NZ W vs IND W: 152 ಡಾಟ್ ಬಾಲ್, ಕಳಪೆ ಆರಂಭ! ಕಿವೀಸ್ ವಿರುದ್ಧ ಭಾರತದ ಸೋಲಿಗೆ ಕಾರಣಗಳಿವು
NZ W vs IND W: ಭಾರತದ ಸೋಲಿಗೆ ದೊಡ್ಡ ಕಾರಣ ಡಾಟ್ ಬಾಲ್. 260 ರನ್‌ಗಳಿಗೆ ಉತ್ತರವಾಗಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಭಾರತ 46.4 ಓವರ್‌ಗಳಲ್ಲಿ 152 ಡಾಟ್ ಬಾಲ್‌ಗಳನ್ನು ಆಡಿತು.
ಮಹಿಳಾ ವಿಶ್ವಕಪ್ (Women’s World Cup 2022)ನಲ್ಲಿ ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ (NZ W vs IND W) ಸೋಲು ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 260 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ 198 ರನ್‌ಗಳಿಸಲಷ್ಟೇ ಶಕ್ತರಾಗಿ 62 ರನ್‌ಗಳ ಅಂತರದಿಂದ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು. ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ಮೊದಲ ಸೋಲು, ನ್ಯೂಜಿಲೆಂಡ್‌ಗೆ ಟೂರ್ನಿಯಲ್ಲಿ ಇದು ಮೊದಲ ಗೆಲುವು. ಆತಿಥೇಯ ನ್ಯೂಜಿಲೆಂಡ್ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತಿತ್ತು. ಆದಾಗ್ಯೂ, ಹ್ಯಾಮಿಲ್ಟನ್‌ನಲ್ಲಿ ನ್ಯೂಜಿಲೆಂಡ್ ಪ್ರಬಲವಾದ ಪುನರಾಗಮನವನ್ನು ಮಾಡಿತು. ನ್ಯೂಜಿಲೆಂಡ್ ಪರ ಅಮೆಲಿಯಾ ಕರ್ ಮತ್ತು ಸಾಥರ್‌ವೈಟ್ ಅರ್ಧಶತಕ ಗಳಿಸಿದರು. ವಿಕೆಟ್ ಕೀಪರ್ ಕೇಟಿ ಮಾರ್ಟಿನ್ 41 ರನ್ ಗಳ ಇನಿಂಗ್ಸ್ ಆಡಿದರು.
ಭಾರತದ ಪರ ಹರ್ಮನ್‌ಪ್ರೀತ್ ಕೌರ್ 63 ಎಸೆತಗಳಲ್ಲಿ 71 ರನ್ ಗಳಿಸಿದರು. ಇವರನ್ನು ಬಿಟ್ಟರೆ ಬೇರಾವ ಬ್ಯಾಟರ್ ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಯಾಸ್ತಿಕಾ ಭಾಟಿಯಾ 28 ರನ್ ಗಳಿಸಿದರು. ನಾಯಕಿ ಮಿಥಾಲಿ ರಾಜ್ 31 ರನ್ ಗಳಿಸಿ ಔಟಾದರು. ಸ್ಮೃತಿ ಮಂಧಾನ 6 ಮತ್ತು ದೀಪ್ತಿ ಶರ್ಮಾ 5 ರನ್ ಗಳಿಸಿ ಔಟಾದರು. ಇದರಿಂದಾಗಿ ಟೀಂ ಇಂಡಿಯಾ ಸೋಲನುಭವಿಸಬೇಕಾಯಿತು. ಟೀಂ ಇಂಡಿಯಾ ಸೋಲಿಗೆ 4 ದೊಡ್ಡ ಕಾರಣಗಳೆಂದರೆ.
152 ಡಾಟ್ ಬಾಲ್‌ಗಳನ್ನು ಆಡಿದ ಭಾರತ ಭಾರತದ ಸೋಲಿಗೆ ದೊಡ್ಡ ಕಾರಣ ಡಾಟ್ ಬಾಲ್. 260 ರನ್‌ಗಳಿಗೆ ಉತ್ತರವಾಗಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಭಾರತ 46.4 ಓವರ್‌ಗಳಲ್ಲಿ 152 ಡಾಟ್ ಬಾಲ್‌ಗಳನ್ನು ಆಡಿತು. ಲೀ ತಾಹುಹು ಅವರ 45 ಎಸೆತಗಳಲ್ಲಿ ಭಾರತ ಯಾವುದೇ ರನ್ ಗಳಿಸಲಿಲ್ಲ.
ಅಗ್ರ ಕ್ರಮಾಂಕ ವಿಫಲ ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡದ ವಿರುದ್ಧ 261 ರನ್‌ಗಳ ಗುರಿ ಸಾಧಿಸಲು ಉತ್ತಮ ಆರಂಭದ ಅಗತ್ಯವಿದೆ ಆದರೆ ಅದು ಆಗಲಿಲ್ಲ. 21 ಎಸೆತಗಳನ್ನು ಎದುರಿಸಿದ ಸ್ಮೃತಿ ಮಂಧಾನ ಕೇವಲ 6 ರನ್‌ಗಳಿಗೆ ಔಟಾದರು. ದೀಪ್ತಿ ಶರ್ಮಾ 13 ಎಸೆತಗಳಲ್ಲಿ 5 ರನ್ ಗಳಿಸಿ ಔಟಾದರು. ಯಾಸ್ತಿಕಾ ಭಾಟಿಯಾ 59 ಎಸೆತಗಳಲ್ಲಿ 28 ರನ್ ಗಳಿಸಿದರು.
ಅರ್ಧಶತಕದ ಜೊತೆಯಾಟವಿಲ್ಲ ಗುರಿ ಸಾಧಿಸಲು ಸಹಭಾಗಿತ್ವದ ಅಗತ್ಯವಿತ್ತು, ಆದರೆ ಇದು ಸಂಭವಿಸಿಲ್ಲ. ಭಾರತದಿಂದ ಒಂದೇ ಒಂದು ಅರ್ಧಶತಕದ ಜೊತೆಯಾಟ ಇರಲಿಲ್ಲ. ಮಿಥಾಲಿ ರಾಜ್ ಮತ್ತು ಹರ್ಮನ್‌ಪ್ರೀತ್ ಕೌರ್ ಗರಿಷ್ಠ 47 ರನ್ ಸೇರಿಸಿದರು. ಆದರೆ ನ್ಯೂಜಿಲೆಂಡ್‌ನಿಂದ 2 ಅರ್ಧಶತಕದ ಜೊತೆಯಾಟ ಆಡಿ ಬೃಹತ್ ರನ್ ಕಲೆಹಾಕಿತ್ತು.
ಕಿವೀಸ್ ಪ್ರಬಲ ಬ್ಯಾಟಿಂಗ್ ಟೀಂ ಇಂಡಿಯಾದ ಬೌಲರ್‌ಗಳು ನ್ಯೂಜಿಲೆಂಡ್ ತಂಡವನ್ನು 260 ರನ್‌ಗಳಿಗೆ ಸೀಮಿತಗೊಳಿಸಿದರು ಆದರೆ ಎಮಿಲಿಯಾ ಕರ್ ಮತ್ತು ಸೆಡರ್‌ವೈಟ್ ಅವರು ರನ್ ಗಳಿಸುವುದನ್ನು ತಡೆಯಲು ಭಾರತದ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. ಕಾರ್ 50 ಮತ್ತು ಸಾಥರ್‌ವೈಟ್ 75 ರನ್ ಗಳಿಸಿದರು. ಇದಾದ ಬಳಿಕ ಎಮಿಲಿಯಾ ಕರ್ ಮತ್ತು ತಹುಹು ತಲಾ 3 ವಿಕೆಟ್ ಕಬಳಿಸಿ ಟೀಂ ಇಂಡಿಯಾವನ್ನು ಪಂದ್ಯದಿಂದ ಹೊರದಬ್ಬಿದರು.
ಇದನ್ನೂ ಓದಿ:Rishabh Pant: ಅಂದು ಧೋನಿಯ 90 ರನ್ ವಿಶ್ವಕಪ್ ಗೆಲ್ಲಿಸಿತು: ಪಂತ್ 96 ರನ್ಗೆ ಔಟಾದ ಬಗ್ಗೆ ಗಂಭೀರ್ ಮಾತು