IND vs AUS: ಮೊದಲ ಟಿ20 ಪಂದ್ಯದ ಸೋಲಿನಲ್ಲೂ ಟೀಂ ಇಂಡಿಯಾಕ್ಕೆ ಆದ 4 ಪ್ರಯೋಜನಗಳಿವು
IND vs AUS: ಕೊನೆಯ 3 ಓವರ್ ಮುಗಿಯುವುದಕ್ಕೂ ಮುನ್ನ ವಿಜಯಲಕ್ಷ್ಮಿಯನ್ನು ತನ್ನ ಕೀಸೆಯಲ್ಲೆ ಇರಿಸಿಕೊಂಡಿದ್ದ ಟೀಂ ಇಂಡಿಯಾ ಡೆತ್ ಓವರ್ಸ್ ವೈಫಲ್ಯದಿಂದಾಗಿ ಮೊದಲ ಟಿ20ಯಲ್ಲಿ ಸೋಲನುಭವಿಸಬೇಕಾಯಿತು.
ಕೊನೆಯ 3 ಓವರ್ ಮುಗಿಯುವುದಕ್ಕೂ ಮುನ್ನ ವಿಜಯಲಕ್ಷ್ಮಿಯನ್ನು ತನ್ನ ಕೀಸೆಯಲ್ಲೆ ಇರಿಸಿಕೊಂಡಿದ್ದ ಟೀಂ ಇಂಡಿಯಾ (Team India) ಡೆತ್ ಓವರ್ಸ್ ವೈಫಲ್ಯದಿಂದಾಗಿ ಮೊದಲ ಟಿ20ಯಲ್ಲಿ ಸೋಲನುಭವಿಸಬೇಕಾಯಿತು. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ಗಳ ಸೋಲು ಕಂಡಿದೆ. 208 ರನ್ ಗಳಿಸಿದ್ದರೂ ಟೀಂ ಇಂಡಿಯಾ ಸೋಲು ಕಂಡಿತ್ತು. ಹೀಗಾಗಿ ಬಿಗ್ ಟಾರ್ಗೆಟ್ ನೀಡಿದರು ಸಹಿತ ಸೋತ ರೋಹಿತ್ (Rohit Sharma) ಪಡೆ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದೆ. ಅನೇಕ ಮಾಜಿ ಕ್ರಿಕೆಟಿಗರು ಟೀಂ ಇಂಡಿಯಾದ ತಂತ್ರ ಮತ್ತು ಆಟಗಾರರ ಪ್ರದರ್ಶನವನ್ನು ಟೀಕಿಸಿದ್ದಾರೆ.
ಸೋಲು ಯಾವಾಗಲೂ ನೋವಿನಿಂದ ಕೂಡಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೆ. ಆದರೆ ಈ ಸೋಲಿನಿಂದ ಟೀಂ ಇಂಡಿಯಾಗೆ ಭವಿಷ್ಯದ ದೃಷ್ಟಿಯಿಂದ ಸಾಕಷ್ಟು ಲಾಭವಾಗುತ್ತಿದೆ. ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಸೋತಿರುವುದು ಭವಿಷ್ಯದಲ್ಲಿ ಟೀಂ ಇಂಡಿಯಾಕ್ಕೆ ಖಂಡಿತಾ ಲಾಭವಾಗಲಿದೆ. ಅದು ಹೇಗೆ ಎಂಬುದರ ಸಂಪೂರ್ಣ ವಿವರ ಹೀಗಿದೆ.
ಲೈನ್-ಲೆಂಥ್ನಲ್ಲಿ ಎಡವಿದ ಟೀಂ ಇಂಡಿಯಾ
ಮೊಹಾಲಿಯಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ಕಳಪೆ ಲೈನ್-ಲೆಂಥ್ನಲ್ಲಿ ಬೌಲಿಂಗ್ ಮಾಡಿದರು. ಇದರಿಂದಾಗಿ 209 ರನ್ಗಳ ಬೃಹತ್ ಗುರಿಯನ್ನು ಆಸ್ಟ್ರೇಲಿಯಾ 4 ಎಸೆತಗಳು ಬಾಕಿ ಇರುವಂತೆಯೇ ತಲುಪಿತು. ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 52 ರನ್ ಬಿಟ್ಟುಕೊಟ್ಟರು. ಯುಜ್ವೇಂದ್ರ ಚಹಾಲ್ 20 ಎಸೆತಗಳಲ್ಲಿ 42 ರನ್ ಬಿಟ್ಟುಕೊಟ್ಟರೆ, ಹರ್ಷಲ್ ಪಟೇಲ್ 4 ಓವರ್ ಗಳಲ್ಲಿ 49 ರನ್ ಬಿಟ್ಟುಕೊಟ್ಟರು. ಹೀಗಾಗಿ ಬೌಲಿಂಗ್ನಲ್ಲಿ ದುಬಾರಿಯಾದ ಭಾರತ ಮುಂದಿನ ಪಂದ್ಯಗಳಲ್ಲಿ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ತಯಾರಿ ಆರಂಭಿಸಿದೆ.
ಪ್ರತಿ ಬೌಲರ್ಗಳ ಎಕಾನಮಿ ಮೇಲೆ ಗಮನ
ಪಾಂಡ್ಯ ಮತ್ತು ಉಮೇಶ್ ಯಾದವ್ ಅವರ ಎಕಾನಮಿ ದರ ಪ್ರತಿ ಓವರ್‌ಗೆ 10 ಕ್ಕಿಂತ ಹೆಚ್ಚಿತ್ತು. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಯಾರಿಗೆ ಆರಂಭಿಕ ಬೌಲಿಂಗ್ ಜವಬ್ದಾರಿ ನೀಡಬೇಕು ಹಾಗೂ ಯಾರಿಗೆ ಡೆತ್ ಓವರ್ಸ್ ಜವಬ್ದಾರಿ ನೀಡಬೇಕು ಎಂಬ ಕ್ಲೀಯರ್ ಪಿಚ್ಚರ್ ಬಿಸಿಸಿಐ ಆಯ್ಕೆ ಮಂಡಳಿಗೆ ಸಿಗಲಿದೆ. ಇತ್ತಿಚ್ಚಿನ ದಿನಗಳಲ್ಲಿ ಡೆತ್ ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ದುಬಾರಿಯಾಗುತ್ತಿದ್ದು, ಡೆತ್ ಓವರ್ ಸ್ಪೆಷಲಿಸ್ಟ್ ಎನಿಸಿಕೊಂಡಿದ್ದ ಅಕ್ಷರ್ ಪಟೇಲ್‌ಗೆ ಚೆಂಡನ್ನು ಯಾವಾಗ ನೀಡಬೇಕು ಎಂಬುದರ ಬಗ್ಗೆ ತಂಡದ ಆಡಳಿತ ಮಂಡಳಿ ಗಮನಹರಿಸಲಿದೆ.
ಕಳಪೆ ಫೀಲ್ಡಿಂಗ್
ಮೊಹಾಲಿಯಲ್ಲಿನ ಸೋಲು ಟೀಂ ಇಂಡಿಯಾದ ಮತ್ತೊಂದು ದುರ್ಬಲ ಮುಖವನ್ನು ತೆರೆದಿಟ್ಟಿದೆ. ಈ ಪಂದ್ಯದಲ್ಲಿ ಫೀಲ್ಡರ್‌ಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಅಕ್ಷರ್ ಪಟೇಲ್, ಕೆಎಲ್ ರಾಹುಲ್ ಮತ್ತು ಹರ್ಷಲ್ ಪಟೇಲ್ ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟರು. ಇದರಿಂದ ಟೀಂ ಇಂಡಿಯಾ ಭಾರಿ ನಷ್ಟ ಅನುಭವಿಸಬೇಕಾಯಿತು. ಹಾಗಾಗಿ ಫೀಲ್ಡಿಂಗ್ ಮೇಲೆ ಕೋಚಿಂಗ್ ವಿಭಾಗ ವಿಶೇಷ ಗಮನಹರಿಸಲಿದೆ.
ಎಲ್ಲಿ ಸುಧಾರಣೆಯಾಗಬೇಕು?
ಮೊಹಾಲಿಯಲ್ಲಿ ಟೀಂ ಇಂಡಿಯಾ ಸೋಲುವುದರೊಂದಿಗೆ ತಂಡದ ಯಾವ ವಿಭಾಗದಲ್ಲಿ ಹೆಚ್ಚಿನ ಸುಧಾರಣೆಯಾಗಬೇಕು ಹಾಗೂ ತಂಡದ ನಾಯಕ ರೋಹಿತ್ ಶರ್ಮಾ ಒತ್ತಡದಲ್ಲಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದರ ಮೇಲೆ ಆಯ್ಕೆ ಮಂಡಳಿ ಕೆಲಸ ಮಾಡಲಿದೆ.
ಅದರಲ್ಲಿ ಪ್ರಮುಖವಾಗಿ ತಂಡದ ಬ್ಯಾಟಿಂಗ್ ವಿಭಾಗ. ಟೀಂ ಇಂಡಿಯಾ, ಕಾಂಗರೂಗಳಿಗೆ 208 ರನ್ ಟಾರ್ಗೆಟ್ ನೀಡುವುದರಲ್ಲೇನೋ ಯಶಸ್ವಿಯಾಯಿತು. ಆದರೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೊಡುಗೆ ಅತ್ಯಲ್ಪ. ಇಬ್ಬರೂ ತಮ್ಮ ಬ್ಯಾಟಿಂಗ್‌ನಲ್ಲಿ ಹೆಚ್ಚು ಶ್ರಮಿಸಬೇಕಾಗಿದೆ. ಇವರಿಬ್ಬರು ವಿಕೆಟ್‌ನಲ್ಲಿ ಉಳಿದರೆ ಹೆಚ್ಚು ರನ್‌ಗಳು ತಂಡಕ್ಕೆ ಹರಿದುಬರಲಿವೆ
Published On - 6:35 pm, Wed, 21 September 22