‘ಮೊದಲು ಬ್ಯಾಟ್ ಮಾಡಿ ಆ ನಂತರ ಈ ಕೆಲಸ ಮಾಡಿ’; ಪಾಕ್ ತಂಡಕ್ಕೆ ಸೆಮಿಸ್ ಹಾದಿ ತೋರಿದ ಅಕ್ರಮ್
ICC World Cup 2023: ಪಾಕಿಸ್ತಾನದ ಟಾಕ್ ಶೋ ದಿ ಪೆವಿಲಿಯನ್‌ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅಕ್ರಮ್, ಸೆಮಿಫೈನಲ್ ತಲುಪುವುದು ಹೇಗೆ ಎಂದು ಪಾಕಿಸ್ತಾನ ತಂಡಕ್ಕೆ ತಿಳಿಸಿದ್ದಾರೆ. ಅಕ್ರಮ್ ಅವರ ಪ್ರಕಾರ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ ಬಿಗ್ ಟಾರ್ಗೆಟ್ ಸೆಟ್ ಮಾಡಬೇಕು. ನಂತರ ಇಂಗ್ಲೆಂಡ್ ಆಟಗಾರರನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ ಲಾಕ್ ಮಾಡಬೇಕು ಎಂದಿದ್ದಾರೆ.
2023ರ ವಿಶ್ವಕಪ್‌ನಲ್ಲಿ (ICC World Cup 2023) ಶ್ರೀಲಂಕಾ ತಂಡವನ್ನು ನ್ಯೂಜಿಲೆಂಡ್ ಮಣಿಸಿದ ಬಳಿಕ ಪಾಕಿಸ್ತಾನ ತಂಡ (Pakistan Cricket Team) ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಗುಳಿದಿದೆ. ಒಂದು ವೇಳೆ ಪಾಕ್ ತಂಡ ಸೆಮಿಸ್ಗೇರಬೇಕೆಂದರೆ ಒಂದು ಪವಾಡವೇ ನಡೆಯಬೇಕಿದೆ. ಅದರ ಪ್ರಕಾರ, ತನ್ನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿರುವ ಪಾಕ್, ಆಂಗ್ಲರನ್ನು ಕನಿಷ್ಠ ಪಕ್ಷ 287 ರನ್‌ಗಳಿಂದ ಸೋಲಿಸಬೇಕು. ಅಥವಾ ಇಂಗ್ಲೆಂಡ್ ನೀಡುವ ಯಾವುದೇ ಗುರಿಯನ್ನು ಕೇವಲ 3.4 ಓವರ್‌ಗಳಲ್ಲಿ ಸಾಧಿಸಬೇಕು. ಆಗ ಮಾತ್ರ ಪಾಕ್ ತಂಡ ಟಾಪ್ 4 ರಲ್ಲಿ ಸ್ಥಾನ ಪಡೆಯಲ್ಲಿದೆ. ಆದರೆ ಪಾಕ್ ತಂಡಕ್ಕೆ ಮೇಲೆ ಹೇಳಿದಂತೆ ಗೆಲುವು ಸಾಧಿಸುವುದು ಅಸಾಧ್ಯದ ಮಾತಾಗಿದೆ. ಹೀಗಾಗಿ ಬಾಬರ್ ಪಡೆ ಈ ಬಾರಿಯ ವಿಶ್ವಕಪ್ನಿಂದ ಹೊರಬಿದ್ದಿದೆ ಎಂತಲೇ ಹೇಳಬಹುದು. ಹೀಗಿರುವಾಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ (Wasim Akram), ಪಾಕ್ ತಂಡ ಸುಲಭವಾಗಿ ಸೆಮಿಫೈನಲ್‌ಗೇರುವ ಮಾರ್ಗವೊಂದನ್ನು ತೊರಿಸಿಕೊಟ್ಟಿದ್ದಾರೆ.
ಡ್ರೆಸ್ಸಿಂಗ್ ರೂಮ್ ಲಾಕ್ ಮಾಡಿ
ಪಾಕಿಸ್ತಾನದ ಟಾಕ್ ಶೋ ದಿ ಪೆವಿಲಿಯನ್‌ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅಕ್ರಮ್, ಸೆಮಿಫೈನಲ್ ತಲುಪುವುದು ಹೇಗೆ ಎಂದು ಪಾಕಿಸ್ತಾನ ತಂಡಕ್ಕೆ ತಿಳಿಸಿದ್ದಾರೆ. ಅಕ್ರಮ್ ಅವರ ಪ್ರಕಾರ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ ಬಿಗ್ ಟಾರ್ಗೆಟ್ ಸೆಟ್ ಮಾಡಬೇಕು. ನಂತರ ಇಂಗ್ಲೆಂಡ್ ಆಟಗಾರರನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ ಲಾಕ್ ಮಾಡಬೇಕು. ಕನಿಷ್ಠ 20 ನಿಮಿಷಗಳವರೆಗೆ ಇಂಗ್ಲೆಂಡ್ನ ಯಾವ ಆಟಗಾರರು ರೂಮ್ನಿಂದ ಹೊರಬರದಂತೆ ನೋಡಿಕೊಳ್ಳಬೇಕು. ಆಗ ಐಸಿಸಿ ಟೈಮ್ ಔಟ್ ನಿಯಮದಡಿಯಲ್ಲಿ ಇಂಗ್ಲೆಂಡ್ನ ಎಲ್ಲಾ ಆಟಗಾರರು ಔಟಾಗುತ್ತಾರೆ. ಈ ಮೂಲಕ ಪಾಕ್ ತಂಡ ಸೆಮಿಫೈನಲ್ಗೆ ಸುಲಭವಾಗಿ ಎಂಟ್ರಿ ಪಡೆಯಬಹುದು ಎಂದು ತಮಾಷೆಯಾಗಿ ವಾಸಿಂ ಅಕ್ರಮ್ ಹೇಳಿದ್ದರು.
How can Pakistan still qualify for the semi-finals? @wasimakramlive has a hilarious idea.#ASportsHD #ARYZAP #CWC23 #ThePavilion #WasimAkram #MoinKhan #FakhreAlam #MisbahulHaq #NZvSL pic.twitter.com/iaCH6CSZSa
— ASports (@asportstvpk) November 9, 2023
‘ದಿನಕ್ಕೆ 8 ಕೆಜಿ ಮಾಂಸ ತಿನ್ನುತ್ತಿರುವಂತೆ ತೋರುತ್ತಿದೆ’; ಬಾಬರ್ ಪಡೆಯ ಫಿಟ್ನೆಸ್ ಬಗ್ಗೆ ವಾಸಿಂ ಅಕ್ರಮ್ ಗರಂ..!
ಮತ್ತೊಂದು ಐಡಿಯಾ ನೀಡಿದ ಮಿಸ್ಬಾ
ಅಕ್ರಮ್ ನಂತರ ಮಿಸ್ಬಾ ಉಲ್ ಹಕ್ ಕೂಡ ಮತ್ತೊಂದು ಐಡಿಯಾ ನೀಡಿದರು. ಮಿಸ್ಬಾ ಪ್ರಕಾರ, ‘ಪಾಕ್ ತಂಡ ಮೊದಲು ಬ್ಯಾಟಿಂಗ್ ಮಾಡುವ ಅಗತ್ಯ ಏನಿದೆ. ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ಮೈದಾನಕ್ಕೆ ಪ್ರವೇಶಿಸುವ ಮೊದಲು ಅವರನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ಕೂಡಿ ಹಾಕಿ ಬಿಗ ಹಾಕಲಿ. ಆಗಲೂ ಕೂಡ ಟೈಮ್ ಔಟ್ ನಿಯಮದಡಿಯಲ್ಲಿ ಪಾಕ್ ತಂಡ ಸುಲಭವಾಗಿ ಜಯಿಸಲಿದೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.
ಪಾಕ್ ತಂಡದ ಸೆಮಿಸ್ ಸಾಧ್ಯತೆಗಳೇನು?
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿದರೆ, ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭಾರಿ ಅಂತರದಿಂದ ಸೋಲಿಸಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ಪಾಕಿಸ್ತಾನ 300 ರನ್ ಗಳಿಸಿದರೆ ಇಂಗ್ಲೆಂಡ್ ತಂಡವನ್ನು ಕೇವಲ 13 ರನ್ಗಳಿಗೆ ಕಟ್ಟಿಹಾಕಬೇಕು. ಅಥವಾ ಪಾಕ್ ತಂಡ 300 ಕ್ಕಿಂತ ಹೆಚ್ಚು ರನ್ ಕಲೆ ಹಾಕಿದರೆ, ಇಂಗ್ಲೆಂಡ್ ತಂಡವನ್ನು 287 ಅಥವಾ ಅದಕ್ಕಿಂತ ಹೆಚ್ಚಿನ ರನ್ಗಳ ಅಂತರದಿಂದ ಸೋಲಿಸಬೇಕು. ಆಗ ಮಾತ್ರ ಪಾಕ್ ತಂಡಕ್ಕೆ ಒಂದು ಅವಕಾಶ ಸಿಗಲಿದೆ. ಆದರೆ ಇದು ಅಸಾಧ್ಯದ ಮಾತು ಎಂತಲೇ ಹೇಳಬಹುದಾಗಿದೆ.
ಮತ್ತೊಂದೆಡೆ, ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿದರೆ ಬಾಬರ್ ಪಡೆ, ಆಂಗ್ಲರನ್ನು 100 ರನ್ಗಳಿಗೆ ಆಲೌಟ್ ಮಾಡಿದರೂ ಈ ಗುರಿಯನ್ನು ಕೇವಲ 2.5 ಓವರ್‌ಗಳಲ್ಲಿ ಸಾಧಿಸಬೇಕು. ಇದು ಕೂಡ ಅಸಾಧ್ಯದ ಮಾತಾಗಿದೆ. ಹೀಗಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸುವುದು ಖಚಿತವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ