IND vs AUS: ರೋಹಿತ್ ರೀ ಎಂಟ್ರಿ, ಭಾರತ ತಂಡದಲ್ಲಿ 2 ಬದಲಾವಣೆ; ಹೀಗಿವೆ ಉಭಯ ತಂಡಗಳು
IND vs AUS: ಇಂದು ವಿಶಾಖಪಟ್ಟಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಇಂದು ವಿಶಾಖಪಟ್ಟಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವಿನ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಸ್ಟೀವ್ ಸ್ಮಿತ್ (Steve Smith) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ. ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ಮುಂಬೈನಲ್ಲಿ ನಡೆದಿದ್ದು, ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಟೀಂ ಇಂಡಿಯಾ ಐದು ವಿಕೆಟ್‌ಗಳ ಜಯ ಸಾಧಿಸಿದೆ. ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ (Rohit Sharma) ವಿಶಾಖಪಟ್ಟಣಂ ಏಕದಿನ ಪಂದ್ಯಕ್ಕೆ ಮರಳುತ್ತಿದ್ದಾರೆ. ರೋಹಿತ್ ವಾಪಸಾತಿ ಎಂದರೆ ಇಶಾನ್ ಕಿಶನ್ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಮತ್ತೊಂದೆಡೆ, ಟೆಸ್ಟ್ ಸರಣಿಯ ಸೋತಿರುವ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ಜೀವಂತವಾಗಿರಿಸಲು ಹೋರಾಡಲಿದೆ.
ಉಭಯ ತಂಡಗಳಲ್ಲಿ 2 ಬದಲಾವಣೆ
ಈ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ತಲಾ 2 ಬದಲಾವಣೆ ಮಾಡಿಕೊಂಡಿವೆ. ವೈಯಕ್ತಿಕ ಕಾರಣಗಳಿಂದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಭಾರತ ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಇಶಾನ್ ಕಿಶನ್ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ಶಾರ್ದೂಲ್ ಠಾಕೂರ್ಗೂ ಈ ಪಂದ್ಯದಿಂದ ಕೋಕ್ ನೀಡಿದ್ದು, ಅವರ ಜಾಗದಲ್ಲಿ ಅಕ್ಷರ್ ಪಟೇಲ್ ಆಡಲಿದ್ದಾರೆ. ಹಾಗೆಯೇ ಆಸೀಸ್ ತಂಡದಲ್ಲಿ 2 ಬದಲಾವಣೆಗಳಾಗಿದ್ದು, ಜೋಶ್ ಇಂಗ್ಲಿಸ್ ಹಾಗೂ ಗ್ಲೇನ್ ಮ್ಯಾಕ್ಸ್ವೆಲ್ ತಂಡದಿಂದ ಹೊರಗುಳಿದರೆ, ಅವರ ಜಾಗದಲ್ಲಿ ಅಲೆಕ್ಸ್ ಕ್ಯಾರಿ ಹಾಗೂ ನಾಥನ್ ಎಲ್ಲಿಸ್ ಆಯ್ಕೆಯಾಗಿದ್ದಾರೆ.
IND vs AUS 2nd ODI Live Score: ಟಾಸ್ ಗೆದ್ದ ಆಸ್ಟ್ರೇಲಿಯಾ; ಭಾರತ ಬ್ಯಾಟಿಂಗ್
ಭಾರತ ತಂಡ
ಶುಭ್ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಲೋಕೇಶ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಮಿ.
2ND ODI. India XI: S Gill, R Sharma, V Kohli, S Yadav, KL Rahul (wk), H Pandya, R Jadeja, A Patel, M Shami, M Siraj, K Yadav. https://t.co/dzoJxTOHiK #INDvAUS @mastercardindia
— BCCI (@BCCI) March 19, 2023
2ND ODI. Australia XI: T Head, M Marsh, M Labuschagne, S Smith (c), C Green, A Carey (wk), M Stoinis, M Starc, N Ellis, S Abbott, A Zampa. https://t.co/dzoJxTOHiK #INDvAUS @mastercardindia
— BCCI (@BCCI) March 19, 2023
ಆಸ್ಟ್ರೇಲಿಯಾ ತಂಡ
ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯಿನಿಸ್, ನಾಥನ್ ಎಲಿಸ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:10 pm, Sun, 19 March 23