಕೊಹ್ಲಿ ಮೊದಲು ಆರನೇ ಸ್ಥಾನದಲ್ಲಿದ್ದರು ಆದರೆ ಈಗ 756 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಅದೇ ವೇಳೆ ಭಾರತದ ರೋಹಿತ್ ಶರ್ಮಾ ಐದನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಶಸ್ ಸರಣಿಯಲ್ಲಿನ ಅಮೋಘ ಫಾರ್ಮ್‌ನಿಂದ ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಸ್‌ಚಾಗ್ನೆ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಆಶಸ್ ಸರಣಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿನ ಪ್ರಭಾವಿ ಪ್ರದರ್ಶನದ ಹಿನ್ನೆಲೆಯಲ್ಲಿ ಲ್ಯಾಬುಸ್‌ಚಾಗ್ನೆ ಮೊದಲ ಬಾರಿಗೆ ಐಸಿಸಿ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಅವರು ವೃತ್ತಿಜೀವನದ ಅತ್ಯುತ್ತಮ 912 ರೇಟಿಂಗ್ ಪಾಯಿಂಟ್‌ಗಳೊಂದಿಗೆ ರೂಟ್ (897 ಪಾಯಿಂಟ್‌ಗಳು) ಅವರನ್ನು ಎರಡನೇ ಸ್ಥಾನಕ್ಕೆ ಇಳಿಸಿದ್ದಾರೆ.
ಮಾರ್ನಸ್ ಲ್ಯಾಬುಸ್ಚಾಗ್ನೆ ಸರಣಿಯ ಮೊದಲು ನಾಲ್ಕನೇ ಸ್ಥಾನದಲ್ಲಿದ್ದರು ಆದರೆ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಆಶಸ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಗೆಲುವಿನಲ್ಲಿ 74 ರನ್ ಗಳಿಸಿದ ನಂತರ ಮಾರ್ನಸ್ ಲ್ಯಾಬುಸ್ಚಾಗ್ನೆ ಎರಡು ಸ್ಥಾನಗಳನ್ನು ಮೇಲಕ್ಕೆರಿದರು. ನಂತರ ಅಡಿಲೇಡ್‌ನಲ್ಲಿ ಅವರು ಶತಕ ಮತ್ತು ಅರ್ಧಶತಕ (103 ಮತ್ತು 51) ಗಳಿಸಿದರು. ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ 275 ರನ್ ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ 2-0 ಮುನ್ನಡೆ ಸಾಧಿಸಿದೆ. ಲ್ಯಾಬುಸ್ಚಾಗ್ನೆ ಮತ್ತು ಕೊಹ್ಲಿ ಹೊರತುಪಡಿಸಿ, ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಟಾಪ್-10 ರ್ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಅಶ್ವಿನ್ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ ಬೌಲರ್‌ಗಳ ಪೈಕಿ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ಕಮ್ಮಿನ್ಸ್ ಅವರ ಸಹ ಆಟಗಾರ ಮಿಚೆಲ್ ಸ್ಟಾರ್ಕ್ ಅವರು ಎರಡನೇ ಟೆಸ್ಟ್‌ನಲ್ಲಿ 6/80 (ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗಳು) ಪ್ರದರ್ಶನದೊಂದಿಗೆ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದ ಅಗ್ರ 10 ರೊಳಗೆ ಪ್ರವೇಶಿಸಲು ಯಶಸ್ವಿಯಾದರು. ಅಡಿಲೇಡ್‌ನಲ್ಲಿ ಆಡದ ಜೋಶ್ ಹ್ಯಾಜಲ್‌ವುಡ್ ಒಂದು ಸ್ಥಾನ ಕಳೆದುಕೊಂಡಿದ್ದಾರೆ. ಈಗ ಐದನೇ ಸ್ಥಾನಕ್ಕೆ ಬಂದಿದ್ದಾರೆ. ನಾಲ್ಕನೇ ಕ್ರಮಾಂಕಕ್ಕೆ ಟಿಮ್ ಸೌಥಿ ಬಂದಿದ್ದಾರೆ.
ಮಿಚೆಲ್ ಸ್ಟಾರ್ಕ್ ಕೂಡ ಅಡಿಲೇಡ್ ಟೆಸ್ಟ್‌ನಲ್ಲಿ ಬ್ಯಾಟ್‌ನೊಂದಿಗೆ ಕೊಡುಗೆ ನೀಡಿದರು. ಅವರು 39 ಮತ್ತು ಔಟಾಗದೆ 19 ರನ್ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಇದರೊಂದಿಗೆ ಟೆಸ್ಟ್ ಆಲ್ ರೌಂಡರ್ ರ ್ಯಾಂಕಿಂಗ್ನಲ್ಲಿ ಆರನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್ ಬ್ಯಾಟ್ಸ್‌ಮನ್‌ಗಳಲ್ಲಿ ಎರಡನೇ ಸ್ಥಾನ ಪಡೆದಿರಬಹುದು, ಆದರೆ ಅವರು ಬೌಲಿಂಗ್‌ನಿಂದ ಉತ್ತಮ ಪ್ರದರ್ಶನದ ಲಾಭವನ್ನೂ ಪಡೆದಿದ್ದಾರೆ. ಅಡಿಲೇಡ್ ನಲ್ಲಿ 86 ರನ್ ಗಳಿಸಿ ಮೂರು ವಿಕೆಟ್ ಪಡೆದರು. ಇದರಿಂದಾಗಿ ಎರಡು ಸ್ಥಾನ ಮೇಲೇರಿ 10ನೇ ಸ್ಥಾನಕ್ಕೆ ಬಂದಿದ್ದಾರೆ.