ENG vs NED: ಇಂಗ್ಲೆಂಡ್‌- ನೆದರ್ಲೆಂಡ್ಸ್ ನಡುವೆ ಔಪಾಚಾರಿಕ ಪಂದ್ಯ; ಪುಣೆಯ ಪಿಚ್ ಯಾರಿಗೆ ಸಹಕಾರಿ?

ENG vs NED: ವಿಶ್ವಕಪ್ 2023 ರ 40 ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಬಾರಿಯ ವಿಶ್ವಕಪ್​ನಿಂದ ಈಗಾಗಲೇ ಈ ಉಭಯ ತಂಡಗಳು ಹೊರಬಿದ್ದಿರುವುದರಿಂದ ಈ ಪಂದ್ಯ ಕೇವಲ ಔಪಚಾರಿಕವಾಗಿದೆ.

ENG vs NED: ಇಂಗ್ಲೆಂಡ್‌- ನೆದರ್ಲೆಂಡ್ಸ್ ನಡುವೆ ಔಪಾಚಾರಿಕ ಪಂದ್ಯ; ಪುಣೆಯ ಪಿಚ್ ಯಾರಿಗೆ ಸಹಕಾರಿ?
ಇಂಗ್ಲೆಂಡ್- ನೆದರ್ಲೆಂಡ್ಸ್

Updated on: Nov 08, 2023 | 7:45 AM

ವಿಶ್ವಕಪ್ 2023 ರ (ICC World Cup 2023) 40 ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ (England vs Netherlands) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಬಾರಿಯ ವಿಶ್ವಕಪ್​ನಿಂದ ಈಗಾಗಲೇ ಈ ಉಭಯ ತಂಡಗಳು ಹೊರಬಿದ್ದಿರುವುದರಿಂದ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ನೀಡಿರುವ ಇಂಗ್ಲೆಂಡ್ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಜಯ ಸಾಧಿಸಿದೆ. ಆದರೆ ನೆದರ್ಲ್ಯಾಂಡ್ಸ್ ತಂಡ ಆಡಿರುವ  7 ಪಂದ್ಯಗಳಲ್ಲಿ 2 ರಲ್ಲಿ ಗೆದ್ದಿದೆ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ನೆದರ್ಲೆಂಡ್ಸ್ ಈ ವಿಶ್ವಕಪ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ನರನ್ನು ಮಣಿಸುವ ಇರಾದೆಯೊಂದಿಗೆ ನೆದರ್ಲೆಂಡ್ಸ್ ತಂಡ ಕಣಕ್ಕಿಳಿಯುತ್ತಿದೆ. ಉಭಯ ತಂಡಗಳ ಈ ಕದನ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ (Maharashtra Cricket Association) ನಡೆಯಲ್ಲಿದೆ.

ಮುಖಾಮುಖಿ ವರದಿ

ಇಂಗ್ಲೆಂಡ್ ಮತ್ತು ನೆದರ್ಲೆಂಡ್ಸ್ ನಡುವೆ ಇದುವರೆಗೆ ನಡೆದ 6 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಇನ್ನು ಈ ಉಭಯ ತಂಡಗಳ  ನಡುವೆ ತಟಸ್ಥ ಸ್ಥಳಗಳಲ್ಲಿ ಆಡಿದ ಎಲ್ಲಾ 3 ಪಂದ್ಯಗಳನ್ನು ಇಂಗ್ಲೆಂಡ್ ಗೆದ್ದಿದೆ. ಹಾಗೆಯೇ ಏಕದಿನ ವಿಶ್ವಕಪ್​ನಲ್ಲಿ ಈ ಎರಡು ತಂಡಗಳು ಇದುವರೆಗೆ 2 ಪಂದ್ಯಗಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಇಂಗ್ಲೆಂಡ್ ಎರಡೂ ಪಂದ್ಯಗಳನ್ನು ಗೆದ್ದಿದೆ.

ಏಕದಿನ ವಿಶ್ವಕಪ್​ನಲ್ಲಿ ಸತತವಾಗಿ ಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕ ಯಾರು ಗೊತ್ತಾ?

ಪುಣೆಯ ಪಿಚ್ ವರದಿ

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸಹಕಾರಿಯಾಗಿದೆ. ಇಲ್ಲಿ ಬೌಲರ್‌ಗಳಿಗೆ ವಿಶೇಷವಾದ ನೆರವೇನು ಸಿಗುವುದಿಲ್ಲ. ಇಲ್ಲಿ ಪಂದ್ಯದುದ್ದಕ್ಕೂ ರನ್ ಗಳಿಸುವುದು ತುಂಬಾ ಸುಲಭ, ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಈ ರೀತಿ ಮಾಡಿದ್ದನ್ನು ನಾವು ನೋಡಿದ್ದೇವೆ. ಈ ಪಿಚ್ ಸಾಮಾನ್ಯ ಬೌನ್ಸ್ ಮತ್ತು ವೇಗವನ್ನು ಹೊಂದಿದೆ ಮತ್ತು ದೊಡ್ಡ ಹೊಡೆತಗಳನ್ನು ಸುಲಭವಾಗಿ ಹೊಡೆಯಬಹುದು. ಬೌಂಡರಿ ಸುತ್ತಳತೆಯೂ ಸಾಕಷ್ಟು ಚಿಕ್ಕದಾಗಿದೆ. ಇದಲ್ಲದೇ ಈ ಪಿಚ್ ಸ್ಪಿನ್ನರ್‌ಗಳಿಗೂ ಸಹಕಾರಿಯಾಗಿದೆ.

ಉಭಯ ತಂಡಗಳು

ಇಂಗ್ಲೆಂಡ್ ತಂಡ : ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋ, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಬ್ರೈಡನ್ ಕಾರ್ಸೆ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್ .

ನೆದರ್ಲೆಂಡ್ಸ್ ತಂಡ: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡೆ, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಕ್ವಿಬ್ ಬ್ಯಾರೆಸಿ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:45 am, Wed, 8 November 23