ICC Womens World Cup 2022: ಕಳಪೆ ಬ್ಯಾಟಿಂಗ್; ಆಂಗ್ಲರ ಎದುರು ಕೇವಲ 134 ರನ್‌ಗಳಿಗೆ ಭಾರತ ಆಲ್ಔಟ್!
ICC Womens World Cup 2022: ಐಸಿಸಿ ಮಹಿಳಾ ವಿಶ್ವಕಪ್‌ನ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 134 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ ವನಿತಾ ತಂಡ ಸಂಕಷ್ಟಕ್ಕೆ ಸಿಲುಕಿದೆ. ಸ್ಮೃತಿ ಮಂಧಾನ (35) ಮತ್ತು ರಿಚಾ ಘೋಷ್ (33) ಹೊರತು ಪಡಿಸಿ ಟೀಂ ಇಂಡಿಯಾದ ಇನ್ನ್ಯಾವ ಬ್ಯಾಟರ್ಗೆ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ.
ಐಸಿಸಿ ಮಹಿಳಾ ವಿಶ್ವಕಪ್ (ICC Women’s World Cup 2022)ನ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 134 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ ವನಿತಾ ತಂಡ ಸಂಕಷ್ಟಕ್ಕೆ ಸಿಲುಕಿದೆ. ಸ್ಮೃತಿ ಮಂಧಾನ (Smriti Mandhana)(35) ಮತ್ತು ರಿಚಾ ಘೋಷ್ (33) ಹೊರತು ಪಡಿಸಿ ಟೀಂ ಇಂಡಿಯಾದ ಇನ್ನ್ಯಾವ ಬ್ಯಾಟರ್ಗೆ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಕಳೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವನಿತಾ ತಂಡ ಆಂಗ್ಲರ ವಿರುದ್ಧ ಮುಗ್ಗರಿಸಿದೆ. ಆಂಗ್ಲ ಸ್ಪಿನ್ನರ್ ಚಾರ್ಲೊಟ್ ಡೀನ್ ಕೇವಲ 23 ರನ್ ನೀಡಿ ಟೀಂ ಇಂಡಿಯಾದ ಪ್ರಮುಖ 4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆರಂಭಿಕ ಆಟಗಾರ್ತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ಶತಕಗಳ ಆಧಾರದ ಮೇಲೆ ಕಳೆದ ಪಂದ್ಯದಲ್ಲಿ 317 ರನ್ ಗಳಿಸಿದ್ದ ಭಾರತ ಈ ಪಂದ್ಯದಲ್ಲಿ ಕಳಪೆ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.
ಇನ್ನೂ ಪಂದ್ಯಾವಳಿಯಲ್ಲಿ ಬರೋಬ್ಬರಿ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವ ನಾಲ್ಕು ಬಾರಿಯ ಚಾಂಪಿಯನ್ ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿದೆ. ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತ ಸಾಗಿದ ಟೀಂ ಇಂಡಿಯಾಕ್ಕೆ ಎಲ್ಲೂ ಅದ್ಭುತ ಜೊತೆಯಾಟ ನಡೆಸಲು ಸಾಧ್ಯವಾಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಮಂಧಾನ ಹಾಗೂ ಘೋಷ್ ಹೊರತು ಪಡಿಸಿ ಮತ್ತ್ಯಾರು ಬ್ಯಾಟಿಂಗ್ನಲ್ಲಿ ಕಮಾಲ್ ಮಾಡಲಾಗಲಿಲ್ಲ. ಅದರಲ್ಲೂ ಇಬ್ಬರು ಬ್ಯಾಟರ್ಗಳು ಶೂನ್ಯಕ್ಕೆ ಔಟಾಗಿದ್ದು ತಂಡಕ್ಕೆ ಹೊಡೆತ ನೀಡಿತು.
ಇನ್ನೂ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಹರ್ಮನ್‌ಪ್ರೀತ್ ಈ ಪಂದ್ಯದಲ್ಲಿ ಕೇವಲ 14 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಪಂದ್ಯಾವಳಿಯ ಆರಂಭದಿಂದಲೂ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ನಾಯಕಿ ಮಿಥಾಲಿ, ಈ ಪಂದ್ಯದಲ್ಲಿ ಕೇವಲ 1 ರನ್‌ಗಳಿಗೆ ಸುಸ್ತಾದರು. ಇನ್ನುಳಿದಂತೆ ಬೌಲರ್ ಜೂಲಾನ್ ಗೊಸ್ವಾಮಿ 20 ರನ್ ಗಳಿಸಿದ್ದು ಬಿಟ್ಟರೆ ಮತ್ಯ್ತಾರು ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ ಕೇವಲ 134 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಇಂಗ್ಲೆಂಡ್ ಪ್ಲೇಯಿಂಗ್ XI – ಡೇನಿಯಲ್ ವ್ಯಾಟ್, ಟಮ್ಮಿ ಬ್ಯೂಮಾಂಟ್, ಹೀದರ್ ನೈಟ್, ನಟಾಲಿ ಸ್ಕಿವರ್, ಆಮಿ ಅಲೆನ್ ಜೋನ್ಸ್, ಸೋಫಿಯಾ ಡಂಕ್ಲೆ, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟನ್, ಕೇಟ್ ಕ್ರೋಸ್, ಕ್ಯಾರೊಲೆಟ್ ಡೀನ್, ಅನ್ಯಾ ಶ್ರಬ್ಸೋಲ್
ಭಾರತದ ಪ್ಲೇಯಿಂಗ್ XI – ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್, ದೀಪ್ತಿ ಶರ್ಮಾ, ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್, ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್ ಮತ್ತು ರಾಜೇಶ್ವರಿ ಗಾಯಕ್ವಾಡ್
ಇದನ್ನೂ ಓದಿ:IPL 2022: ಈ ಆವೃತ್ತಿಯಲ್ಲಿ ಹೊಸ ನಾಯಕರೊಂದಿಗೆ ಕಣಕ್ಕಿಳಿಯುತ್ತಿರುವ 5 ಐಪಿಎಲ್ ತಂಡಗಳಿವು
Published On - 9:48 am, Wed, 16 March 22