IND vs ENG: ಅಂತಿಮ ಟೆಸ್ಟ್ ಬೇಡವೆಂದರೆ ವಾಕ್ ಓವರ್ ಕೊಡಿ; ಆಂಗ್ಲರ ಪ್ರಸ್ತಾಪಕ್ಕೆ ಖಡಕ್ ಉತ್ತರ ಕೊಟ್ಟ ಕೊಹ್ಲಿ- ರೋಹಿತ್!
IND vs ENG: ಇಸಿಬಿಯ ಈ ಪ್ರಸ್ತಾಪಕ್ಕೆ ಕೊಹ್ಲಿ ಮತ್ತು ರೋಹಿತ್ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ನಾವು ಕೊರೊನಾ ಸೋಂಕಿನ ಆತಂಕದಲ್ಲಿ ಆಡಿದರೂ ಸಹ ಪಂದ್ಯವನ್ನು ಸೋತೆವೆಂದು ಒಪ್ಪಿಕೊಳ್ಳುವುದಿಲ್ಲ ಎಂಬ ಉತ್ತರ ನೀಡಿದ್ದಾರೆ ಎಂದು ವರದಿ ಹೇಳಿದೆ.
ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸುವ ಏಕೈಕ ಮಾರ್ಗವೆಂದರೆ ಭಾರತ ಸೋಲೊಪ್ಪಿಕ್ಕೊಳುವುದು ಎಂದು ಬಿಸಿಸಿಐಗೆ ಇಸಿಬಿ ತಿಳಿಸಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಇನ್ನೊಬ್ಬ ಭಾರತೀಯ ಸಹಾಯಕ ಸಿಬ್ಬಂದಿ ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದ ನಂತರ ಅಂತಿಮ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸುವ ನಿಮ್ಮ ಬೇಡಿಕೆಯನ್ನು ನಾವು ಒಪ್ಪಿಕೊಳ್ಳಬೇಕಾದರೆ ಇಂಗ್ಲೆಂಡಿಗೆ ವಾಕ್ ಓವರ್ ನೀಡಬೇಕಾಗುತ್ತದೆ ಎಂದು ಭಾರತೀಯ ಮಂಡಳಿಗೆ ಇಸಿಬಿ ತಿಳಿಸಿದೆ.
ಸೋತೆವೆಂದು ಒಪ್ಪಿಕೊಳ್ಳುವುದಿಲ್ಲ ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಪ್ರಸ್ತಾಪಕ್ಕೆ ಸ್ಪಷ್ಟವಾಗಿ ಇದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪಂದ್ಯದ ರದ್ದತಿಯ ಬಗ್ಗೆ ಇಸಿಬಿಯನ್ನು ಭೇಟಿ ಮಾಡಿದ್ದ ಬಿಸಿಸಿಐ ನಿಯೋಗವು ತಂಡದ ಇಬ್ಬರು ಹಿರಿಯ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಈ ವೇಳೆ ಇಸಿಬಿಯ ಈ ಪ್ರಸ್ತಾಪಕ್ಕೆ ಕೊಹ್ಲಿ ಮತ್ತು ರೋಹಿತ್ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ನಾವು ಕೊರೊನಾ ಸೋಂಕಿನ ಆತಂಕದಲ್ಲಿ ಆಡಿದರೂ ಸಹ ಪಂದ್ಯವನ್ನು ಸೋತೆವೆಂದು ಒಪ್ಪಿಕೊಳ್ಳುವುದಿಲ್ಲ ಎಂಬ ಉತ್ತರ ನೀಡಿದ್ದಾರೆ ಎಂದು ವರದಿ ಹೇಳಿದೆ. ಭಾರತ ಈಗಾಗಲೇ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ವಾಕ್ ಓವರ್ ನೀಡಿದರೆ ಸರಣಿಯು 2-2ರಿಂದ ಸಮಬಲಗೊಳ್ಳುತ್ತದೆ.
ಈ ಹಿಂದೆ ಭಾರತ ಕ್ರಿಕೆಟ್ ತಂಡದ ಜೂನಿಯರ್ ಫಿಸಿಯೋ ಯೋಗೀಶ್ ಪರ್ಮಾರ್ ಅವರು ಕೋವಿಡ್ -19 ಗೆ ತುತ್ತಾದರು. ಶುಕ್ರವಾರದಿಂದ ನಿಗದಿಯಾಗಿದ್ದ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಮುಂದುವರಿಯುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತವಾಗಿಲ್ಲ. ಮುಖ್ಯ ತರಬೇತುದಾರ ರವಿಶಾಸ್ತ್ರಿ ಮತ್ತು ಬೌಲಿಂಗ್ ತರಬೇತುದಾರ ಭರತ್ ಅರುಣ್ ನಂತರ, ಸಹಾಯಕ ಸಿಬ್ಬಂದಿಯ ಇನ್ನೊಬ್ಬ ಸದಸ್ಯರು ಕೊರೊನಾಗೆ ತುತ್ತಾದ ಬಳಿಕ ತಂಡವು ಗುರುವಾರ ತನ್ನ ಅಭ್ಯಾಸದ ಅವಧಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿತು. ಈ ಸಮಯದಲ್ಲಿ ಪಂದ್ಯ ನಡೆಯುತ್ತದೆಯೇ ಎಂದು ನಮಗೆ ಗೊತ್ತಿಲ್ಲ. ಎಂದು ಕೋಲ್ಕತ್ತಾದಲ್ಲಿ ನಡೆದ ಮಿಷನ್ ಡೊಮಿನೇಷನ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗಂಗೂಲಿ ಹೇಳಿದರು.
Published On - 9:27 pm, Thu, 9 September 21