AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: ಟೀಂ ಇಂಡಿಯಾಗೆ ಧೋನಿ ಮೆಂಟರ್; ನೇಮಕ ಪ್ರಶ್ನಿಸಿ ಅಪೆಕ್ಸ್ ಕೌನ್ಸಿಲ್​ಗೆ ದೂರು

T20 World Cup: ಟಿ 20 ವಿಶ್ವಕಪ್‌ಗಾಗಿ ಭಾರತೀಯ ತಂಡದ ಮಾರ್ಗದರ್ಶಕರಾಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ನೇಮಕ ಮಾಡುವುದರ ವಿರುದ್ಧ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್‌ಗೆ ದೂರು ನೀಡಲಾಗಿದೆ.

T20 World Cup: ಟೀಂ ಇಂಡಿಯಾಗೆ ಧೋನಿ ಮೆಂಟರ್; ನೇಮಕ ಪ್ರಶ್ನಿಸಿ ಅಪೆಕ್ಸ್ ಕೌನ್ಸಿಲ್​ಗೆ ದೂರು
ಮಹೇಂದ್ರ ಸಿಂಗ್ ಧೋನಿ
TV9 Web
| Updated By: ಪೃಥ್ವಿಶಂಕರ|

Updated on: Sep 09, 2021 | 6:09 PM

Share

ಮಹೇಂದ್ರ ಸಿಂಗ್ ಧೋನಿ ಟಿ 20 ವಿಶ್ವಕಪ್​ಗಾಗಿ ಭಾರತ ತಂಡದ ಮಾರ್ಗದರ್ಶಕರಾಗಿರುವುದು ವಿವಾದಕ್ಕೆ ಒಳಗಾಗಿದೆ. ಅವರ ನೇಮಕಾತಿಯ ವಿರುದ್ಧ ದೂರು ನೀಡಲಾಗಿದೆ. ಟಿ 20 ವಿಶ್ವಕಪ್‌ಗಾಗಿ ಭಾರತೀಯ ತಂಡದ ಮಾರ್ಗದರ್ಶಕರಾಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ನೇಮಕ ಮಾಡುವುದರ ವಿರುದ್ಧ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್‌ಗೆ ದೂರು ನೀಡಲಾಗಿದೆ. ಇದರಲ್ಲಿ, ಹಿತಾಸಕ್ತಿ ಸಂಘರ್ಷದ ನಿಯಮಗಳನ್ನು ಲೋಧಾ ಸಮಿತಿಯ ಶಿಫಾರಸುಗಳಲ್ಲಿ ಉಲ್ಲೇಖಿಸಲಾಗಿದೆ. ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್‌ನ ಮಾಜಿ ಆಜೀವ ಸದಸ್ಯ ಸಂಜೀವ್ ಗುಪ್ತಾ ಅವರು ಅಪೆಕ್ಸ್ ಕೌನ್ಸಿಲ್ ಸದಸ್ಯರಿಗೆ ಪತ್ರವನ್ನು ಕಳುಹಿಸಿದ್ದಾರೆ. ಧೋನಿಯ ನೇಮಕಾತಿಯು ಒಬ್ಬ ವ್ಯಕ್ತಿ ಎರಡು ಹುದ್ದೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲದ ಹಿತಾಸಕ್ತಿ ಸಂಘರ್ಷದ ಉಲ್ಲಂಘನೆಯಾಗಿದೆ. ಆಟಗಾರರು ಮತ್ತು ನಿರ್ವಾಹಕರ ವಿರುದ್ಧ ಗುಪ್ತಾ ಈಗಾಗಲೇ ಹಿತಾಸಕ್ತಿ ಸಂಘರ್ಷದ ಹಲವಾರು ದೂರುಗಳನ್ನು ಸಲ್ಲಿಸಿದ್ದಾರೆ.

ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರೂ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ BCCI ಮೂಲಗಳು, ಹೌದು, ಗುಪ್ತಾ ಅವರು ಗಂಗೂಲಿ ಮತ್ತು ಜಯ್ ಶಾ ಅವರನ್ನು ಒಳಗೊಂಡ ಅಪೆಕ್ಸ್ ಕೌನ್ಸಿಲ್ ಸದಸ್ಯರಿಗೆ ಪತ್ರವನ್ನು ಕಳುಹಿಸಿದ್ದಾರೆ. ಅವರು ಬಿಸಿಸಿಐ ಸಂವಿಧಾನದ 38 (4) ನೇ ವಿಧಿಯನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಒಬ್ಬ ವ್ಯಕ್ತಿ ಎರಡು ವಿಭಿನ್ನ ಹುದ್ದೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಜೊತೆಗೆ ಅಪೆಕ್ಸ್ ಕೌನ್ಸಿಲ್ ಅದರ ಪರಿಣಾಮಗಳನ್ನು ಪರೀಕ್ಷಿಸಲು ತನ್ನ ಕಾನೂನು ತಂಡವನ್ನು ಸಂಪರ್ಕಿಸಬೇಕು ಎಂದು ದೂರು ನೀಡಿದ್ದಾರೆ.

ಧೋನಿ ಐಪಿಎಲ್ 2021 ಕ್ಕೆ ತಯಾರಿ ನಡೆಸುತ್ತಿದ್ದಾರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬುಧವಾರ ಟಿ 20 ವಿಶ್ವಕಪ್‌ಗಾಗಿ ಭಾರತೀಯ ತಂಡವನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಧೋನಿಯನ್ನು ಐಸಿಸಿ ಟೂರ್ನಮೆಂಟ್‌ಗೆ ತಂಡದ ಮಾರ್ಗದರ್ಶಕರಾಗಿ ನೇಮಿಸಲಾಯಿತು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧೋನಿ ನಾಯಕತ್ವದಲ್ಲಿ, ಭಾರತವು ಎರಡು ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದಿದೆ – 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟಿ 20 ವಿಶ್ವಕಪ್ ಮತ್ತು 2011 ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್. ಧೋನಿ ಪ್ರಸ್ತುತ ತಮ್ಮ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್​ನಲ್ಲಿದ್ದಾರೆ. ಸೆಪ್ಟೆಂಬರ್ 19 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಟಿ 20 ಲೀಗ್ ಅನ್ನು ಮರುಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ.

ಕಳೆದ ವರ್ಷ ಆಗಸ್ಟ್ 15 ರಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಧೋನಿ ನಿವೃತ್ತಿಯ ಘೋಷಣೆ ವಿಶ್ವ ಕ್ರಿಕೆಟ್ ಅನ್ನು ಆಶ್ಚರ್ಯಚಕಿತಗೊಳಿಸಿತು. ಅಂದಿನಿಂದ ಅವರು ಅದರ ಬಗ್ಗೆ ಒಮ್ಮೆಯೂ ಮಾತನಾಡಲಿಲ್ಲ. ಧೋನಿ 90 ಟೆಸ್ಟ್, 350 ಏಕದಿನ ಮತ್ತು 98 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕ್ರಮವಾಗಿ 4876, 10773 ಮತ್ತು 1617 ರನ್ ಗಳಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ನಂತರ, ಅವರು ತಮ್ಮ ವೈಯಕ್ತಿಕ ಬದ್ಧತೆಗಳಿಗೆ ಸೀಮಿತರಾಗಿದ್ದಾರೆ.