IND vs AUS: ಭದ್ರತಾ ಲೋಪ; ಕೊಹ್ಲಿಯ ಭುಜದ ಮೇಲೆ ಕೈಯಿಟ್ಟು ಡ್ಯಾನ್ಸ್ ಮಾಡಿದ ಅಭಿಮಾನಿ; ವಿಡಿಯೋ ವೈರಲ್
IND vs AUS: ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದ ವೇಳೆ ಒಬ್ಬ ವ್ಯಕ್ತಿ ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿದ ಘಟನೆ ವೈರಲ್ ಆಗಿದೆ. ಮೊದಲು ರೋಹಿತ್ ಶರ್ಮಾ ಬಳಿಗೆ ಓಡಿದ ಆತ, ನಂತರ ಕೊಹ್ಲಿಯನ್ನು ತಬ್ಬಿ, ಭುಜದ ಮೇಲೆ ಕೈಯಿಟ್ಟು ಮಾತನಾಡಿದ್ದಾನೆ. ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಹೊರಗೆ ಕರೆದೊಯ್ದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ವೇಳೆ ವ್ಯಕ್ತಿಯೊಬ್ಬ ಭದ್ರತಾ ಕವಚವನ್ನು ಮುರಿದು ಮೈದಾನಕ್ಕೆ ನುಗ್ಗಿದ್ದಾನೆ. ಭಾರತ ತಂಡದ ಆಟಗಾರರು ಫೀಲ್ಡಿಂಗ್ ಮಾಡುತ್ತಿದ್ದಾಗ, ಏಕಾಏಕಿ ಮೈದಾನಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಕ್ಯಾಪ್ಟನ್ ರೋಹಿತ್ ಪಡೆಗೆ ಓಡಿದ್ದಾನೆ. ಆದರೆ ರೋಹಿತ್ ಕೋಪಕ್ಕೆ ಹೆದರಿದ ಆ ವ್ಯಕ್ತಿ ಕಿಂಗ್ ಕೊಹ್ಲಿಯತ್ತ ಓಡಿದ್ದಾನೆ. ಆ ಬಳಿಕ ಕೊಹ್ಲಿ ಬಳಿಕ ಬಂದ ಆ ವ್ಯಕ್ತಿ ಕೊಹ್ಲಿಯ ಭುಜದ ಮೇಲೆ ಕೈಯಿಟ್ಟು ಮೈದಾನದ ಮಧ್ಯದಲ್ಲೇ ಡಾನ್ಸ್ ಮಾಡಿದ್ದಾನೆ. ಇದೀಗ ಆ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಕೂಡಲೇ ಆತನನ್ನು ಹಿಡಿದು ಮೈದಾನದಿಂದ ಹೊರ ಹಾಕಿದ್ದಾರೆ.
ಮೈದಾನಕ್ಕೆ ನುಗ್ಗಿದ ಅಭಿಮಾನಿ
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಮೈದಾನದೊಳಗೆ ಓಡಿಬರುವುದನ್ನು ಕಾಣಬಹುದು. ಮೊದಲಿಗೆ ರೋಹಿತ್ ಬಳಿಗೆ ಓಡಿದ ಆ ವ್ಯಕ್ತಿ ಆ ಬಳಿಕ ಕೊಹ್ಲಿ ಬಳಿಗೆ ಬಂದಿದ್ದಾನೆ. ನಂತರ ಕೊಹ್ಲಿಯನ್ನು ತಬ್ಬಿ ಭುಜದ ಮೇಲೆ ಕೈಯಿಟ್ಟು ಮಾತನಾಡಲಾರಂಭಿಸಿದ್ದಾನೆ. ಈ ವೇಳೆ ಕಿಂಗ್ ಕೊಹ್ಲಿ ಕೂಡ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿದ್ದು, ಕೂಡಲೇ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಹಿಡಿದು ಮೈದಾನದಿಂದ ಹೊರಗೆ ಕರೆದೊಯ್ದಿದ್ದಾರೆ.
Already a pitch invader #AUSvIND pic.twitter.com/2gjnwjJfmt
— Jooorp (@JRP2234_) December 27, 2024
ಬೃಹತ್ ಮೊತ್ತ ಕಲೆಹಾಕಿದ ಆಸ್ಟ್ರೇಲಿಯಾ
ಈ ಪಂದ್ಯದ ಬಗ್ಗೆ ಹೇಳುವುದಾದರೆ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 474 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ತಂಡದ ಪರ ಸ್ಯಾಮ್ ಕೊನ್ಸ್ಟಾಸ್ 60, ಉಸ್ಮಾನ್ ಖವಾಜಾ 52, ಮಾರ್ನಸ್ ಲಬುಶೇನ್ 72 ರನ್ ಗಳಿಸಿದರು. ಈ ಸರಣಿಯಲ್ಲಿ ಭಾರತದ ವಿರುದ್ಧ ಸತತ ಎರಡನೇ ಶತಕ ದಾಖಲಿಸಿದ ಸ್ಟೀವ್ ಸ್ಮಿತ್ 197 ಎಸೆತಗಳಲ್ಲಿ 140 ರನ್‌ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರು. ನಾಯಕ ಪ್ಯಾಟ್ ಕಮ್ಮಿನ್ಸ್ ಕೇವಲ ಒಂದು ರನ್ ನಿಂದ ಅರ್ಧಶತಕ ವಂಚಿತರಾದರು. ಅವರು 63 ಎಸೆತಗಳಲ್ಲಿ 49 ರನ್ ಗಳಿಸಿದರು. ಭಾರತದ ಪರ ಬೌಲಿಂಗ್‌ನಲ್ಲಿ ಮತ್ತೊಮ್ಮೆ ಮಿಂಚಿದ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು. ಆಕಾಶದೀಪ್ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವಾಷಿಂಗ್ಟನ್ ಸುಂದರ್ ಏಕೈಕ ವಿಕೆಟ್ ಪಡೆದರು.
ಭಾರತಕ್ಕೆ ಆರಂಭಿಕ ಆಘಾತ
ಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. ತಂಡ ಎಂಟು ರನ್ ಕಲೆಹಾಕಿದ್ದಾಗ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕರಾಗಿಯೂ ವಿಫಲರಾಗಿರುವ ರೋಹಿತ್ ಶರ್ಮಾ ಎರಡನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಬೋಲ್ಯಾಂಡ್‌ಗೆ ಕ್ಯಾಚ್ ನೀಡಿ ಔಟಾದರು. ರೋಹಿತ್ ಮೂರು ರನ್ ಗಳಿಸಲಷ್ಟೇ ಶಕ್ತರಾದರು. ರೋಹಿತ್ಗೆ ಆರಂಭಿಕ ಸ್ಥಾನ ನೀಡುವ ಸಲುವಾಗಿಯೇ ಶುಭಮನ್ ಗಿಲ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದಾಗ್ಯೂ, ಹಿಟ್‌ಮ್ಯಾನ್ ಮತ್ತೊಮ್ಮೆ ಫ್ಲಾಪ್ ಆಗಿದ್ದಾರೆ. ಸದ್ಯ ಕೆಎಲ್ ರಾಹುಲ್ ಮತ್ತು ಯಶಸ್ವಿ ಕ್ರೀಸ್‌ನಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ