Don Bradman: ಡಾನ್ ಬ್ರಾಡ್ಮನ್ ನಮ್ಮಲ್ಲಿ ಹುಟ್ಟಿದ್ದರೆ ಮೀನುಗಾರನಾಗುತ್ತಿದ್ದರು ಎಂದ ಐಸ್​​ಲೆಂಡ್ ಕ್ರಿಕೆಟ್: ವಿಚಿತ್ರ ಟ್ವೀಟ್​ ಹಿಂದಿದೆ ಕಾರಣ

Don Bradman: ಡಾನ್ ಬ್ರಾಡ್ಮನ್ ನಮ್ಮಲ್ಲಿ ಹುಟ್ಟಿದ್ದರೆ ಮೀನುಗಾರನಾಗುತ್ತಿದ್ದರು ಎಂದ ಐಸ್​​ಲೆಂಡ್ ಕ್ರಿಕೆಟ್: ವಿಚಿತ್ರ ಟ್ವೀಟ್​ ಹಿಂದಿದೆ ಕಾರಣ
Don Bradman and R Ashwin

Iceland Cricket Twitter: ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಆಸ್ಟ್ರೇಲಿಯಾದ ಬ್ಯಾಟಿಂಗ್ ದಿಗ್ಗಜ ಡಾನ್ ಬ್ರಾಡ್ಮನ್ ಕುರಿತು ಐಸ್​​ಲೆಂಡ್ ಕ್ರಿಕೆಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

TV9kannada Web Team

| Edited By: bhaskar hegde

Dec 25, 2021 | 1:25 PM

ಐಸ್​​ಲೆಂಡ್ ದೇಶ ಕ್ರಿಕೆಟ್ (Iceland Cricket) ಲೋಕದಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ಈವರೆಗೆ ಗೋಚರಿಸಿಲ್ಲ. ದುರ್ಬಲ ತಂಡವಾಗಿ ಗುರುತಿಸಿಕೊಂಡಿರುವ ಐಸ್​​ಲೆಂಡ್ ಕ್ರಿಕೆಟ್ ತನ್ನ ಟ್ವಿಟ್ಟರ್​ (Iceland Cricket Twitter) ಖಾತೆಯಲ್ಲಿ ಮಾತ್ರ ಪ್ರಚಂಡವಾಗಿದೆ. ಕಳೆದ ಕೆಲವು ವರ್ಷಗಳಿಂದ ಐಸ್​​ಲೆಂಡ್ ಕ್ರಿಕೆಟ್​ನ ಟ್ವಿಟ್ಟರ್ ಖಾತೆ ಟ್ವೀಟ್​ಗಳ ವಿಚಾರಕ್ಕೆ ಭಾರೀ ಸುದ್ದಿಯಾಗುತ್ತಲೇ ಇದೆ. ಇದೇ ಕಾರಣಕ್ಕೆ ಐಸ್​​ಲೆಂಡ್ ಕ್ರಿಕೆಟ್ ಟ್ವಿಟ್ಟರ್ ಖಾತೆಗೆ ಸಾಕಷ್ಟು ಫಾಲೋವರ್​ಗಳು ಕೂಡ ಇದ್ದಾರೆ ಎಂದರೆ ನಂಬಲೇ ಬೇಕು. ಸದ್ಯ ಐಸ್​​ಲೆಂಡ್ ಕ್ರಿಕೆಟ್ ಹೊಸದಾಗಿ ಒಂದು ಟ್ವೀಟ್ ಮಾಡಿದ್ದು, ಇದು ಕ್ರಿಕೆಟ್ ವಲಯದಲ್ಲಿ ಸಖತ್ ಸೌಂಡ್ ಆಡುತ್ತಿದೆ. ಅಷ್ಟಕ್ಕೂ ಐಸ್​​ಲೆಂಡ್ ಕ್ರಿಕೆಟ್ ಮಾಡಿದ ಈ ಟ್ವೀಟ್ ಏನು..?

ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಆಸ್ಟ್ರೇಲಿಯಾದ ಬ್ಯಾಟಿಂಗ್ ದಿಗ್ಗಜ ಡಾನ್ ಬ್ರಾಡ್ಮನ್ ಕುರಿತು ಐಸ್​​ಲೆಂಡ್ ಕ್ರಿಕೆಟ್ ಟ್ವೀಟ್ ಒಂದನ್ನು ಮಾಡಿದೆ. “ಜೀವನದಲ್ಲಿ ಎಲ್ಲವೂ ಸನ್ನಿವೇಶ ಮತ್ತು ಅದೃಷ್ಟದಿಂದ ಕೂಡಿರುತ್ತದೆ. ಉದಾಹರಣೆಗೆ ಆರ್. ಅಶ್ವಿನ್ ಶ್ರೀಲಂಕಾದಲ್ಲಿ ಹುಟ್ಟಿದ್ದರೆ ಅವರು ಮುತ್ತಯ್ಯ ಮುರಳೀಧರನ್ ರೀತಿಯಲ್ಲಿ ಅನೇಕ ವಿಕೆಟ್​ಗಳನ್ನು ಪಡೆದುಕೊಂಡು ಕ್ರಿಕೆಟ್ ವೃತ್ತಿ ಜೀವನವನ್ನು ಕೊನೆಗೊಳಿಸಬಹುದಿತ್ತು. ಹಾಗೆಯೇ ಡಾನ್ ಬ್ರಾಡ್ಮನ್ ಐಸ್​ಲೆಂಡ್​ನಲ್ಲಿ ಹುಟ್ಟಿದ್ದರೆ ಯಾವುದೇ ಅಂತರರಾಷ್ಟ್ರೀಯ ರನ್ ಗಳಿಸುತ್ತಿರಲಿಲ್ಲ ಬದಲಾಗಿ ಮೀನುಗಾರನಾಗುತ್ತಿದ್ದರು. ಅದೇ ಜೀವನ,” ಎಂದ ಟ್ವೀಟ್ ಮಾಡಿದೆ.

ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾಕಷ್ಟು ಕಮೆಂಟ್​ಗಳು ಬರುತ್ತಿವೆ. ಐಸ್​ಲೆಂಡ್ ಟ್ವಿಟ್ಟರ್ ಖಾತೆಯಿಂದ ಈರೀತಿಯ ಟ್ವೀಟ್​ಗಳು ಬರುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಐಸಿಸಿ ಏಕದಿನ ವಿಶ್ವಕಪ್​ಗೆ ಟೀಮ್ ಇಂಡಿಯಾ ಪರ ಅಂಬಟಿ ರಾಯುಡು ಅವರನ್ನು ಕೈಬಿಟ್ಟಾಗ ಕೂಡ ಐಸ್​ಲೆಂಡ್ ಕ್ರಿಕೆಟ್ ಇದಕ್ಕೆ ಪ್ರತಿಕ್ರಿಯಿಸಿತ್ತು.

ವಿಶ್ವಕಪ್ ವೀಕ್ಷಿಸಲು 3D ಕನ್ನಡಕಕ್ಕೆ ಆರ್ಡರ್ ಮಾಡಿದ್ದೇನೆ ಎಂದು ರಾಯುಡು ವ್ಯಂಗ್ಯ ಮಾಡಿ ಹಾಕಿದ್ದ ಟ್ವೀಟ್​ ಎಲ್ಲರ ಗಮನ ಸೆಳೆದಿತ್ತು. ಈ ಬಗ್ಗೆಯೂ ಐಸ್​ಲೆಂಡ್ ಕ್ರಿಕೇಟ್​ ಮಂಡಳಿ​ ಉಲ್ಲೇಖ ಮಾಡಿತ್ತು. “ಮಯಾಂಕ್​ ಅಗರ್​ವಾಲ್​ ಬೌಲಿಂಗ್​ನಲ್ಲಿ ಶೇ.72.33 ಸರಾಸರಿ ಹೊಂದಿದ್ದಾರೆ. ಈಗಲಾದರೂ ರಾಯುಡು ತಮ್ಮ 3ಡಿ ಗ್ಲಾಸ್​ಅನ್ನು ತೆಗೆದಿಡಬೇಕು. ಅವರಿಗೋಸ್ಕರ ಸಿದ್ಧಪಡಿಸಿದ ಈ ದಾಖಲೆಗಳನ್ನು ಓದಲು ಅವರಿಗೆ ಸಾಮಾನ್ಯ ಕನ್ನಡಕದ ಅಗತ್ಯತೆ ಇದೆ. ನಮ್ಮ ಜೊತೆ ಬಂದು ಕೈ ಜೋಡಿಸಿ. ನಾವು ನಿಮ್ಮನ್ನು ಇಷ್ಟಪಡುತ್ತೇವೆ,” ಎಂದು ಐಸ್​ಲೆಂಡ್​ ಕ್ರಿಕೆಟ್​ ಮಂಡಳಿ ಆಹ್ವಾನ ನೀಡಿತ್ತು.

ಅಲ್ಲದೆ ರಾಯುಡುಗೆ ವಿಶ್ವಕಪ್​ ತಂಡದಲ್ಲಿ ಸ್ಥಾನ ನೀಡದೇ ಇರುವ ವಿಚಾರದಲ್ಲಿ ಲಾಭ ಪಡೆದುಕೊಳ್ಳಲು ಐಸ್​ಲೆಂಡ್​ ಮುಂದಾಗಿತ್ತು. ಈ ಕುರಿತು ವಿಲಕ್ಷಣ ಟ್ವೀಟ್​ ಕೂಡ ಮಾಡಿತ್ತು. “ನೀವು ನಮ್ಮ ದೇಶದ ನಾಗರಿಕತ್ವ ಪಡೆದುಕೊಳ್ಳಿ. ಈ ಮೂಲಕ ಐಸ್​​ಲೆಂಡ್​ ತಂಡವನ್ನು ಪ್ರತಿನಿಧಿಸಿ. ಒಂದೊಮ್ಮೆ ನಿಮಗೆ ವಿಶ್ವಕಪ್​ನಲ್ಲಿ ಅವಕಾಶ ಸಿಕ್ಕರೆ ಭಾರತದ ಪರವಾಗಿ ಆಟವಾಡಿ,” ಎಂದು ಕೋರಿತ್ತು.

KL Rahul: ರಹಾನೆ-ಅಯ್ಯರ್ ಪೈಕಿ ಯಾರಿಗೆ ಸ್ಥಾನ?: ಕಠಿಣ ಪ್ರಶ್ನೆಗೆ ಕೆಎಲ್ ರಾಹುಲ್ ಖಡಕ್ ಉತ್ತರ

RCB New Captain: ಶಾಕಿಂಗ್: ಆರ್​ಸಿಬಿ ತಂಡಕ್ಕೆ ಕ್ಯಾಪ್ಟನ್ ಫಿಕ್ಸ್?: ಹೊಸ ನಾಯಕ ಯಾರು ಗೊತ್ತೇ?

(Iceland Cricket Hilarious Tweet the names of Ravichandran Ashwin and Don Bradman went viral on the micro-blogging site)

Follow us on

Related Stories

Most Read Stories

Click on your DTH Provider to Add TV9 Kannada