Ind vs Eng 5th Test: ಕ್ರಿಕೆಟ್ ಅಭಿಮಾನಿಗಳಿಗೆ ಶುಭ ಸುದ್ದಿ; ಭಾರತದ ಆಟಗಾರರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್

ಭಾರತ ತಂಡದ ಎಲ್ಲಾ ಆಟಗಾರರ ಕೊರೊನಾ ಟೆಸ್ಟ್ ವರದಿ ಬಂದಿದ್ದು, ನೆಗೆಟಿವ್ ಫಲಿತಾಂಶ ಬಂದಿದೆ. ಅದಾಗ್ಯೂ ಟೆಸ್ಟ್ ಪಂದ್ಯ ನಡೆಯುವ ಬಗ್ಗೆ ಅಥವಾ ಮೊಟಕುಗೊಳಿಸುವ ಬಗ್ಗೆ ಕ್ರಿಕೆಟ್ ಮಂಡಳಿಗಳು ಅಧಿಕೃತ ಆದೇಶ ಹೊರಡಿಸಿಲ್ಲ.

Ind vs Eng 5th Test: ಕ್ರಿಕೆಟ್ ಅಭಿಮಾನಿಗಳಿಗೆ ಶುಭ ಸುದ್ದಿ; ಭಾರತದ ಆಟಗಾರರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್
ಟೀಂ ಇಂಡಿಯಾ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: shivaprasad.hs

Updated on: Sep 10, 2021 | 11:00 AM

ಕೊರೊನಾ ಆತಂಕದಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯಕ್ಕೆ ಕವಿದಿದ್ದ ಆತಂಕದ ಕಾರ್ಮೋಡ ಸರಿದಿದೆ. ಭಾರತ ತಂಡದ ಎಲ್ಲಾ ಸದಸ್ಯರ ಕೊರೊನಾ ಟೆಸ್ಟ್​ನ ವರದಿ ನೆಗೆಟಿವ್ ಬಂದಿದ್ದು, ಪಂದ್ಯ ನಿಗದಿಯಂತೆ ನಡೆಯಲಿದೆ ಎನ್ನಲಾಗಿದೆ. ಭಾರತ ತಂಡದ ಫಿಸಿಯೊ ಕೊರೊನಾ ಪಾಸಿಟಿವ್ ಆಗಿದ್ದ ಕಾರಣ, ನಿನ್ನೆ (ಸೆಪ್ಟೆಂಬರ್ 09) ಭಾರತ ತಂಡ ಅಭ್ಯಾಸದಿಂದ ಮರಳಿತ್ತು. ಹಾಗೂ ತಂಡದ ಎಲ್ಲಾ ಸದಸ್ಯರನ್ನು ಆರ್​ಟಿ- ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಫಲಿತಾಂಶ ಬಂದಿದ್ದು, ಎಲ್ಲರ ಸಮಾಧಾನಕ್ಕೆ ಕಾರಣವಾಗಿದೆ.

ಯೋಗೇಶ್ ಪಾರ್ಮಾರ್ ಅವರಿಗೆ ಪಾಸಿಟಿವ್ ಬಂದಾಗ, ಭಾರತ ತಂಡದ ಸದಸ್ಯರು ಅಭ್ಯಾಸವನ್ನು ಕೊನೆಗೊಳಿಸಿ, ರೂಮ್​ಗಳಲ್ಲಿ ಕ್ವಾರಂಟೈನ್ ಆಗಿದ್ದರು. ಇದೀಗ ವರದಿ ನೆಗೆಟಿವ್ ಬಂದಿರುವುದರಿಂದ ಇಂದಿನ ಟೆಸ್ಟ್ ನಿಗದಿಯಂತೆಯೇ ನಡೆಯಲಿದೆ. ಪಂದ್ಯ ಮುಗಿಯುವವರೆಗೆ ಭಾರತ ತಂಡವು ಮ್ಯಾಮಚೆಸ್ಟರ್​ನ ಹೊಟೆಲ್​ನಲ್ಲಿ ಬಯೋ ಬಬಲ್​ನಲ್ಲಿ ಇರಲಿದೆ ಎಂದು ಇಸಿಬಿಯ ಮೂಲಗಳು ತಿಳಿಸಿವೆ.

ಕಳೆದ ಕೆಲವು ದಿನಗಳ ಹಿಂದೆ (ಸೆಪ್ಟೆಂಬರ್ 05) ಭಾರತ ತಂಡದ ಪ್ರಧಾನ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಆದ್ದರಿಂದ ಅವರನ್ನು ತಂಡದಿಂದ ಪ್ರತ್ಯೇಕಿಸಲಾಗಿತ್ತು. ಭಾರತ ತಂಡದ ಕೋಚಿಂಗ್ ಸ್ಟಾಫ್​ನಲ್ಲಿ ಹಲವರು ಸೋಂಕಿಗೆ ತುತ್ತಾಗಿರುವುದರಿಂದ ಸೀಮಿತ ತರಬೇತುದಾರರೊಂದಿಗೆ ಭಾರತ ತಂಡ ಮ್ಯಾಂಚೆಸ್ಟರ್​ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಾಡಬೇಕಿದೆ.

ಐಪಿಎಲ್ ಕಾರಣದಿಂದ ಇನ್ನೂ ಸಂಪೂರ್ಣ ಸರಿದಿಲ್ಲ ಆತಂಕದ ಕಾರ್ಮೋಡ:

ಇನ್ನೊಂದು ಮೂಲದ ಪ್ರಕಾರ, ಭಾರತ ತಂಡವು ಟೆಸ್ಟ್​ನಲ್ಲಿ ಭಾಗವಹಿಸಲು ಆಟಗಾರರು ಆತಂಕಿತರಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣ, 5ನೇ ಟೆಸ್ಟ್ ಮುಗಿಸಿದ ತಕ್ಷಣ ಭಾರತ ತಂಡ ಯುಎಇಗೆ ತೆರಳಿ ಐಪಿಎಲ್​ನಲ್ಲಿ ಭಾಗವಹಿಸಬೇಕಿತ್ತು. ಕೊರೊನಾ ಪಾಸಿಟಿವ್ ಬಂದ ಫಿಸಿಯೊ ಯೋಗೇಶ್ ಅವರೊಂದಿಗೆ ಹಲವು ಆಟಗಾರರು ಹತ್ತಿರದ ಸಂಪರ್ಕದಲ್ಲಿದ್ದ ಕಾರಣ, ಅವರು ಟೆಸ್ಟ್ ಆಡಲು ಇನ್ನೂ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.

ಆದ್ದರಿಂದಲೇ ಭಾರತದ ಆಟಗಾರರು ಕೊರೊನಾ ನೆಗೆಟಿವ್ ಆದರೂ ಕೂಡ ಇನ್ನೂ, ಎರಡೂ ಕ್ರಿಕೆಟ್ ಮಂಡಳಿಗಳಿಂದ ಟೆಸ್ಟ್ ಕುರಿತು ಅಧಿಕೃತ ಮಾಹಿತಿ ಬಂದಿಲ್ಲ.

ಇದನ್ನೂ ಓದಿ:

T20 World cup: ಭಾರತ ಟಿ-20 ವಿಶ್ವಕಪ್ ತಂಡದಲ್ಲಿ ಬದಲಾವಣೆ ಸಾಧ್ಯತೆ: ಆ ಒಂದು ಕ್ಷಣಕ್ಕೆ ಕಾದು ಕುಳಿತಿದೆ ಬಿಸಿಸಿಐ

India vs England: ಐದನೇ ಟೆಸ್ಟ್​ಗೂ ಮುನ್ನ ಭಾರತಕ್ಕೆ ಒಂದು ಗುಡ್ ನ್ಯೂಸ್, ಎರಡು ಬ್ಯಾಡ್ ನ್ಯೂಸ್: ಏನದು?

(Indian team members RTPCR report is negative and Manchester test will likely play)

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ