IND vs ENG: ಟೀಂ ಇಂಡಿಯಾದಲ್ಲಿ ಮತ್ತೊಂದು ಕೊರೊನಾ ಪ್ರಕರಣ! 5ನೇ ಟೆಸ್ಟ್​ ಆಡುವುದು ಭಾಗಶಃ ಅನುಮಾನ

TV9 Digital Desk

| Edited By: ಪೃಥ್ವಿಶಂಕರ

Updated on: Sep 09, 2021 | 7:29 PM

IND vs ENG: ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಕೊರೊನಾ ಪಾಸಿಟಿವ್ ಎಂದು ಕಂಡುಬಂದಿರುವ ಸಹಾಯಕ ಸಿಬ್ಬಂದಿಯನ್ನು ಎರಡನೇ ಫಿಸಿಯೋ ಯೋಗೇಶ್ ಪರ್ಮಾರ್ ಎಂದು ಗುರುತಿಸಲಾಗಿದೆ.

IND vs ENG: ಟೀಂ ಇಂಡಿಯಾದಲ್ಲಿ ಮತ್ತೊಂದು ಕೊರೊನಾ ಪ್ರಕರಣ! 5ನೇ ಟೆಸ್ಟ್​ ಆಡುವುದು ಭಾಗಶಃ ಅನುಮಾನ
ಟೀಂ ಇಂಡಿಯಾ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೇಲೆ ಬಿಕ್ಕಟ್ಟಿನ ಮೋಡಗಳು ಸುಳಿದಾಡಲಾರಂಭಿಸಿವೆ. ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾದ್ದರಿಂದ ಈ ಬಿಕ್ಕಟ್ಟು ಉಂಟಾಗಿದೆ. ಸೆಪ್ಟೆಂಬರ್ 9 ರಂದು, ಭಾರತೀಯ ತಂಡದ ಸಹಾಯಕ ಸಿಬ್ಬಂದಿಯ ಕೋವಿಡ್ ಟೆಸ್ಟ್ ಪಾಸಿಟಿವ್ ಬಂದಿದೆ ಎಂದು ವರದಿಯಾಗಿದೆ. ಇದರಿಂದ ಶುಕ್ರವಾರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್‌ಗೆ ಮುನ್ನ ತಂಡದ ಅಭ್ಯಾಸವನ್ನು ರದ್ದುಗೊಳಿಸಬೇಕಾಯಿತು. ಭಾರತೀಯ ಆಟಗಾರರು ತಮ್ಮ ಕೋಣೆಗಳಲ್ಲಿ ಉಳಿಯುವಂತೆ ಸೂಚಿಸಲಾಗಿದೆ. ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಅಧಿಕಾರಿಯೊಬ್ಬರು ಈ ಬಗ್ಗೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಕೊರೊನಾ ಪಾಸಿಟಿವ್ ಎಂದು ಕಂಡುಬಂದಿರುವ ಸಹಾಯಕ ಸಿಬ್ಬಂದಿಯನ್ನು ಎರಡನೇ ಫಿಸಿಯೋ ಯೋಗೇಶ್ ಪರ್ಮಾರ್ ಎಂದು ಗುರುತಿಸಲಾಗಿದೆ. ಮುಖ್ಯ ಕೋಚ್ ರವಿಶಾಸ್ತ್ರಿ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಕೋವಿಡ್ -19 ಗೆ ತುತ್ತಾಗಿದ್ದರು. ಅವರು ಈಗಾಗಲೇ ಪ್ರತ್ಯೇಕವಾಗಿದ್ದಾರೆ. ಇದರ ನಂತರ, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫಿಸಿಯೋ ನಿತಿನ್ ಪಟೇಲ್ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಮೂವರೂ ಲಂಡನ್‌ನಲ್ಲಿ ಪ್ರತ್ಯೇಕವಾಗಿದ್ದಾರೆ. ಓವಲ್​ನಲ್ಲಿ ಐದನೇ ದಿನ ಭಾರತ ಪಂದ್ಯ ಗೆದ್ದಾಗ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮಾತ್ರ ತಂಡದ ಜೊತೆಗಿದ್ದರು. ಇದೀಗ ಅವರು ತರಬೇತಿಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ಪ್ರಸ್ತುತ 2-1 ಮುನ್ನಡೆ ಸಾಧಿಸಿದೆ.

ಬಿಸಿಸಿಐ ಐಪಿಎಲ್ ಅನ್ನು ಅಪಾಯದಲ್ಲಿಡಲು ಬಯಸುವುದಿಲ್ಲ ಮ್ಯಾಂಚೆಸ್ಟರ್‌ನಲ್ಲಿ ಬಿಸಿಸಿಐ ಅಧಿಕಾರಿಗಳು ತಂಡದ ಜೊತೆ ಮಾತನಾಡಿದ್ದಾರೆ. ಭಾರತೀಯ ಮಂಡಳಿಯು ಐದನೇ ಟೆಸ್ಟ್‌ನಲ್ಲಿ ಆಸಕ್ತಿ ಹೊಂದಿಲ್ಲ. ಸೆಪ್ಟೆಂಬರ್ 19 ರಿಂದ ಐಪಿಎಲ್ ಆರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಸಕ್ತ ಸರಣಿಯ ಕೊರೊನಾ ಪ್ರಕರಣಗಳು ಈ ಪಂದ್ಯಾವಳಿಯ ಮೇಲೆ ಯಾವುದೇ ಪರಿಣಾಮ ಬೀರುವುದನ್ನು ಅವರು ಬಯಸುವುದಿಲ್ಲ. ಅಲ್ಲದೆ, ಐಪಿಎಲ್ 2021 ಅನ್ನು ಕೊರೊನಾ ಪ್ರಕರಣಗಳು ಕಾಣಿಸಿಕೊಂಡ ನಂತರ ಮೇ ತಿಂಗಳಲ್ಲಿ ಮುಂದೂಡಬೇಕಾಯಿತು ಮತ್ತು ಈಗ ಉಳಿದ ಪಂದ್ಯಗಳನ್ನು ನಡೆಸಲಾಗುತ್ತಿದೆ.

ಆಟಗಾರರು ಕೂಡ ಕೊರೊನಾ ಸೋಂಕಿಗೆ ಒಳಗಾಗಬಹುದು ಭಾರತಕ್ಕೆ ಒಳ್ಳೆಯ ವಿಷಯವೆಂದರೆ ಯಾವುದೇ ಆಟಗಾರನಿಗೆ ಕೊರೊನಾ ತಗುಲಿಲ್ಲ. ಆದರೆ ಭಯವನ್ನು ತಪ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಕೊನೆಯ ಟೆಸ್ಟ್ ಸಮಯದಲ್ಲಿ ಎಲ್ಲಾ ಆಟಗಾರರು ಫಿಸಿಯೋ ಸಂಪರ್ಕದಲ್ಲಿದ್ದರು. ಚೇತೇಶ್ವರ ಪೂಜಾರ ಮತ್ತು ರೋಹಿತ್ ಶರ್ಮಾ ಗಾಯಗೊಂಡಿದ್ದು ಇಬ್ಬರನ್ನೂ ಫಿಸಿಯೋ ಪರೀಕ್ಷಿಸಿದ್ದಾರೆ. ಮೊಹಮ್ಮದ್ ಶಮಿಯ ವಿಷಯವೂ ಅದೇ ಆಗಿತ್ತು. ಕೋಚ್ ಪಾಸಿಟಿವ್ ಆದ ನಂತರ, ಇಡೀ ತಂಡದ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಲಾಯಿತು. ಆದರೆ ಪರೀಕ್ಷೆಯಲ್ಲಿ ಪಲಿತಾಂಶವು ನೆಗೆಟಿವ್ ಬಂದಿರುವುದು ಎಲ್ಲರಲ್ಲಿ ಸಮಾಧಾನ ತಂದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada