IND vs AFG: ಇಂದೋರ್‌ನಲ್ಲಿ ಮಳೆಯ ಮುನ್ಸೂಚನೆ; ರದ್ದಾಗುತ್ತಾ 2ನೇ ಟಿ20 ಪಂದ್ಯ?

IND vs AFG, Indore Weather Update: ಜನವರಿ 14 ರಂದು ಇಂದೋರ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ, ಆದರೆ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯುಂಟಾಗುವ ಸಾಧ್ಯತೆಗಳಿಲ್ಲ ಎಂದು ವರದಿಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಭಾನುವಾರ ಇಂದೋರ್​ನಲ್ಲಿ ಮಳೆಯಾಗುವ ಸಾಧ್ಯತೆ ಶೇ.4ರಷ್ಟು ಇದೆ.

IND vs AFG: ಇಂದೋರ್‌ನಲ್ಲಿ ಮಳೆಯ ಮುನ್ಸೂಚನೆ; ರದ್ದಾಗುತ್ತಾ 2ನೇ ಟಿ20 ಪಂದ್ಯ?
ಇಂದೋರ್‌ನ ಹವಾಮಾನ ವರದಿ
Follow us
ಪೃಥ್ವಿಶಂಕರ
|

Updated on: Jan 13, 2024 | 9:24 PM

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ 3 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಇಂದೋರ್‌ನ ಹೊಳ್ಕರ್ ಕ್ರೀಡಾಂಗಣದಲ್ಲಿ (Holkar Stadium in Indore) ನಡೆಯಲಿದೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದ ಕಾರಣ ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಗುರಿಯೊಂದಿಗೆ ಟೀಂ ಇಂಡಿಯಾ ಮೈದಾನಕ್ಕೆ ಇಳಿಯಲಿದೆ. ಇದರೊಂದಿಗೆ ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ ಮೊದಲ ಟಿ20 ಪಂದ್ಯದಲ್ಲಿ ಆಡಿರಲಿಲ್ಲ. ಆದರೀಗ ಕೊಹ್ಲಿ ಎರಡನೇ ಟಿ20 ಪಂದ್ಯದಲ್ಲಿ ತಂಡಕ್ಕೆ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ. ಹೀಗಾಗಿ 14 ತಿಂಗಳ ನಂತರ ಕಿಂಗ್ ಕೊಹ್ಲಿಯನ್ನು ಟಿ20 ಮಾದರಿಯಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇನ್ನು ಎರಡನೇ ಟಿ20 ಪಂದ್ಯ ನಡೆಯಲ್ಲಿರುವ ದಿನದಂದು ಇಂದೋರ್‌ನಲ್ಲಿ ಹವಾಮಾನ (Indore weather update) ಹೇಗಿರಲಿದೆ ಎಂಬುದನ್ನು ನೋಡುವುದಾದರೆ..

ಇಂದೋರ್‌ನ ಹವಾಮಾನ ಹೇಗಿರುತ್ತದೆ?

ಜನವರಿ 14 ರಂದು ಇಂದೋರ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ, ಆದರೆ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯುಂಟಾಗುವ ಸಾಧ್ಯತೆಗಳಿಲ್ಲ ಎಂದು ವರದಿಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಭಾನುವಾರ ಇಂದೋರ್​ನಲ್ಲಿ ಮಳೆಯಾಗುವ ಸಾಧ್ಯತೆ ಶೇ.4ರಷ್ಟು ಇದೆ. ತಾಪಮಾನವು 27 ರಿಂದ 11 ಡಿಗ್ರಿಗಳವರೆಗೆ ಇರುತ್ತದೆ. ಗಂಟೆಗೆ 10 ರಿಂದ 15 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಬಹುದು. ಆರ್ದ್ರತೆಯು 54%-64% ವರೆಗೆ ಇರುತ್ತದೆ. ಆದರೆ, ಮಳೆ ಬಾರದಿದ್ದರೂ ಚಳಿ ಆಟಗಾರರನ್ನು ಕಾಡುವುದು ಖಚಿತ. ವಾಸ್ತವವಾಗಿ, ಈ ಸಮಯದಲ್ಲಿ ಉತ್ತರ ಭಾರತದಲ್ಲಿ ವಿಪರೀತ ಚಳಿ ಇದೆ. ಇದು ಮೊದಲ ಟಿ20 ಪಂದ್ಯದಲ್ಲೂ ಕಂಡುಬಂದಿತ್ತು.

IND vs AFG: ಇಂದೋರ್‌ನಲ್ಲಿ ಟಾಸ್ ಗೆದ್ದವರೇ ಬಾಸ್; ಈ ಮೈದಾನವೆಂದರೆ ರೋಹಿತ್​ಗೆ ಬಹಳ ಅಚ್ಚುಮೆಚ್ಚು! ಏಕೆ ಗೊತ್ತಾ?

ಮುಖಾಮುಖಿ ವರದಿ

ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇಲ್ಲಿಯವರೆಗೆ ಒಟ್ಟು 6 ಟಿ20 ಪಂದ್ಯಗಳು ನಡೆದಿವೆ. ಈ 6 ಪಂದ್ಯಗಳಲ್ಲಿ ಭಾರತ 5 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯದ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಹೀಗಾಗಿ ಎರಡನೇ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾವೇ ಗೆಲುವಿನ ಫೆವರೇಟ್ ಆಗಿದೆ. ಆದರೆ, ಅಫ್ಘಾನ್ ತಂಡವನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ. ಏಕೆಂದರೆ ಚುಟುಕು ಮಾದರಿಯಲ್ಲಿ ಈ ತಂಡ ಅನೇಕ ಬಲಿಷ್ಠ ತಂಡಗಳನ್ನು ಮಣಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡುವಲ್ಲಿ ಎತ್ತಿದ ಕೈ.

ಟಿ20 ಸರಣಿಗೆ ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.

ಅಫ್ಘಾನಿಸ್ತಾನ ತಂಡ: ಇಬ್ರಾಹಿಂ ಝದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಕ್ರಮ್ ಅಲಿಖಿಲ್, ಹಜರತುಲ್ಲಾ ಝಜೈ, ರಹಮತ್ ಷಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜ್ಮುಲ್ಲಾ ಉಮರ್ಜಾಯ್, ಶರಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾಲ್, ಫಜಲ್ ಹಕ್ಮಾನ್, ನವೀನ್ ಉಲ್ ಹಕ್, ನೂರ್ ಅಹ್ಮದ್, ಮೊಹಮ್ಮದ್ ಸಲೀಮ್, ಖೈಸ್ ಅಹ್ಮದ್, ಗುಲ್ಬದಿನ್ ನೈಬ್ ಮತ್ತು ರಶೀದ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ