ಅ.  4ಕ್ಕೆ ವಿಶ್ವಕಪ್ ಉದ್ಘಾಟನಾ ಸಮಾರಂಭ: ಮೋದಿ ಕ್ರೀಡಾಂಗಣ ಹೇಗಾಗಿದೆ ನೋಡಿ

|

Updated on: Oct 02, 2023 | 6:59 AM

ICC ODI World Cup Opening Ceremony 2023: ಬಹುನಿರೀಕ್ಷಿತ ಐಸಿಸಿ ವಿಶ್ವಕಪ್ 2023 ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್​ನ ಸ್ಟಾರ್ ನಟ ರಣವೀರ್ ಸಿಂಗ್, ಖ್ಯಾತ ಗಾಯಕರಾದ ಶ್ರೇಯಾ ಘೋಷಾಲ್, ಅರಿಜಿತ್ ಸಿಂಗ್ ಮತ್ತು ಆಶಾ ಭೋಂಸ್ಲೆ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರನ್ನು ಬಿಸಿಸಿಐ ಆಹ್ವಾನಿಸಿದೆ. ಇದಲ್ಲದೆ, ಭಾರತೀಯ ಪರಂಪರೆಯನ್ನು ಪ್ರದರ್ಶಿಸುವ ಜೊತೆಗೆ ಲೇಸರ್ ಶೋ ಮತ್ತು ಪಟಾಕಿಗಳು ಸದ್ದು ಇರಲಿದೆ.

ಅ.  4ಕ್ಕೆ ವಿಶ್ವಕಪ್ ಉದ್ಘಾಟನಾ ಸಮಾರಂಭ: ಮೋದಿ ಕ್ರೀಡಾಂಗಣ ಹೇಗಾಗಿದೆ ನೋಡಿ
ICC ODI World Cup Opening Ceremony
Follow us on

ಬಹುನಿರೀಕ್ಷಿತ ಐಸಿಸಿ ವಿಶ್ವಕಪ್ 2023 ಕ್ಕೆ (ICC ODI World Cup) ವೇದಿಕೆ ಸಜ್ಜಾಗಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಮುಖಾಮುಖಿ ಆಗಿದ್ದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಆರಂಭಿಕ ಪಂದ್ಯದಲ್ಲಿ ಸೆಣೆಸಾಟ ನಡೆಸಲಿದೆ. ಇದಕ್ಕೂ ಮುಂಚಿತವಾಗಿ, ಅಕ್ಟೋಬರ್ 4 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭವ್ಯವಾದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಅ. 4 ರಂದು ಕ್ಯಾಪ್ಟನ್ಸ್ ಡೇ ಆಗಿರುತ್ತದೆ ಮತ್ತು ಅದಾದ ನಂತರ ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂದ ಶೋ ನಡೆಯಲಿದೆ.

ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್​ನ ಸ್ಟಾರ್ ನಟ ರಣವೀರ್ ಸಿಂಗ್, ಖ್ಯಾತ ಗಾಯಕರಾದ ಶ್ರೇಯಾ ಘೋಷಾಲ್, ಅರಿಜಿತ್ ಸಿಂಗ್ ಮತ್ತು ಆಶಾ ಭೋಂಸ್ಲೆ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರನ್ನು ಬಿಸಿಸಿಐ ಆಹ್ವಾನಿಸಿದೆ. ಇದಲ್ಲದೆ, ಭಾರತೀಯ ಪರಂಪರೆಯನ್ನು ಪ್ರದರ್ಶಿಸುವ ಜೊತೆಗೆ ಲೇಸರ್ ಶೋ ಮತ್ತು ಪಟಾಕಿಗಳು ಸದ್ದು ಇರಲಿದೆ. ಈ ಸಂದರ್ಭದಲ್ಲಿ ಎಲ್ಲಾ 10 ತಂಡಗಳ ನಾಯಕರು ಉಪಸ್ಥಿತರಿರುತ್ತಾರೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯಕ್ಕೆ ಟಿಕೆಟ್ ಖರೀದಿಸಿದವರು ಈ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು.

ಇದನ್ನೂ ಓದಿ
12 ವರ್ಷ ಕಳೆದರೂ ವಿಶ್ವಕಪ್ ತಂಡದಿಂದ ಹೊರಬೀಳದ 10 ಆಟಗಾರರ ಪಟ್ಟಿ ಇಲ್ಲಿದೆ
ಆಸ್ಟ್ರೇಲಿಯಾದ ಮಾಸ್ಟರ್ ಪ್ಲ್ಯಾನ್​ಗೆ ತಣ್ಣೀರೆರಚಿದ ಭಾರತದ ಯುವ ಸ್ಪಿನ್ನರ್
World Cup 2023: 9 ಭಾಷೆಗಳಲ್ಲಿ ಏಕದಿನ ವಿಶ್ವಕಪ್ ನೇರ ಪ್ರಸಾರ
ICC World Cup 2023: ಪಾಕಿಸ್ತಾನ್ ಸೆಮಿಫೈನಲ್​ಗೇರಿದರೆ ಪಂದ್ಯ ಸ್ಥಳಾಂತರ

ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಶತಕಗಳ ಪೈಪೋಟಿ

ವಿಶ್ವಕಪ್ ಉದ್ಘಾಟನಾ ಸಮಾರಂಭದ ಪ್ರದರ್ಶಕರು

PTC ಪಂಜಾಬ್ ಪ್ರಕಾರ, ಆಶಾ ಭೋಂಸ್ಲೆ ತಮ್ಮ ಸುಂದರವಾದ ಧ್ವನಿಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಾರ. ಜೊತೆಗೆ ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಅರಿಜಿತ್ ಸಿಂಗ್ ಕೂಡ ಸಂಗೀತ ಪ್ರದರ್ಶನ ನೀಡಲಿದ್ದಾರೆ. ಐಸಿಸಿಯ ವಿಶ್ವಕಪ್ ಗೀತೆಯ ಮುಖವಾಗಿದ್ದ ರಣವೀರ್ ಸಿಂಗ್ ಕೆಲವು ಬಾಲಿವುಡ್ ಮತ್ತು ಟಾಲಿವುಡ್ ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ. ಮೋದಿ ಕ್ರೀಡಾಂಗಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದು, ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿ, ತಾಲೀಮು ನಡೆಸಲಾಗುತ್ತಿದೆ.

ಇಲ್ಲಿದೆ ನೋಡಿ ಉದ್ಘಾಟನಾ ಸಮಾರಂಭಕ್ಕೆ ಸಿದ್ಧವಾಗುತ್ತಿರುವ ನರೇಂದ್ರ ಮೋದಿ ಸ್ಟೇಡಿಯಂ:

 

ಗ್ರ್ಯಾಂಡ್ ಓಪನಿಂಗ್‌ಗೆ ಮೊದಲು, ಎಲ್ಲಾ 10 ನಾಯಕರು ಅಕ್ಟೋಬರ್ 3 ರಂದು ಅಹಮದಾಬಾದ್‌ಗೆ ಆಗಮಿಸಬೇಕು. ಆದರೆ ಅ. 3 ರಂದು ಭಾರತ-ನೆದರ್ಲೆಂಡ್ಸ್ ಮತ್ತು ಇತರ ತಂಡಗಳ ಅಭ್ಯಾಸ ಪಂದ್ಯ ಇರುವುದರಿಂದ, ರೋಹಿತ್ ಶರ್ಮಾ ಸೇರಿದಂತೆ ಹೆಚ್ಚಿನವರು ಅಕ್ಟೋಬರ್ 4 ರಂದು ಬೆಳಿಗ್ಗೆ ಆಗಮಿಸುತ್ತಾರೆ. ಅಭಿಮಾನಿಗಳ ಹೊರತಾಗಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಬಿಸಿಸಿಐನ ಉನ್ನತ ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಎಲ್ಲಾ ವಿಶ್ವಕಪ್ ತಂಡಗಳ ನಾಯಕರು

ಭಾರತ: ರೋಹಿತ್ ಶರ್ಮಾ

ಪಾಕಿಸ್ತಾನ: ಬಾಬರ್ ಅಝಮ್

ಇಂಗ್ಲೆಂಡ್ : ಜೋಸ್ ಬಟ್ಲರ್

ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್

ಶ್ರೀಲಂಕಾ: ದಸುನ್ ಶನಕ

ಬಾಂಗ್ಲಾದೇಶ : ಶಕೀಬ್ ಅಲ್ ಹಸನ್

ನೆದರ್ಲೆಂಡ್ಸ್ : ಸ್ಕಾಟ್ ಎಡ್ವರ್ಡ್ಸ್

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ

ಅಫ್ಘಾನಿಸ್ತಾನ : ಹಶ್ಮತುಲ್ಲಾ ಶಾಹಿದಿ

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ